ಬೆಂಗಳೂರು –
ರಾಜ್ಯದ ಸರ್ಕಾರಿ ನೌಕರರ ಬೇಡಿಕೆ ಈಡೇ ರದಿದ್ದರೆ ಹೋರಾಟ – ಸರ್ಕಾರದ ವಿರುದ್ದ ಮತ್ತೊಮ್ಮೆ ಹೋರಾಟದ ಎಚ್ಚರಿಕೆ ನೀಡಿದ ಷಡಾಕ್ಷರಿಯವರು ಹೌದು ರಾಜ್ಯದ ಸಮಸ್ತ ಸರ್ಕಾರಿ ನೌಕರರ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸದಿದ್ದರೆ ಹೋರಾಟ ಮಾಡೊದಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿಯವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ನಮ್ಮ ಎಲ್ಲಾ ಬೇಡಿಕೆಗಳ ಕುರಿತಂತೆ ಈಗಾಗಲೇ ಮುಖ್ಯ ಮಂತ್ರಿ,ಉಪಮುಖ್ಯಮಂತ್ರಿ,ಸಚಿವರು ಸೇರಿ ದಂತೆ ಎಲ್ಲಾ ಪಕ್ಷಗಳ ಶಾಸಕರು ಅಧಿಕಾರಿಗಳನ್ನು ಕೂಡಾ ಭೇಟಿಯಾಗಿದ್ದು ಈಡೇರಿಸುವ ಭರವಸೆ ಯನ್ನು ನೀಡಿದ್ದಾರೆ.ನಮಗೂ ಕೂಡಾ ನಂಬಿಕೆ ಇದೆ ಆದರೆ ಈಡೇರದಿದ್ದರೆ ರಾಜ್ಯ ಸರ್ಕಾರ ನಮ್ಮ ಬೇಡಿಕೆಗಳಾದ 7ನೇ ವೇತನ ಹಳೆ ಪಿಂಚಣಿ ಯೋಜನೆ ಸೇರಿದಂತೆ ಇನ್ನೂ ಕೆಲ ಬೇಡಿಕೆಗಳನ್ನು ಘೋಷಣೆ ಮಾಡದಿದ್ದರೆ ಅನಿವಾರ್ಯವಾಗಿ ಹೋರಾಟ ಮಾಡೊದಾಗಿ ಹೇಳಿದರು.
ಈ ಒಂದು ದಾರಿ ನಮಗೆ ಅನಿವಾರ್ಯವಾಗಿದ್ದು ರಾಜ್ಯ ಸರ್ಕಾರ ನೌಕರರನ್ನು ಬೀದಿಗಿಳಿಸುವ ಮುನ್ನ ನಮ್ಮ ಬೇಡಿಕೆಗಳನ್ನು ಈಡೇರಿಸಲಿ ಎಂದು ಒತ್ತಾಯವನ್ನು ಕೂಡಾ ಮಾಡಿದರು. ಬಜೆಟ್ ನಲ್ಲಾದರೂ ಘೋಷಣೆ ಮಾಡಲಿ ಇಲ್ಲವೇ ಸಮ್ಮೇಳನದಲ್ಲಿ ಆದರೂ ಘೋಷಣೆ ಮಾಡಲಿ ಅಂತಿಮವಾಗಿ ಮಾರ್ಚ್ ನಲ್ಲಿ ಚುನಾ ವಣೆಯ ನೀತಿ ಸಂಹಿತೆ ಬರುವ ಮುನ್ನವಾದರೂ ನಮ್ಮ ಈ ಎಲ್ಲಾ ಬೇಡಿಕೆಗಳನ್ನು ಘೋಷಣೆ ಮಾಡಲಿ ಎಂದರು.
ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..