ಬೆಂಗಳೂರು –
ಶಿಕ್ಷಕರ ದಿನಾಚರಣೆ ದಿನದಂದು ಕರ್ನಾಟಕ ರಾಜ್ಯ ನೌಕರ ಸಂಘದ ರಾಜ್ಯಾಧ್ಯಕ್ಷರಾದ ಷಡಕ್ಷರಿಯವರು ವರ್ಗಾವಣೆ ಅಪೇಕ್ಷಿತ ಶಿಕ್ಷಕರ ವೆಬಿನಾರ್ ವೇದಿಕೆ ಯಲ್ಲಿ ಮಾತನಾಡಿ ವರ್ಗಾವಣೆಯಿಲ್ಲದೆ ಹತ್ತು ಹದಿನೈದು ಇಪ್ಪತ್ತು ವರ್ಷಗಳ ಸೇವೆ ಸಲ್ಲಿಸಿರುವ ಶಿಕ್ಷಕರಿಗೆ ಅವರ ಸ್ವಂತ ಜಿಲ್ಲೆಗೆ ಅಥವಾ ಬೇಯಿಸಿದ ಜಿಲ್ಲೆಗೆ ವರ್ಗಾವಣೆ ನೀಡಲು ಸರಕಾರದ ಮಟ್ಟದಲ್ಲಿ ಪ್ರಯತ್ನ ಮಾಡುವುದಾಗಿ ಹೇಳಿದ್ದಾರೆ. ಕಲ್ಯಾಣ ಕರ್ನಾಟಕದಲ್ಲಿ ಶಾಲೆಗಳು ಮುಚ್ಚುತ್ತಿವೆ ಶಿಕ್ಷಕರು ಖಾಲಿ ಆಗುವರು ಅನ್ನುವ ಅಭಿಪ್ರಾಯ ತಪ್ಪು ಯಾಕೆಂದರೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಒಳಗೆ ಸಾಕಷ್ಟು ಶಿಕ್ಷಕರು ವರ್ಗಾವಣೆ ಆಗುತ್ತಾರೆ ಯಾವ ಸಮಸ್ಯೆ ಉದ್ಭವಿಸುವುದಿಲ್ಲ ಈಗಾಗಲೇ ನಾವು ಸಾಫ್ಟ್ ವೇರ್ ಲಿಂಕ್ ನ್ನು ತುಂಬಲು ಶಿಕ್ಷಕರಿಗೆ ನೀಡಲಾಗಿದ್ದು ಸುಮಾರು 4 ಸಾವಿರ ಶಿಕ್ಷಕರು ಸಂಪೂರ್ಣ ಮಾಹಿತಿ ನೀಡಿದ್ದಾರೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಶಿಕ್ಷಕರು ವಿವರ ನೀಡಲು ತಿಳಿಸಿದ್ದಾರೆ ಎಂದರು
ಶಿಕ್ಷಕರ ಪರ ಶಿಕ್ಷಕರ ಸಮಸ್ಯೆಗಳಿಗೆ ಬೇಡಿಕೆಗಳಿಗೆ ಸರ್ಕಾರಿ ನೌಕರರ ಸಂಘ ಬೆಂಬಲವಾಗಿ ನಿಂತು ಸರ್ಕಾರ ಮಟ್ಟದಲ್ಲಿ ಶಿಕ್ಷಕರ ಸಮಸ್ಯೆ ಬೇಡಿಕೆಗಳನ್ನು ಪರಿಹರಿಸಲು ಕಂಕಣಬದ್ಧವಾಗಿದೆ ಒಂದು ವೇಳೆ ಶಿಕ್ಷಕರ ಸಮಸ್ಯೆಗಳು ಪರಿಹಾರ ಸಿಗದಿದ್ದರೆ ಹೋರಾಟ ಮಾಡಲು ಸಿದ್ಧ ಎಂದು ವೆಬಿನಾರ್ ವೇದಿಕೆಯಲ್ಲಿ ಹೇಳಿದರು ಸಾವಿರಾರು ಶಿಕ್ಷಕರು ವೆಬಿನಾರ್ ವೇದಿಕೆಯಲ್ಲಿ ಭಾಗವಹಿಸಿದ್ದು ಅದರಲ್ಲಿ ಶಿವಕುಮಾರ್ ಕಟ್ಟಿಮನಿ,ಪವಾಡೆಪ್ಪ ರಘುನಂದನ್ ಮಹಾಂತೇಶ ಬಿರಾದಾರ, ಲತಾ ಮುಳ್ಳೂರ ಅರ್ಚನಾ, ಶಿಕ್ಷಕರು ಶಿವಕುಮಾರ್ ಕೆ ಇನ್ನೂ ಹಲವಾರು ಶಿಕ್ಷಕರು ತಮ್ಮ ಸಮಸ್ಯೆಯನ್ನು ಹೇಳಿ ಕೊಂಡರು