ರಾಜ್ಯದ ಸರ್ಕಾರಿ ನೌಕರರ ಪರವಾಗಿ ಸರ್ಕಾರಕ್ಕೆ ಪತ್ರ ಬರೆದು ಷಡಾಕ್ಷರಿ ಅವರು – ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕುರಿತಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಾಧ್ಯಕ್ಷರು ಒತ್ತಾಯಿಸಿದ್ದೇನೆ ಮತ್ತೆ ಏನೇನು ಬೇಡಿಕೆ ಇಟ್ಟಿದ್ದಾರೆ ಗೊತ್ತಾ…..

Suddi Sante Desk
ರಾಜ್ಯದ ಸರ್ಕಾರಿ ನೌಕರರ ಪರವಾಗಿ ಸರ್ಕಾರಕ್ಕೆ ಪತ್ರ ಬರೆದು ಷಡಾಕ್ಷರಿ ಅವರು – ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕುರಿತಂತೆ ರಾಜ್ಯ ಸರ್ಕಾರಕ್ಕೆ ರಾಜ್ಯಾಧ್ಯಕ್ಷರು ಒತ್ತಾಯಿಸಿದ್ದೇನೆ ಮತ್ತೆ ಏನೇನು ಬೇಡಿಕೆ ಇಟ್ಟಿದ್ದಾರೆ ಗೊತ್ತಾ…..

ಬೆಂಗಳೂರು

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ಕುರಿತಂತೆ ರಾಜ್ಯದ ಸರ್ಕಾರಿ ನೌಕರರ ಪರವಾಗಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರು ಮತ್ತೊಂದು ಬೇಡಿಕೆಯನ್ನು ಇಟ್ಟಿದ್ದಾರೆ.ಹೌದು ಕಾರ್ಯದರ್ಶಿಗಳು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಇವರಿಗೆ ಷಡಾಕ್ಷರಿ ಅವರು ಮತ್ತೊಂದು ಪತ್ರವನ್ನು ಬರೆದಿದ್ದು ರಾಜ್ಯ ಸರ್ಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ದಿನಾಂಕವನ್ನು 31/12/ 2023 ರವರೆಗೆ ವಿಸ್ತರಣೆ ಮಾಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರಿ ನೌಕರರ ವಾರ್ಷಿಕ ವೇತನ ಬಡ್ತಿ, ಮುಂಬಡ್ತಿ ಇನ್ನಿತರೆ ಸವಲತ್ತುಗಳನ್ನು ಪಡೆಯಲು ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದನ್ನು ಕಡ್ಡಾಯಗೊಳಿಸ ಲಾಗಿದೆ. ಉಲ್ಲೇಖಿತ ಅಧಿಸೂಚನೆಯನ್ವಯ ದಿನಾಂಕ 31/12/2022ರೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಮಯಾವಕಾಶ ನೀಡಲಾಗಿದೆ ಎಂದು ಪತ್ರದಲ್ಲಿ ವಿವರಣೆ ನೀಡಿದ್ದಾರೆ.ಆದರೆ ಕೆಲವು ಕಾರಣಗಳಿಂ ದಾಗಿ ಸುಮಾರು 1 ಲಕ್ಷಕ್ಕೂ ಅಧಿಕ ಅಧಿಕಾರಿ ನೌಕರರು ನಿಗಧಿತ ಅವಧಿಯೊಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯನ್ನು ತೆಗೆದುಕೊಳ್ಳಲು ಸಾಧ್ಯವಾಗದಿರುವುದನ್ನು ಗಮನಿಸಲಾಗಿದೆ

ಅಲ್ಲದೇ ಪತ್ರದಲ್ಲಿ ಹಲವು ಅಂಶಗಳನ್ನು ವಿವರಿಸಿ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ ನೌಕರರು ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ ಅವಕಾಶ ಕಲ್ಪಿಸುವ ನಿಟ್ಟಿ ನಲ್ಲಿ ದಿನಾಂಕ 31/12/2023ರವರೆಗೆ ಅವಧಿ ಯನ್ನು ವಿಸ್ತರಿಸಿ ಆದೇಶ ಹೊರಡಿಸಲು ಕೋರ ಲಾಗಿದೆ.

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮಾತ್ರ ಕಂಪ್ಯೂಟರ್ ಸಾಕ್ಷರತಾ ಕೇಂದ್ರಗಳನ್ನು ಸ್ಥಾಪಿಸಿದ್ದು ಸಾಕ್ಷರತಾ ಕೇಂದ್ರಗಳಿಲ್ಲದ ಜಿಲ್ಲೆಗಳ ನೌಕರರು ಬೇರೆ ಜಿಲ್ಲೆ ಗಳಲ್ಲಿ ಪರೀಕ್ಷೆ ತೆಗೆದುಕೊಳ್ಳುವಲ್ಲಿ ತೊಂದರೆಗಳು ಆಗುತ್ತಿವೆ.ಪರೀಕ್ಷಾ ಕೇಂದ್ರಗಳು ಅತ್ಯಲ್ಪ ಪ್ರಮಾಣದಲ್ಲಿ ಸ್ಲಾಟ್‌ಗಳನ್ನು ನೀಡುತ್ತಿರುವುದು ಹಾಗೂ ಸ್ಲಾಟ್‌ಗಳನ್ನು ನೀಡುವಲ್ಲಿ ದೀರ್ಘಾವಧಿ ಸಮಯವನ್ನು ತೆಗೆದುಕೊಳ್ಳುತ್ತಿರುವುದು. ಇತ್ತೀಚೆಗೆ ಸರ್ಕಾರವು ಹೊಸದಾಗಿ ವಿವಿಧ ವೃಂಧದ ಹುದ್ದೆಗಳನ್ನು ನೇಮಕ ಮಾಡಿದ್ದು ಹೊಸದಾಗಿ ನೇಮಕ ಹೊಂದಿದ ಸಿಬ್ಬಂದಿಗಳಿಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೆಗೆದುಕೊಳ್ಳುವ ಅವಕಾಶವನ್ನು ಕಲ್ಪಿಸಬೇಕಾಗುತ್ತದೆ.

ಕೆಲವು ಇಲಾಖೆಗಳಲ್ಲಿ ನೌಕರರ ಮಾಹಿತಿಗಳನ್ನು ಹೆಚ್. ಆರ್. ಎಂ. ಎಸ್. ತಂತ್ರಾಂಶದಲ್ಲಿ ಅಳವಡಿ ಸದೇ ವಿಳಂಬವಾಗಿದ್ದು ಪ್ರಸ್ತುತ ಹೆಚ್. ಆರ್. ಎಂ. ಎಸ್ ತಂತ್ರಾಂಶದಲ್ಲಿ ಮಾಹಿತಿ ಅಳವಡಿಸಿ ಕೊಂಡಿರುವ ನೌಕರರೂ ಸಹ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ ತೆಗೆದುಕೊಳ್ಳುವ ಅವಕಾಶ ಕಲ್ಪಿಸಬೇಕಾಗುತ್ತದೆ ಎಂದು ವಿವರಿಸಲಾಗಿದೆ ಎಂದು ಪತ್ರವನ್ನು ಷಡಾಕ್ಷರಿ ಅವರು ಬರೆದಿದ್ದು ಇದಕ್ಕೆ ರಾಜ್ಯ ಸರ್ಕಾರ ಅಧಿಕಾರಿಗಳು ಯಾವ ಉತ್ತರವನ್ನು ನೀಡುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.