ಧಾರವಾಡ –
ಪಾಲಿಕೆಯ ಆಯುಕ್ತರೊಂದಿಗೆ ಧಾರವಾಡದಲ್ಲಿ ಗಣೇಶ ಹಬ್ಬದ ಸಿದ್ದತೆಯನ್ನು ಪರಿಶೀಲನೆ ಮಾಡಿದ ಶಿವಲೀಲಾ ಕುಲಕರ್ಣಿ – ನುಚ್ಚಂಬ್ಲಿ ಭಾವಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ವ್ಯವಸ್ಥೆ ಕಲ್ಪಿಸುವಂತೆ ಸೂಚನೆ ಹೌದು
ಗಣಪತಿ ಹಬ್ಬಕ್ಕೆ ಇನ್ನೇನು ಕೆಲವೆ ದಿನಗಳು ಬಾಕಿ ಇರುವಾಗಲೇ ಇತ್ತ ಧಾರವಾಡದಲ್ಲಿ ಗಣೇಶ ವಿಸರ್ಜನೆ ಕುರಿತಂತೆ ಸಿದ್ದತೆಗಳನ್ನು ಪರಿಶೀಲನೆ ಯನ್ನು ಮಾಡಲಾಯಿತು.ಹೌದು ಪಾಲಿಕೆಯ ಆಯುಕ್ತ ಡಾ ಈಶ್ವರ ಉಳ್ಳಾಗಡ್ಡಿ ಅವರೊಂದಿಗೆ ಶಾಸಕ ವಿನಯ ಕುಲಕರ್ಣಿ ಅವರ ಪತ್ನಿ ಶ್ರೀಮತಿ ಶಿವಲೀಲಾ ಕುಲಕರ್ಣಿ ಯವರು ಸಿದ್ದತೆಗಳನ್ನು ವೀಕ್ಷಣೆ ಮಾಡಿದರು.
ನಗರದಲ್ಲಿನ ನುಚ್ಚಂಬ್ಲಿ ಬಾವಿಗೆ ತೆರಳಿ ಭೇಟಿ ನೀಡಿದ ಇವರು ಬಾವಿಯಲ್ಲಿನ ವ್ಯವಸ್ಥೆ ಸೇರಿ ದಂತೆ ಪೊಲೀಸ್ ಭದ್ರತೆ ಹೇಗೆ ಮಾಡಬೇಕು ಕುರಿತಂತೆ ಎಲ್ಲವನ್ನೂ ವೀಕ್ಷಣೆ ಮಾಡಿದರು. ಗಣೇಶ್ ಚತುರ್ಥಿ ಮುಂಜಾಗೃತಾ ಕ್ರಮವಾಗಿ ನಗರದ ಹೊಸಯಲ್ಲಾಪುರದ ನಿಚ್ಚುಂಬ್ಲಿ ಭಾವಿಗೆ ಭೇಟಿ ನೀಡಿ ಎಲ್ಲಾ ಸಿದ್ದತೆಗಳ ಮತ್ತು ವ್ಯವಸ್ಥೆ ಯನ್ನು ಪರಿಶೀಲನೆ ಮಾಡಿದರು.
ಭಾವಿಯ ಸ್ವಚ್ಛತೆ ,ಕ್ರೆನ್ ವ್ಯವಸ್ಥೆ ,ಭಾವಿಯ ಸುತ್ತ ಮುತ್ತಲಿನ ಪ್ರದೇಶ ಸ್ವಚ್ಛತೆ ಕಾಪಾಡುವಂತೆ ಹಾಗೂ ಬಿಗಿ ಪೊಲೀಸ್ ಭದ್ರತೆ ನೀಡುವಂತೆ ಇದರೊಂದಿಗೆ ಗಣಪತಿ ವಿಸರ್ಜನೆ ಸಮಯದಲ್ಲಿ ಯಾರಿಗೂ ಯಾವುದೇ ಅಡಚಣೆ ಯಾಗದಂತೆ ಹಾಗೇ ಯಾವ ತೊಂದರೆಯಾಗದಂತೆ ಎಲ್ಲಾ ಸೌಲಭ್ಯಗಳನ್ನು ಕಲ್ಸಿಸಲು ಸಂಬಂಧ ಪಡುವ ಅಧಿಕಾರಿಗಳಿಗೆ ಸೂಚನೆಯನ್ನು ಶ್ರೀಮತಿ ಶಿವಲೀಲಾ ಕುಲಕರ್ಣಿ ಮತ್ತು ಪಾಲಿಕೆಯ ಆಯುಕ್ತರು ನೀಡಿದರು.
ಈ ಒಂದು ಸಮಯದಲ್ಲಿ ಪಾಲಿಕೆಯ ಆಯುಕ್ತ ರಾದ ಡಾ ಈಶ್ವರ ಉಳ್ಳಾಗಡ್ಡಿ,ಉಪನಗರ ಪೊಲೀಸ್ ಠಾಣೆ ಪೊಲೀಸ್ ಅಧಿಕಾರಿ ಎನ್ ಸಿ ಕಾಡದೇವರಮಠ ಪಾಲಿಕೆಯ ವಲಯ ಅಧಿಕಾರಿ ಗಿರೀಶ್ ತಳವಾರ,AEE ಉಷಾ ಹಾಗೂ ಇಂಜಿನಿ ಯರ್ ವಿಷ್ಣುವರ್ಧನ ರಾಥೋಡ ಹಾಗೂ ಮಹಾನಗರ ಪಾಲಿಕೆ ಸದಸ್ಯರಾದ ಶಂಕರ ಶೇಳಕೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸುದ್ದಿ ಸಂತೆ ನ್ಯೂಸ್ ಧಾರವಾಡ…..