ಕಾರವಾರ –
ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್. ಷಡಕ್ಷರಿ ಸಿಹಿಸುದ್ದಿ ಯೊಂದು ನೀಡಿದ್ದು ವರ್ಷಾಂತ್ಯಕ್ಕೆ ಸರ್ಕಾರಿ ನೌಕರರಿಗೆ ಕೇಂದ್ರಮಾದರಿ ವೇತನ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ.

ಗಡಿನಾಡು ಕನ್ನಡ ಉತ್ಸವ ಉದ್ಘಾಟನೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ರಾಜ್ಯ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿ ವೇತನ ಜಾರಿಗೆ ಸಿಎಂ ಬಸವ ರಾಜ ಬೊಮ್ಮಾಯಿ ಭರವಸೆ ನೀಡಿದ್ದು ಇನ್ನೂ ಮುಂದಿನ ವರ್ಷ ಹೊಸ ಪಿಂಚಣಿ ವ್ಯವಸ್ಥೆ ವಿಚಾರವನ್ನೂ ಗಂಭೀರ ವಾಗಿ ತೆಗೆದುಕೊಳ್ಳುತ್ತೇವೆ.ಈಗಾಗಲೇ ಎರಡು ಮೂರು ರಾಜ್ಯಗಳು NPS ರದ್ದು ಮಾಡಿವೆ.ಕರ್ನಾಟಕದಲ್ಲಿಯೂ ಎನ್ ಪಿಎಸ್ ತೆಗೆದು ಹಳೆ ಪಿಂಚಣಿ ವ್ಯವಸ್ಥೆ ಜಾರಿ ಮಾಡು ತ್ತೇವೆ ಎಂದು ಹೇಳಿದ್ದಾರೆ ಎಙದರು.