ಬೆಂಗಳೂರು –
ಮಹಾಮಾರಿ ಕರೋನ ಆರ್ಭಟ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಮತ್ತೊಂದು ಪರಿಷ್ಕೃತ ಮಾರ್ಗಸೂ ಚಿಯನ್ನು ಪ್ರಕಟ ಮಾಡಿದೆ.

ಈ ಹಿಂದೆ ಹೊರಡಿಸಲಾ ದ ಮಾರ್ಗಸೂಚಿಗೆ ಮ ತ್ತೊಂದಿಷ್ಟು ಅಂಶಗಳನ್ನು ಸೇರಿಸಿ ಹೊಸದಾದ ಖಡಕ್ ಸೂಚನೆ ಗಳನ್ನು ಹಾಕಿ ಹೊಸದಾಗಿ ಈಗ ಮತ್ತೊಂದು ಮಾರ್ಗಸೂಚಿಯನ್ನು ಹೊರಡಿಸಲಾ ಗಿದೆ

ಇನ್ನೂ ಹೊಸದಾದ ಮಾರ್ಗ ಸೂಚಿಯ ಕುರಿತು ನೊಡೊದಾದರೆ ಮದುವೆಗೆ 50 ಜನರಿಗೆ ಅವಕಾಶ ಅಂತ್ಯಕ್ರಿಯೆಗೆ 20 ಜನರಿಗೆ ಅವಕಾಶ. ಕಾಮರ್ಸ್ ಚಟುವಟಿಕೆಗೆ ಅವಕಾಶ ನೀಡಲಾಗಿದೆ. ಸಿನಿಮಾ ಹಾಲ್, ಸ್ವಿಮ್ಮಿಂಗ್ ಫೂಲ್, ಮಾರ್ಕೆಟ್ ಬಂದ್ ಮಾಡಲಾಗುತ್ತಿದೆ. ಶಾಲಾ-ಕಾಲೇಜು ಮುಚ್ಚಲಾಗುತ್ತಿ ದೆ. ರಾತ್ರಿ ಪಾಳಿಯಲ್ಲಿ ಕಾರ್ಖಾನೆಗಳಲ್ಲಿ ಕೆಲಸ ಮಾಡೋದಕ್ಕೆ ಅವಕಾಶ ನೀಡಲಾಗಿದೆ.

ರಾತ್ರಿ ಬಸ್ ಸಂಚಾರಕ್ಕೆ ಅವಕಾಶ ಮಾಡಿಕೊಡಲಾ ಗಿದೆ.ಬಸ್ ನಲ್ಲಿ ತೆರಳೋರು ಟಿಕೆಟ್ ತೋರಿಸಿ ಸಾಗ ಬೇಕು.ರಾಜ್ಯಾಧ್ಯಂತ ಧಾರ್ಮಿಕ ಕ್ಷೇತ್ರಗಳು ಬಂದ್ ಮಾಡಲಾಗುತ್ತಿದೆ.ಭಕ್ತರಿಗೆ ಅವಕಾಶವಿಲ್ಲ.ಸಲೂನ್, ಬ್ಯೂಟಿ ಪಾರ್ಲರ್ ಗೆ ಅವಕಾಶ ನೀಡಲಾಗಿದೆ.

ಇನ್ನೂ ಸರ್ಕಾರಿ ಕಚೇರಿಯಲ್ಲಿ ಶೇ.50ರಷ್ಟು ಜನರಿಗೆ ಕೆಲಸ ಮಾಡೋದಕ್ಕೆ ಅವಕಾಶ ನೀಡಲಾಗಿದ್ದು
ಇದಲ್ಲದೇ ಅಗತ್ಯ ಸೇವೆ ಒದಗಿಸುವಂತೆ ಸೇವೆಯ ಶಾಪ್ ಗಳು ಹೊರತಾಗಿ, ರಾಜ್ಯಾಧ್ಯಂತ ಇತರೆ ಶಾಪ್ ಗಳನ್ನು ಬಂದ್ ಮಾಡುವಂತೆ ಇದೀಗ ನೂತನ ಮಾರ್ಗಸೂಚಿ ಆದೇಶದಲ್ಲಿ ತಿಳಿಸಲಾಗಿದೆ.

ಇನ್ನೂ ನಿನ್ನೆಯಿಂದ ಅನ್ವಯವಾಗುವಂತೆ ಪರಿಷ್ಕೃತ ಮಾರ್ಗಸೂಚಿ ಆದೇಶದಲ್ಲಿ ಅಗತ್ಯಸೇವೆ ಹೊರತಾ ಗಿ ಉಳಿದ ಎಲ್ಲಾ ಶಾಪ್ ಬಂದ್ ಗೆ ಸೂಚಿಸಲಾಗಿದೆ. ಹೀಗಾಗಿ ಪೊಲೀಸರು ಇಂದು ಬೆಳಿಗ್ಗೆಯಿಂದಲೇ ಫೀಲ್ಡ್ ಗೆ ಇಳಿದಿದ್ದು ಅಗತ್ಯ ಸೇವೆ ಒದಗಿಸುವ ಮೆಡಿ ಕಲ್, ಹಾಲು, ಇ-ಕಾಮರ್ಸ್ ಸೇರಿದಂತೆ ಇತರೆ ಶಾಪ್ ಹೊರತಾಗಿ, ಇತರೆ ಅಂಗಡಿ ಮುಂಗಟ್ಟುಗಳ ನ್ನು ಬಂದ್ ಮಾಡಿಸುತ್ತಿದ್ದಾರೆ
