ಬೆಂಗಳೂರು –
ಈ ಬಾರಿ 7ನೇ ವೇತನ ಆಯೋಗದಲ್ಲಿ ರಾಜ್ಯದ ಸರ್ಕಾರಿ ನೌಕರರಿಗೆ ಗರಿಷ್ಠ ಪ್ರಮಾಣದಲ್ಲಿ ಸೌಲಭ್ಯಗಳನ್ನು ಪಡೆಯಲು ಆದ್ಯತೆಯನ್ನು ನೀಡಲಾಗುತ್ತಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಹೇಳಿದರು.ಬೆಂಗಳೂರಿನಲ್ಲಿ ಮಾತನಾಡಿದ ಅವರು ಈ ಕುರಿತಂತೆ ಈಗಾಗಲೇ ರಾಜ್ಯ ಸರ್ಕಾರದ ಮೂಲಕ ಸಮಿತಿಗೆ ಒತ್ತಾಯವನ್ನು ಮಾಡಲಾಗಿದೆ ಎಂದರು.
ಈಗಷ್ಟೇ ಸಮಿತಿ ರಚನೆಗೊಂಡಿದ್ದು ಕೆಲಸ ಕಾರ್ಯಕ್ಕೆ ಕಚೇರಿ ಯನ್ನು ನೀಡಿ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಕೂಡಾ ನೀಡಲಾಗಿದ್ದು ಎರಡು ಮೂರು ದಿನ ಗಳಲ್ಲಿ ಸಮಿತಿ ಕಾರ್ಯವನ್ನು ಆರಂಭ ಮಾಡಲಿದ್ದು ಹೀಗಾಗಿ ಮೊದಲು ವರದಿ ಯಲ್ಲಿ ರಾಜ್ಯದ ಸರ್ಕಾರಿನ ನೌಕರರಿಗೆ ಗರಿಷ್ಠ ಪ್ರಮಾಣದಲ್ಲಿ ಸೌಲಭ್ಯಗಳನ್ನು ಉಲ್ಲೇಖವನ್ನು ಮಾಡುವಂತೆ ಒತ್ತಾಯ ಮಾಡಲಾಗಿದೆ ಎಂದರು.
ಈಗಾಗಲೇ ರಾಜ್ಯದ ಸಮಸ್ತ ಸರ್ಕಾರಿ ನೌಕರರ ವೇತನ ಭತ್ಯೆಗಳ ಪರಿಷ್ಕರಣಿಗಾಗಿ 7ನೇ ವೇತನ ಆಯೋಗವನ್ನು ರಚಿಸಲಾಗಿದೆ.ಹೀಗಾಗಿ ಸಧ್ಯ ರಾಜ್ಯ ಸರ್ಕಾರ ಸಚಿಸಿರುವ 7ನೇ ವೇತನ ಆಯೋಗದ ಸವಲತ್ತುಗಳನ್ನು ಗರಿಷ್ಠ ಮಟ್ಟದಲ್ಲಿ ಪಡೆಯಲು ಆದ್ಯತೆ ನೀಡುವಂತೆ ಒತ್ತಾಯವನ್ನು ಮಾಡಲಾಗಿದ್ದು ಹೀಗಾಗಿ ಸಮಿತಿಯು ಏನೇನು ಪರಿಗಣಿಸುತ್ತದೆ ಎಂಬೊದನ್ನು ಕಾದು ನೋಡಬೇಕಿದೆ.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..