ದಾವಣಗೆರೆ –
2022ರ ವೇಳೆಗೆ ನೂತನ ವೇತನ ಆಯೋಗ ರಚಿಸಿ ಅದನ್ನು ಜಾರಿಗೊಳಿಸಲು ಶಿಫಾರಸು ಮಾಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಸರ್ಕಾರವನ್ನು ಆಗ್ರಹಿಸಿದರು. ದಾವಣಗೆರೆಯ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಶುಕ್ರವಾರ ಆರಂಭವಾದ ಸರ್ಕಾರಿ ನೌಕರರ ರಾಜ್ಯಮಟ್ಟದ ಕ್ರೀಡಾ ಮತ್ತು ಸಾಂಸ್ಕೃ ತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿ ಕವಾಗಿ ಅವರು ಮಾತನಾಡಿದ ಅವರು ಬೇರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ಸರ್ಕಾರಿ ನೌಕರರಿಗೆ ವೇತನ ಕಡಿಮೆ ಇದೆ ಎಂದರು
ಶೇ12 ರಿಂದ ಶೇ 40 ರಷ್ಟು ವ್ಯತ್ಯಾಸವಿದ್ದು ಈ ತಾರತಮ್ಯ ಸರಿಪಡಿಸಬೇಕು. ವಿಶೇಷವಾಗಿ ಶಿಕ್ಷಕರಿಗೆ ಹಲವು ಸಮಸ್ಯೆ ಗಳು ಇದ್ದು ಅವುಗಳನ್ನು ನಿವಾರಿಸಬೇಕು.ರಾಜ್ಯದಲ್ಲಿ 2.20 ಲಕ್ಷ ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಕೂಡಲೇ ಈ ಒಂದು ವೇತನ ತಾರತಮ್ಯವನ್ನು ನಿವಾರಣೆ ಮಾಡಬೇಕು ಇಲ್ಲವಾದರೆ ಸಂಘದಿಂದ ಹೋರಾಟವನ್ನು ಮಾಡಲಾಗುವುದು ಎಂದರು.