ಬೆಂಗಳೂರು –
ಕರ್ನಾಟಕ ರಾಜ್ಯ ಸರ್ಕಾರಿ ವಿಮಾ ಇಲಾಖೆ (KGID) ಯನ್ನು ಸಂಪೂರ್ಣ ಗಣಕೀಕರಣಗೊಳಿಸುವ ಕಾರ್ಯ ವನ್ನು ಶೀಘ್ರ ಪೂರ್ಣಗೊಳಿಸಿ,ಆನ್ ಲೈನ್ ಮೂಲಕ ಸಾಲ,ಬೋನಸ್,ಹೊಸ ಪಾಲಿಸಿ ವಿತರಣೆ ಹಾಗೂ ಅಂತಿಮ ಕ್ಲೈಮ್ ಗಳನ್ನು ಪಾವತಿಸುವ ವಿಧಾನವನ್ನು ಜಾರಿಗೊಳಿಸುವ ಕುರಿತಂತೆ ಮಾರ್ಚ್-16 ರಂದು ಖಜಾನೆ ಆಯುಕ್ತರು ಹಾಗೂ ಗಣಕೀಕರಣದ ನೋಡಲ್ ಅಧಿಕಾರಿಗಳಾದ ಉಜ್ವಲ್ ಕುಮಾರ್ ಘೋಷ್ ಇವರ ನೇತೃತ್ವದಲ್ಲಿ ಸಭೆ ಏರ್ಪಡಿಸಲಾಗಿತ್ತು.
e-governance ಇಲಾಖೆಯ ಕಾರ್ಯದರ್ಶಿ ಹಾಗೂ ಮಾನ್ಯ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳಾದ ಪೊನ್ನುರಾಜ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಅವರು KGID ಇಲಾಖೆಯ ಗಣಕೀಕರಣ ಕಾರ್ಯಕ್ಕೆ ಪೂರಕವಾಗಿ CSG ಸಂಸ್ಥೆಯವರು ಸಾಫ್ಟ್ ವೇರ್ ಅಭಿವೃದ್ಧಿಪಡಿಸುವ ಕೆಲಸ ವನ್ನು ಪೂರ್ಣಗೊಳಿಸುವ ಮೂಲಕ ಸರ್ಕಾರಿ ನೌಕರರಿಗೆ ಇಲಾಖಾ ವತಿಯಿಂದ ದೊರಕಬೇಕಾದ ಸವಲತ್ತುಗಳನ್ನು ಕಾಲಮಿತಿಯೊಳಗೆ ಒದಗಿಸಬೇಕೆಂದು ಮನವಿ ಮಾಡಿ ದರು.ಇದೇ ವೇಳೆ ಏಪ್ರಿಲ್ ಅಂತ್ಯಕ್ಕೆ ಕೆಜಿಐಡಿ ಇಲಾಖೆ ಯನ್ನು ಸಂಪೂರ್ಣ ಗಣಕೀಕರಣ ಮಾಡುವ ಮೂಲಕ ಮೇ ಮೊದಲನೇ ವಾರದಲ್ಲಿ ಬೋನಸ್ ಸಾಲ, ಹೊಸ ಪಾಲಿಸಿಗಳ ವಿತರಣೆ ಹಾಗೂ ಅಂತಿಮ ಕ್ಲೇಮುಗಳನ್ನು ಆನ್ ಲೈನ್ ಮೂಲಕ ಇತ್ಯರ್ಥಪಡಿಸಲು ಬೇಕಾದ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗುವುದೆಂಬ ನಿರ್ಣಯವನ್ನು ಸಭೆಯಲ್ಲಿ ತೀರ್ಮಾನಿಸಲಾಯಿತು.ಇದರೊಂದಿಗೆ ಶೀಘ್ರ ದಲ್ಲೇ ಮತ್ತೊಂದು ಬೇಡಿಕೆ ಈಡೇರುವ ಭರವಸೆ ರಾಜ್ಯದ ಸರ್ಕಾರಿ ನೌಕರರಿಗೆ ಸಿಕ್ಕಿದೆ.