ಹೊನ್ನಾಳಿ –
ಸರ್ಕಾರಿ ನೌಕರರು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡೋಣ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.ಹೊನ್ನಾಳಿ ಸರ್ಕಾರಿ ನೌಕರರ ಭವನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿ ದ ಅವರು.ರಾಜ್ಯದಲ್ಲಿ 2.60 ಲಕ್ಷ ಹುದ್ದೆಗಳು ಖಾಲಿ ಇವೆ. ಇವರ ಕೆಲಸವನ್ನು ಈಗ ಹಾಲಿ ಇರುವ ಸರ್ಕಾರಿ ನೌಕರರೇ ಒತ್ತಡದಲ್ಲಿ ಮಾಡುತ್ತಿದ್ದಾರೆ.ಅಷ್ಟು ವೇತನ ಸರ್ಕಾರಕ್ಕೆ ಉಳಿತಾಯವಾಗುತ್ತಿದೆ.ರಾಜ್ಯ ಸರ್ಕಾರ ಕೇಂದ್ರದ ಮಾದರಿ ಯಲ್ಲಿ ವೇತನ ಕೊಡಬೇಕೆಂದು ಒತ್ತಾಯಿಸಿದರು
ರಾಜ್ಯ ಸರ್ಕಾರಿ ನೌಕರರು ರಾಷ್ಟ್ರೀಯ ವಿಪತ್ತು ಸಂಭವಿಸಿ ದಾಗ ಮೊದಲು ಸರ್ಕಾರದ ನೆರವಿಗೆ ಕೋಟಿಗಟ್ಟಲೇ ಹಣ ನೀಡುವ ಮೂಲಕ ಸ್ಪಂದಿಸಿದ್ದೇವೆ.ಸರ್ಕಾರಿ ನೌಕರರಿಗೆ ಜನವರಿ ತಿಂಗಳಿನಿಂದ ನಗದು ರಹಿತ ಯೋಜನೆ ಜಾರಿಗೆ ಬರಲಿದೆ.ಕೆಜಿಐಡಿ ಸಾಲಕ್ಕೆ ಅರ್ಜಿ ಹಾಕಿದ ಒಂದು ವಾರದ ಲ್ಲಿ ಅವರ ಖಾತೆಗೆ ಬಡ್ಡಿ ರಹಿತ ಸಾಲ ಜಮಾ ಆಗಲಿದೆ. ಅದನ್ನು ₹ 25 ಸಾವಿರಕ್ಕೆ ಹೆಚ್ಚಿಸಲಾಗಿದೆ ಎಂದರು. ದಾವಣಗೆರೆಯಲ್ಲಿ ರಾಜ್ಯಮಟ್ಟದ ನೌಕರರ ಕ್ರೀಡಾಕೂಟ ಹಮ್ಮಿಕೊಂಡಿದ್ದು ಅದು ಯಶಸ್ವಿಯಾಗಿದೆ. ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವಂತೆ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಫಾಲಾಕ್ಷಿ, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಕುಮಾರ್,ತಹಶೀಲ್ದಾರ್ ಬಸನಗೌಡ ಕೋಟೂರ, ಬಿಇಒ ರಾಜೀವ್,ಸಂಘದ ಗೌರವಾಧ್ಯಕ್ಷ ಮುರುಗೇಶಪ್ಪ,ತಾಲ್ಲೂಕು ಸಾವಿತ್ರಿಬಾಯಿ ಪುಲೆ ಸಂಘದ ಅಧ್ಯಕ್ಷೆ ಷಹಜಾನ್,ಸಂಘದ ಕಾರ್ಯದರ್ಶಿ ಮಂಜುನಾಥ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರನಾಯ್ಕ ನಿರೂಪಿಸಿದರು.ಕೋಟ್ಯಪ್ಪ, ರವಿಕುಮಾ ರ್ ವಂದಿಸಿದರು.