CM ಅವರನ್ನು ಭೇಟಿಯಾದ ಷಡಾಕ್ಷರಿಯರು – ಬಜೆಟ್ ನಲ್ಲಿ ರಾಜ್ಯದ ಸಮಸ್ತ ನೌಕರರ ಬೇಡಿಕೆಗಳ ಕುರಿತು ಬೇಡಿಕೆ…..

Suddi Sante Desk
CM ಅವರನ್ನು ಭೇಟಿಯಾದ ಷಡಾಕ್ಷರಿಯರು – ಬಜೆಟ್ ನಲ್ಲಿ ರಾಜ್ಯದ ಸಮಸ್ತ ನೌಕರರ ಬೇಡಿಕೆಗಳ ಕುರಿತು ಬೇಡಿಕೆ…..

ಬೆಂಗಳೂರು

ರಾಜ್ಯ ಬಜೆಟ್ ನಲ್ಲಿ ರಾಜ್ಯದ ಸರ್ಕಾರಿ ನೌಕರರ ಬೇಡಿಕೆ ಗಳ ಕುರಿತು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಯಾದರು.ರಾಜ್ಯಾಧ್ಯಕ್ಷರಾದ ಸಿ.ಎಸ್ ಷಡಾಕ್ಷರಿಯವರು ಆಯವ್ಯ ಯದ ಪೂರ್ವಭಾವಿಯಾಗಿ ಸನ್ಮಾನ್ಯ ಮುಖ್ಯಮಂತ್ರಿಗಳಾದ  ಸಿದ್ದರಾಮಯ್ಯನರವರನ್ನು ಭೇಟಿ ಮಾಡಿ ಈ ವರ್ಷದ ಆಯವ್ಯಯದಲ್ಲಿ ಈ ಕೆಳಕಂಡ ರಾಜ್ಯದ ಸರ್ಕಾರಿ ನೌಕರರ ಬೇಡಿಕೆಗಳನ್ನು ಈಡೇರಿಸಲು ಮನವಿ ಸಲ್ಲಿಸಿದರು

NPS ರದ್ದುಗೊಳಿಸಿ OPS ಜಾರಿಗೊಳಿಸುವ ಕುರಿತು ಮಿಲಿಟರಿ ಕ್ಯಾಂಟೀನ್ ಮಾದರಿಯಲ್ಲಿ ಸರ್ಕಾರಿ ನೌಕರರು ನಿವೃತ್ತ ನೌಕರರು ಹಾಗೂ ಇತರೆ ಸಂಸ್ಥೆಗಳ ನೌಕರರು ಹಾಗೂ ಕುಟುಂಬದವರಿಗೆ MSIL ಸಂಸ್ಥೆಯ ಮೂಲಕ ಪ್ರತಿ ಜಿಲ್ಲೆಗಳಲ್ಲಿ ನೌಕರರ ಕ್ಯಾಂಟೀನ್ ಪ್ರಾರಂಭಿಸುವ ಬಗ್ಗೆ

ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮಹಿಸುವುವ ಭರವಸೆ ನೀಡಿದರು ಸರ್ಕಾರಿ ನೌಕರರ ಕರ್ತವ್ಯದ ವೇಳೆಯಲ್ಲಿ ಸಾರ್ವಜನಿಕರಿಂದ ನಡೆಯುವ ಹಲ್ಲೆ, ದೌರ್ಜನ್ಯ, ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಕಿರುಕುಳ ನೀಡುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲು ಮನವಿ ಮಾಡಲಾಯಿತು, ಈ ಸಂಬಂಧ ಮಾನ್ಯ ಮುಖ್ಯಮಂತ್ರಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಶೀಘ್ರವಾಗಿ ಸಚಿವ ಸಂಪುಟದ ಮುಂದೆ ಕಡತ ಮಂಡಿಸುವಂತೆ ಸೂಚಿಸಿದರು.

ಈ ಸಂದರ್ಭದಲ್ಲಿ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ರಾದ ಎಲ್. ಭೈರಪ್ಪ ರವರು, ರಾಜ್ಯ ಸರ್ಕಾರಿ ನೌಕರರ ಸಂಘದ ಗೌರವ್ಯಾಧ್ಯಕ್ಷರಾದ  ಎಸ್.ಬಸವರಾಜ್ ರವರು, ಉಪಾಧ್ಯಕ್ಷರಾದ ಸೋಮಶೇಖರ್ ರವರು, ಸದಾನಂದರವರು, ಹರ್ಷರವರು ರವರು, ರಾಘವೇಂದ್ರ ರವರು ಉಪಸ್ಥಿತರಿದ್ದರು

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.