ಚಿಕ್ಕಮಗಳೂರು –
ರಾಜ್ಯದ ಸರ್ಕಾರಿ ನೌಕರರ ಕೆಲ ಪ್ರಮುಖ ಬೇಡಿಕೆಗಳ ಈಡೇರಿಕಗೆ ಒತ್ತಾಯಿಸಿ ಈವರೆಗೆ ರಾಜ್ಯ ಸರ್ಕಾರಕ್ಕೆ ಗಡುವನ್ನು ನೀಡಿದ್ದ ನೌಕರರ ಸಂಘವು ಈಗ ಕೊನೆಗೂ ಹೋರಾಟಕ್ಕೆ ಕರೆ ಕೊಟ್ಟಿದೆ.ಹೌದು ಪ್ರಮುಖವಾಗಿ ನಾಲ್ಕು ಪ್ರಮುಖ ಬೇಡಿಕೆಗಳ ಕುರಿತಂತೆ ಜನೆವರಿ 20 ರಂದು ರಾಜ್ಯಾಧ್ಯಂತ ಹೋರಾಟಕ್ಕೆ ಕರೆ ಕೊಟ್ಟಿದ್ದಾರೆ.
ಚಿಕ್ಕಮಂಗಳೂರಿನ ಕಡೂರಿನಲ್ಲಿ ಮಾತನಾಡಿದ ಅವರು ರಾಜ್ಯದ ಎಲ್ಲಾ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಈ ಒಂದು ಹೋರಾಟವನ್ನು ಮಾಡುವಂತೆ ಕರೆ ನೀಡಿದ್ದಾರೆ. ತಾಲ್ಲೂಕು ಮಟ್ಟದಲ್ಲಿ ತಹಶೀಲ್ದಾರ ಕಚೇರಿಯಲ್ಲಿ ಇನ್ನೂ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಮನವಿ ನೀಡವಂತೆ ಹೇಳಿದ್ದಾರೆ.
ಈ ಒಂದು ಪ್ರತಿಭಟನೆ ರಾಜ್ಯ ಸರ್ಕಾರದ ವಿರುದ್ದವಲ್ಲ ಬದಲಾಗಿ ನಮ್ಮ ಬೇಡಿಕೆಗಳ ಈಡೇರಿಕೆಗೆ ಎಂದಿದ್ದಾರೆ. ಇನ್ನೂ ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗೆ ಹೋರಾಟ ನಡೆಯಲಿದ್ದು ಮಧ್ಯಾಹ್ನ ಊಟದ ಸಮಯ ದಲ್ಲಿ ಮನವಿ ನೀಡುವಂತೆ ಹೇಳಿದ್ದು ಇನ್ನೂ ಸಧ್ಯ ರಾಜ್ಯ ದಲ್ಲಿ ತುಂಬಾ ಗಂಭೀರವಾಗಿರುವ ಶಿಕ್ಷಕರ ವರ್ಗಾವಣೆಯ ವಿಚಾರದ ಕುರಿತಂತೆ ರಾಜ್ಯಾಧ್ಯಕ್ಷರು ಯಾವ ಮಾತನ್ನು ಹೇಳಿಲ್ಲ ಹೀಗಾಗಿ ಇವರೇ ಈ ಹಿಂದೆ ಮತ್ತು ಮೊನ್ನೆಯಷ್ಟೇ ಹೇಳಿದ್ದರು ಈಗ ಈ ಒಂದು ವಿಚಾರ ಪ್ರಸ್ತಾಪವಾಗಿಲ್ಲ