ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ ಫಲಿತಾಂಶ – ಅತಿ ಹೆಚ್ಚು ಸ್ಥಾನ ಗೆದ್ದ ಹಾಲಿ ಅಧ್ಯಕ್ಷ ಸಿಎಸ್ ಷಡಾಕ್ಷರಿ ಬಣದ ಸದಸ್ಯರು…..ಫಲಿತಾಂಶದ ಕಂಪ್ಲೀಟ್ ಮಾಹಿತಿ…..

Suddi Sante Desk
ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ ಫಲಿತಾಂಶ – ಅತಿ ಹೆಚ್ಚು ಸ್ಥಾನ ಗೆದ್ದ ಹಾಲಿ ಅಧ್ಯಕ್ಷ ಸಿಎಸ್ ಷಡಾಕ್ಷರಿ ಬಣದ ಸದಸ್ಯರು…..ಫಲಿತಾಂಶದ ಕಂಪ್ಲೀಟ್ ಮಾಹಿತಿ…..

ಶಿವಮೊಗ್ಗ

ಶಿವಮೊಗ್ಗ ಜಿಲ್ಲಾ ಸರ್ಕಾರಿ ನೌಕರರ ಸಂಘದ ಚುನಾವಣೆ ಫಲಿತಾಂಶ – ಅತಿ ಹೆಚ್ಚು ಸ್ಥಾನ ಗೆದ್ದ ಹಾಲಿ ಅಧ್ಯಕ್ಷ ಸಿಎಸ್ ಷಡಾಕ್ಷರಿ ಬಣದ ಸದಸ್ಯರು….. ಫಲಿತಾಂಶದ ಕಂಪ್ಲೀಟ್ ಮಾಹಿತಿ

ರಾಜ್ಯ ಸರ್ಕಾರಿ ನೌಕರರ ಚುನಾವಣೆಯ ಫಲಿತಾಂಶವು ಪ್ರಕಟಗೊಳ್ಳುತ್ತಿದ್ದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿಎಸ್ ಷಡಾಕ್ಷರಿಯವರ ತವರೂರು ಶಿವಮೊಗ್ಗ ಜಿಲ್ಲೆಯ ಫಲಿತಾಂಶವು ಕೂಡಾ ಪ್ರಕಟ ಗೊಂಡಿದ್ದು ಸರ್ಕಾರಿ ನೌಕರರ ಸಂಘದ ಚುನಾವಣೆ  ಯಲ್ಲಿ 28 ಮಂದಿ ಆಯ್ಕೆಯಾಗಿದ್ದಾರೆ.

ಹೌದು ರಾಜ್ಯ ಸರ್ಕಾರಿ ನೌಕರರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿಯ ಒಟ್ಟು 66 ನಿರ್ದೇಶಕ ಸ್ಥಾನಗಳ ಪೈಕಿ 28 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಈಗಾಗಲೇ ಮತ ಎಣಿಕೆ ಪೂರ್ಣಗೊಂಡಿದ್ದು ಫಲಿತಾಂಶವು ಕೂಡಾ ಪ್ರಕಟಗೊಂಡಿದ್ದು ಜಿಲ್ಲಾ ಶಾಖೆಯ 66 ನಿರ್ದೇಶಕರ ಸ್ಥಾನಗಳಿಗೆ 2024-29ನೇ ಅವಧಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ಈಗಾಗಲೇ 38 ಮಂದಿ ಅವಿರೋಧವಾಗಿ ಆಯ್ಕೆ ಯಾಗಿದ್ದಾರೆ

ಉಳಿದ ಸ್ಥಾನಗಳಿಗೆ ಚುನಾವಣೆ ನಡೆಯಿತು.ಬಿ.ಗಿರೀಶ್ (ಕೃಷಿ ಇಲಾಖೆ ತಾಂತ್ರಿಕೇತರ ವಿಭಾಗ), ಜಿ.ಎಚ್. ಸತ್ಯನಾರಾಯಣ (ಕಂದಾಯ ಇಲಾಖೆ), ಪಿ.ಎನ್. ದೀಪಕ್ (ಪಂಚಾಯತ್‌ರಾಜ್ ಎಂಜಿನಿಯರಿಂಗ್ ವಿಭಾಗ), ಎಚ್.ಕಿರಣ್ (ಜಿ.ಪಂ.), ಜಿ.ಪ್ರವೀಣ್ ಕುಮಾರ್ (ತಾ.ಪಂ.), ಮಧುಸೂದನ್ (ಅಬಕಾರಿ ಇಲಾಖೆ), ಕೊಟ್ರೇಶ್ (ಸಮಾಜ ಕಲ್ಯಾಣ ಇಲಾಖೆ), ವಿ.ಅನಿತಾ (ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ), ರಂಗನಾಥ್ (ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ), ಎಸ್.ಜಿ.ಸತ್ಯಭಾಮಾ (ಮೀನುಗಾರಿಕೆ ಇಲಾಖೆ), ರಾಜು ಲಿಂಬು ಚೌಹಾಣ್ (ಅರಣ್ಯ ಇಲಾಖೆ), ಡಾ.ಗುಡದಪ್ಪ ಕಸಬಿ (ಆರೋಗ್ಯ ಇಲಾಖೆ),

ಡಾ.ಸಿ.ಎ.ಹಿರೇಮಠ್ (ಆಯುಷ್ ಇಲಾಖೆ), ಪಿ.ಎಲ್. ಮಹೇಶ್ (ಇಎಸ್‌ಐ), ಎಸ್.ವೈ.ರಮೇಶ್ (ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ), ಕೆ.ಎಚ್.ಮಹೇಶ್ (ಗ್ರಂಥಾಲಯ ಇಲಾಖೆ), ಲಿಂಗಪ್ಪ ಮತ್ತು ಧರ್ಮಪ್ಪ (ಪ್ರೌಢಶಾಲಾ ವಿಭಾಗ), ಡಿ.ಟಿ.ಶಶಿಧರ (‍ಪದವಿಪೂರ್ವ ಶಿಕ್ಷಣ), ಧನ್ಯಕುಮಾರ್ (ಪ್ರಥಮ ದರ್ಜೆ ಕಾಲೇಜು), ಜಿ.ಹನುಮಂತಪ್ಪ (ಮಹಿಳಾ ಪಾಲಿಟೆಕ್ನಿಕ್), ವಿ.ಬಿ ಅಣ್ಣಪ್ಪ (ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ)

ವೈ.ರವಿಕಿರಣ್ (ಗಣಿ ಮತ್ತು ಭೂವಿಜ್ಞಾನ), ಚನ್ನಕೇಶ ವಮೂರ್ತಿ (ಭೂಮಾಪನ ಮತ್ತು ಕಂದಾಯ ಇಲಾಖೆ), ಸುಬ್ರಹ್ಮಣ್ಯ ಜಾಧವ್ (ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ), ವಿಜಯ್ ಅಂಟೋನಿ ಸಗಾಯ್, ಟಿ.ಜಿ. ಅಶೋಕ್ ಹಾಗೂ ಕೆ.ನರಸಿಂಹ (ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ).ಅವಿರೋಧವಾಗಿ ಆಯ್ಕೆಯಾದವರ ಜೊತೆಗೆ 28 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲೂ ನಮ್ಮ ಬಣದವರೇ ಮೇಲುಗೈ ಸಾಧಿಸಿದ್ದಾರೆ ಎಂದು ಸಂಘದ ರಾಜ್ಯ ಘಟಕದ ಹಾಲಿ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದ್ದಾರೆ

ಅಲ್ಲದೇ ಬೆಂಬಲಿಗರೊಂದಿಗೆ ಸಂಭ್ರಮಾಚರಣೆಯನ್ನು ಕೂಡಾ ಮಾಡಿದರು.ಇನ್ನೂ ಹಿಂದಿನ ಅವಧಿಯ ರೀತಿ ಮುಂದೆಯೂ ಸಂಘದಿಂದ ಜಿಲ್ಲೆಯಲ್ಲಿ ನೌಕರರ ಪರ ಕ್ರಿಯಾಶೀಲ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಾಗು ವುದು. ಅವರ ಹಿತಕ್ಕೆ ಶ್ರಮಿಸುವೆ’ ಎಂದು ಷಡಾಕ್ಷರಿ ಹೇಳಿದರು.

ಸುದ್ದಿ ಸಂತೆ ನ್ಯೂಸ್ ಶಿವಮೊಗ್ಗ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.