ಹುಬ್ಬಳ್ಳಿ –
ಶಶಿ ಶುಭಾಶಯಗಳನ್ನ ಹೇಳಿ ಬೀಳ್ಕೊಟ್ಟ ಹುಬ್ಬಳ್ಳಿಯ ವಿಡಿಯೋ ಜರ್ನಲಿಸ್ಟ್ ಟೀಮ್ – ಜೊತೆಯಾಗಿ ಕೆಲಸ ಮಾಡಿದ ಗೆಳೆಯನಿಗೆ ಸನ್ಮಾನಿಸಿ ಆಲ್ ದಿ ಬೆಸ್ಟ್ ಹೇಳಿದ ಮಿತ್ರರು….
ಹುಬ್ಬಳ್ಳಿಯಲ್ಲಿ ಖಾಸಗಿ ಸುದ್ದಿವಾಹಿನಿಯೊಂ ದರಲ್ಲಿ ವಿಡಿಯೋ ಜರ್ನಲಿಸ್ಟ್ ಆಗಿದ್ದು ಶಶಿ ಗುಡಿಯವರು ನಿವೃತ್ತಿಯನ್ನು ಪಡೆದುಕೊಂಡಿ ದ್ದಾರೆ.ಸೇವಾ ನಿವೃತ್ತಿಯನ್ನು ಪಡೆದುಕೊಂಡಿರುವ ಇವರನ್ನು ನಗರದಲ್ಲಿ ವಿಡಿಯೋ ಜರ್ನಲಿಸ್ಟ್ ಟೀಮ್ ನವರು ಸನ್ಮಾನಿಸಿ ಗೌರವಿಸಿದ್ದಾರೆ.
ಹೌದು ಕಳೆದ ಮೂರು ನಾಲ್ಕು ವರ್ಷಗಳಿಂದ ನಗರದಲ್ಲಿ ಜೊತೆಯಾಗಿ ಇದ್ದುಕೊಂಡು ಕೆಲಸ ವನ್ನು ಮಾಡಿದ ಆತ್ಮೀಯ ಗೆಳಯನಿಗೆ ಮಾಧ್ಯಮ ಮಿತ್ರರೆಲ್ಲರೂ ಸೇರಿಕೊಂಡು ನಗರದ ಪತ್ರಕರ್ತರ ಭವನದಲ್ಲಿ ಸನ್ಮಾನಿಸಿ ಶುಭ ಹಾರೈ ಸಿದರು.ಪ್ರೀತಿಯಿಂದ ಸವಿನೆನಪಿನ ಪೊಟೊ ವೊಂದನ್ನು ನೀಡಿ ಸನ್ಮಾನಿಸಿ ಶುಭವನ್ನು ಹಾರೈ ಸಿದರು.
ಬಿಡುವಿಲ್ಲದ ಕೆಲಸ ಕಾರ್ಯಗಳ ನಡುವೆಯೂ ಕೂಡಾ ಜೊತೆಗಿದ್ದು ಕೆಲಸವನ್ನು ಮಾಡಿದ ಗೆಳೆ ಯನನ್ನು ಈ ಮೂಲಕ ಮಿತ್ರರೆಲ್ಲರೂ ಸೇರಿ ಕೊಂಡು ಸನ್ಮಾನಿಸಿ ಗೌರವಿಸಿ ಮುಂದಿನ ಹೊಸ ಬದುಕಿನ ಪಯಣಕ್ಕೆ ಒಳ್ಳೇಯದಾಗಲೆಂದು ಹಾರೈಸಿದರು.ಮುಂದಿನ ಜೀವನ ಇನ್ನಷ್ಟು ಕಲರ್‌ಫುಲ್ ಆಗಿರಲಿ ಆಲ್ ದಿ ಬೆಸ್ಟ್ ಶಶಿ ಶುಭವಾಗಲಿ ನಿಮ್ಮೊಂದಿಗೆ ಯಾವಾಗಲೂ ನಾವುಗಳು ಎನ್ನುತ್ತಾ ಬೀಳ್ಕೋಟ್ಟರು.
ಈ ಒಂದು ಸಮಯದಲ್ಲಿ ಹಿರಿಯ ಪತ್ರಕರ್ತ ರಾದ ಪರಶುರಾಮ ತಹಶೀಲ್ದಾರ.ಪಿ ಶೇಖರ್, ನಾರಾಯಣಗೌಡ ಪಾಟೀಲ, ಶಿವಾಜಿ, ನಿತೀಶ್, ಪ್ರಕಾಶ್,ವಿನಾಯಕ ಪೂಜಾರಿ,ಭರತ್,ಈಶ್ವರ ಮನಗುಂಡಿ,ಆನಂದ ಪತ್ತಾರ ಸೇರಿದಂತೆ ಹಲವರು ಉಪಸ್ಥಿತರಿದ್ದು ಶಶಿಗೆ ಶುಭಾಶಯಗ ಳನ್ನು ಹೇಳಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ…..