ಬೆಂಗಳೂರು –
ವರ್ಗಾವಣೆ ವಿಚಾರ ಕುರಿತಂತೆ ರಾಜ್ಯ ವೇಬಿನಾರ್ ವೇದಿಕೆ ಯವರು ಇಂದು 105 ನೇ ವೆಬಿನಾರ್ ಸಭೆಯನ್ನು ಆಯೋಜನೆ ಮಾಡಿತ್ತು.ಈ ಒಂದು ಮಹತ್ವದ ಇಂದಿನ ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಷಡಾಕ್ಷರಿ ಅವರು ಪಾಲ್ಗೊಂಡು ವರ್ಗಾವಣೆ ವಂಚಿತಗೊಂಡಿರುವ ನಾಡಿನ ಶಿಕ್ಷಕರೊಂದಿಗೆ ಶಿಕ್ಷಕರ ಸಮಸ್ಯೆ ಅದರಲ್ಲೂ ಪ್ರಮುಖವಾಗಿ ಸ್ವಂತ ಜಿಲ್ಲೆಗ ವರ್ಗಾವಣೆ ಕುರಿತಂತೆ ಗಂಭೀರವಾಗಿ ಚರ್ಚೆ ಚಿಂತನ ಮಂಥನ ನಡೆಯಿತು.
ಈ ಒಂದು ವಿಚಾರ ಕುರಿತಂತೆ ಷಡಾಕ್ಷರಿ ಅವರು ಮಾತನಾಡಿ ಶಿಕ್ಷಕ ಬಂಧುಗಳೇ ವರ್ಗಾವಣೆ ವಿಚಾರ ಸೇರಿದಂತೆ ನಿಮ್ಮ ಯಾವುದೇ ಸಮಸ್ಯೆಗಳ ಕುರಿತಂತೆ ನಮ್ಮ ಮೇಲೆ ವಿಶ್ವಾಸವಿಡಿ ನಿಮ್ಮ ಹಿತ ಕಾಪಾಡೊದು ನಮ್ಮ ಜವಾಬ್ದಾರಿ ನಮ್ಮ ಮೇಲೆ ಅದೇಲ್ಲ ಇದೆ,ನಿಮಗೆ ಒಟಿಎಸ್ ವರ್ಗಾವಣೆ ವಿಚಾರದಲ್ಲಿ ನೀವು ಅಂದುಕೊಂ ಡಂತೆ ಅದೇ ವ್ಯವಸ್ಥೆಯಲ್ಲಿ ನಿಮ್ಮ ಜಿಲ್ಲೆಗೆ ಕಳಿಸಲು ಏನು ಬೇಕು ಅದನ್ನು ನಾವು ಮಾಡುತ್ತೇವೆ
ಅದು ನಮ್ಮ ಜವಾಬ್ದಾರಿ ಇದೆ ಎಂದರು.ಇನ್ನೂ ಈ ಒಂದು ವಿಚಾರದಲ್ಲಿ ಕನಸಿನ ಪೂರಕವಾಗಿ ಶೀಘ್ರದಲ್ಲೇ ಇದಕ್ಕೆ ರೂಪರೇಷೆಯನ್ನು ಮಾಡುತ್ತೇವೆ ಇವತ್ತು ಶಿಕ್ಷಣ ಸಚಿವ ರನ್ನು ಭೇಟಿಯಾಗಬೇಕಾಗಿತ್ತು ಆದರೆ ಅವರಿಗೆ ಕರೋನಾ ಪಾಸಿಟಿವ್ ಕಾಣಿಸಿಕೊಂಡ ಹಿನ್ನಲೆಯಲ್ಲಿ ಸಾಧ್ಯವಾಗಿಲ್ಲ ಹೀಗಾಗಿ ಕ್ವಾರಂಟೈನ್ ಮುಗಿದ ಕೂಡಲೇ ಈ ಕುರಿತಂತೆ ಅವರನ್ನು ಭೇಟಿಯಾಗಿ ಪ್ರಮುಖವಾಗಿ ಸಧ್ಯ ಒಟಿಎಸ್ ಕುರಿತಂತೆ ಹಾಗೇ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಪರಿಹಾರ ಕಲ್ಬಿಸುತ್ತೇವೆ
ಅದರಲ್ಲಿ ಯಾವುದೇ ಭಯ ಬೇಡ ಎನ್ನುತ್ತಾ ಈ ಒಂದು ವೆಬಿನಾರ್ ಮೂಲಕ ನಾಡಿನ ಶಿಕ್ಷಕರಿಗೆ ಸಂತೋಷದ ಸಂದೇಶವನ್ನು ನೀಡಿ ನಿಮ್ಮೊಂದಿಗೆ ನಾವಿದ್ದೇವೆ ಎಂದು ಹೊಸ ವರ್ಷದ ಶುಭಾಶಯಗಳನ್ನು ನಾಡಿನ ಶಿಕ್ಷಕರಿಗೆ ಕೋರಿ ಮಾತುಗಳನ್ನು ಮುಗಿಸಿದರು.ಇನ್ನೂ ರಾಜ್ಯದ ಶಿಕ್ಷಕರ ಪರವಾಗಿ ಷಡಕ್ಷಾರಿ ಅವರಿಗೆ ಧನ್ಯವಾದಗಳನ್ನು ಹೇಳಲಾಯಿತು