ಕಾರವಾರ –
ರಾಜ್ಯದ ಸರ್ಕಾರಿ ನೌಕರರ ರಕ್ಷಣೆಗೆ ಬದ್ದರಾಗಿರುವ ಷಡಾಕ್ಷರಿ ಅವರು ಈಗ ಶಾಲೆಗಳ ರಕ್ಷಣೆಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿರುವ ಷಡಾಕ್ಷರಿ ಅವರು ಮುಂದಾಗಿದ್ದಾರೆ ಹೌದು ಇದಕ್ಕೆ ತಾಜಾ ಉದಾಹರಣೆ ಕಾರವಾರ ದಲ್ಲಿ ಆರಂಭ ಮಾಡಿರುವ ನೂತನ ಯೋಜನೆ

ಸಧ್ಯ ಕಾರವಾರ ದಲ್ಲಿ ಕನ್ನಡ ಉತ್ಸವ ಕಾರ್ಯಕ್ರಮ ನಡೆಯುತ್ತಿದ್ದು ಈ ಒಂದು ಹಿನ್ನೆಲೆಯಲ್ಲಿ ಈಗಾಗಲೇ ಮೊದಲು ಹೇಳಿದಂತೆ ಸಧ್ಯ ರಾಜ್ಯಾಧ್ಯಕ್ಷ ರು ರಾಜ್ಯದಲ್ಲಿನ ಸರ್ಕಾರಿ ಶಾಲೆಗಳ ರಕ್ಷಣೆ ಗೆ ಮುಂದಾಗಿದ್ದು ಈ ಒಂದು ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳ ದತ್ತು ಪಡೆದುಕೊಳ್ಳುವ ಯೋಜನೆಯನ್ನು ಕನ್ನಡ ಉತ್ಸವ ಮೂಲಕ ಆರಂಭ ಮಾಡಿದ್ದಾರೆ

ಈ ಒಂದು ವಿಶೇಷ ಅರ್ಥಪೂರ್ಣ ಕಾರ್ಯಕ್ಕೆ ಸರ್ಕಾರಿ ಶಾಲೆಯ ಮಕ್ಕಳಿಂದಲೇ ಚಾಲನೆಯನ್ನು ನೀಡಿಸರು ಶಾಲೆಯ ಮುಂದೆ ಸರಳವಾಗಿ ಕಾರ್ಯಕ್ರಮ ಮಾಡುತ್ತಾ ದತ್ತು ಯೋಜನೆ ಗೆ ಚಾಲನೆಯನ್ನು ನೀಡಿದರು


ರಾಜ್ಯಾಧ್ಯಕ್ಷ ರಾಗಿರುವ ಸಿ ಎಸ್ ಷಡಾಕ್ಷರಿ ಅವರ ಚಿತ್ತ ಸರ್ಕಾರಿ ಶಾಲೆಯತ್ತ ಆಗಿದ್ದು ಮುಂದುವರಿದ ಭಾಗವಾಗಿ ಕಾರವಾರ ಮತ್ತು ಗೋವಾ ಗಡಿಭಾಗದಲ್ಲಿರುವ ಕಾರವಾರ ತಾಲೂಕಿನ ಗಾಬಿತವಾಡಾ ಮಾಜಾಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳ ಸಮ್ಮುಖದಲ್ಲಿ ದತ್ತು ತೆಗೆದು ಕೊಂಡರು ಇದರೊಂದಿಗೆ ಬಿಡುವಿಲ್ಲದ ತಮ್ಮ ಹತ್ತಾರು ಕೆಲಸ ಕಾರ್ಯಗಳ ನಡುವೆ ತಮ್ಮ ಅರ್ಥಪೂರ್ಣ ದತ್ತು ಕಾರ್ಯಕ್ರಮ ವನ್ನು ಮುಂದುವರೆಸಿದ್ದಾರೆ.