ಬೆಂಗಳೂರು –
ಸರ್ಕಾರಿ ನೌಕರರಿಗೆ ಕೊನೆಗೂ ರಾಜ್ಯ ಸರ್ಕಾರ ಹಬ್ಬದ ಮುಂಗಡ ಹಣವನ್ನು ಬಿಡುಗಡೆ ಮಾಡಿ ಖಾತೆಗೆ ಜಮೆ ಯನ್ನು ಮಾಡಿದೆ.ಹೌದು ರಾಜ್ಯದ ಸರ್ಕಾರಿ ನೌಕರರ ಪರವಾಗಿ ನೌಕರರ ಧ್ವನಿಯಾಗಿ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಹಬ್ಬದ ಮುಂಗಡ ಹಣವನ್ನು ಬಿಡುಗಡೆ ಮಾಡುವಂತೆ ಹಾಗೇ 25000₹ ನ್ನು ನೀಡುವಂತೆ ಒತ್ತಾಯ ಮಾಡಿದ್ದರು.ಹೀಗಾಗಿ ಕೊನೆಗೂ ರಾಜ್ಯ ಸರ್ಕಾರ ಈಗ ನೌಕರರಿಗೆ ಹಬ್ಬದ ಮುಂಗಡ ಹಣವನ್ನು ನೀಡಿದೆ

ಹೌದು ಈ ಒಂದು ವಿಚಾರವನ್ನು ಸ್ವತಃ ರಾಜ್ಯಾಧ್ಯಕ್ಷ ಷಡಕ್ಷಾರಿ ಅವರು ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೊಂಡಿದ್ದಾರೆ.ಜಮೆಯಾಗಿರುವ ದಾಖಲೆ ಯೊಂದಿಗೆ ಮಾಹಿತಿಯನ್ನು ಹಂಚಿಕೊಂಡಿದ್ದು ನಾನೊಬ್ಬ ಸರ್ಕಾರಿ ನೌಕರರನಾಗಿದ್ದು ಹಬ್ಬದ ಮುಂಗಡ ಹಣವನ್ನು ತಗೆದುಕೊಂಡ ಸಂತೋಷ ನನಗಿದೆ ಎಂದಿದ್ದಾರೆ

ಇನ್ನೂ ಹಣವನ್ನು ನೀಡಿದ ರಾಜ್ಯ ಸರ್ಕಾರಕ್ಕೆ ಸಂಘದ ಪರವಾಗಿ ಧನ್ಯವಾದಗಳನ್ನು ಹೇಳಿದ್ದಾರೆ