ಶಾಲೆಯಲ್ಲಿ ದೈಹಿಕ ಶಿಕ್ಷಕರ ಕೊರತೆಯ ನಡುವೆ ಐತಿಹಾಸಿಕ ಸಾಧನೆ ಮಾಡಿದ್ದಾರೆ ವಿದ್ಯಾರ್ಥಿಗಳು – ಕಲಿಕೆಗೂ ಸೈ ಕ್ರೀಡೆಗೂ ಸೈ ಎನ್ನುತ್ತಿದ್ದಾರೆ ಶಿಲಾರಕೋಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು…..

Suddi Sante Desk
ಶಾಲೆಯಲ್ಲಿ ದೈಹಿಕ ಶಿಕ್ಷಕರ ಕೊರತೆಯ ನಡುವೆ ಐತಿಹಾಸಿಕ ಸಾಧನೆ ಮಾಡಿದ್ದಾರೆ ವಿದ್ಯಾರ್ಥಿಗಳು – ಕಲಿಕೆಗೂ ಸೈ ಕ್ರೀಡೆಗೂ ಸೈ ಎನ್ನುತ್ತಿದ್ದಾರೆ ಶಿಲಾರಕೋಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು…..

ಸೇಡಂ

ಸಾಮಾನ್ಯವಾಗಿ ಯಾವುದೇ ಒಂದು ಸಾಧನೆ ಗೆ ಮಾರ್ಗದರ್ಶಕರು ಸೂಕ್ತ ಸೌಲಭ್ಯಗಳು ಬೇಕು ಆದರೆ ಈ ಒಂದು ಸರ್ಕಾರಿ ಶಾಲೆಯಲ್ಲಿ ಏನು ಇಲ್ಲದೆ ಶಾಲೆಯ ವಿದ್ಯಾರ್ಥಿಗಳು ಕ್ರೀಡಾ ಕ್ಷೇತ್ರ ದಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ ಹೌದು

ಈ ಸರ್ಕಾರಿ ಶಾಲೆಯಲ್ಲಿ ಆಟಕ್ಕೆ ಸೂಕ್ತ ಮೈದಾನ ವಿಲ್ಲ. ಆಟ ಆಡಿಸಲು ದೈಹಿಕ  ಶಿಕ್ಷಕರೂ ಇಲ್ಲ. ಆದರೂ ಸಹ ಈ ಶಾಲೆಯ ವಿದ್ಯಾರ್ಥಿಗಳು ಸತತ ಮೂರು ವರ್ಷ ಕೊಕ್ಕೋ ಸ್ಪರ್ಧೆಯಲ್ಲಿ ವಿಜೇತ ರಾಗಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿ ಅಚ್ಚರಿ ಮೂಡಿಸುತ್ತಿದ್ದಾರೆ.

ತಾಲ್ಲೂಕಿನ ಆಂಧ್ರ ಗಡಿಯಂಚಿನ ಶಿಲಾರಕೋಟ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಸತತ ಮೂರನೇ ಬಾರಿ ಕೊಕ್ಕೋ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ತೆರಳಿ ಗಮನಾರ್ಹ ಸಾಧನೆ ಮಾಡಿದ್ದಾರೆ. 1957ರಲ್ಲಿ ಪ್ರಾರಂಭವಾದ ಶಾಲೆಗೆ 2010ರಲ್ಲಿ ಸರ್ಕಾರ ದೈಹಿಕ ಶಿಕ್ಷಣ ಶಿಕ್ಷಕ ಹುದ್ದೆಯನ್ನು ಮಂಜೂರು ಮಾಡಿದ್ದು, ಇಲ್ಲಿಯವ ರೆಗೆ ಭರ್ತಿಯಾಗಿಲ್ಲ.

2022, 2023 ಮತ್ತು 2024ರಲ್ಲಿ ಬಾಲಕರ ಪ್ರಾಥಮಿಕ ವಿಭಾಗದ ಕೊಕ್ಕೊ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳಿಗೆ ಕೊಕ್ಕೊದಲ್ಲಿ ಆಸಕ್ತಿ ಬೆಳೆಯಲು ಶಾಲೆಯ ಹಳೆ ವಿದ್ಯಾರ್ಥಿ ಭೀಮರೆಡ್ಡಿ ಅಕು ದೋಟ ಎನ್ನುವುದು ಎಲ್ಲರ ಅಭಿಮತ.

ಶಾಲೆಯಲ್ಲಿ ಪ್ರಸ್ತುತ 246 ವಿದ್ಯಾರ್ಥಿಗಳು ಅಧ್ಯ ಯನ ಮಾಡುತ್ತಿದ್ದು ಈ ವರ್ಷ ಆಂಗ್ಲಮಾಧ್ಯಮ ಶಿಕ್ಷಣ ಮಂಜೂರಾಗಿದೆ. ಶಾಲೆಯ ಮುಖ್ಯಶಿಕ್ಷಕ ಅಶೋಕ ವಟಾರ, ರಮೇಶ ಹುಜಗೊಂಡ, ಪುಷ್ಪ ಬೋಸಗ ಮತ್ತು ಅಮೃತ ಪಾಟೀಲ ಸೇರಿ ನಾಲ್ವರು ಕಾಯಂ ಶಿಕ್ಷಕರಿದ್ದು, 6 ಜನ ಅತಿಥಿ ಶಿಕ್ಷಕರಿದ್ದಾರೆ.ಖಾಸಗಿ ಜಾಗವನ್ನೇ ಮೈದಾನ ಮಾಡಿಕೊಂಡ ವಿದ್ಯಾರ್ಥಿಗಳು ಗ್ರಾಮದಲ್ಲಿ ಖಾಲಿಯಿದ್ದ ಖಾಸಗಿ ನಿವೇಶವನ್ನೇ ಹಳೆಯ ವಿದ್ಯಾರ್ಥಿಗಳ ಸಂಘದ ಪದಾಧಿಕಾರಿಗಳಾದ ಲಾಯತ್ ಮಿಜಾವರ, ರಾಮಕೃಷ್ಣ ಕುಂಬಾರ, ನಾಗಪ್ಪ ಕುಂಬಾರ ಮತ್ತು ಮಲ್ಲಿಕಾರ್ಜುನ ಅಡಿಕೇರಿ ನೆಲ ಸಮತಟ್ಟಾಗಿಸಿದ್ದಾರೆ

ಮೈದಾನ ನಿರ್ಮಿಸಿದ್ದಾರೆ. ಇದಕ್ಕೆ ಶಾಲೆಯ ಶಿಕ್ಷಕರು ಸಹಕಾರ ನೀಡುತ್ತಿದ್ದು, ಗ್ರಾಮದ ಮುಖಂಡ ಆಟಕ್ಕೆ ಸ್ಥಳವಕಾಶ ನೀಡಿದ್ದಾರೆ. ದೈಹಿಕ ಶಿಕ್ಷಣ ಶಿಕ್ಷಕ ಇಲ್ಲದಿದ್ದರೂ ಸಹ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ತೆರಳುತ್ತಿರು ವುದು ಶಿಲಾರಕೋಟ ಸೇರಿದಂತೆ ಸುತ್ತಲಿನ ಗ್ರಾಮ ಹಾಗೂ ತಾಲ್ಲೂಕಿನಲ್ಲಿ ಅಚ್ಚರಿ ಮೂಡಿಸಿದೆ.

ವಿದ್ಯಾರ್ಥಿಗಳ ಸಾಧನೆಗೆ ಅಭಿನಂದನೆ ವ್ಯಕ್ತವಾಗುತ್ತಿದ್ದು ಕಾಯಂ ದೈಹಿಕ ಶಿಕ್ಷಣ ನೀಡಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು ಮತ್ತು ಶಾಲೆಯ ಶಿಕ್ಷಕರು ಒಟ್ಟಾರೆ ಶಾಲೆಯ ಶಿಕ್ಷಕರು ಕಲಿಕೆಗೂ ಸೈ ಕ್ರೀಡೆಗೂ ಸೈ ಎಂಬುದನ್ನು ಈ ಮೂಲಕ ತೋರಿಸಿಕೊಟ್ಟಿದ್ದಾರೆ

ಸುದ್ದಿ ಸಂತೆ ನ್ಯೂಸ್ ಸೇಡಂ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.