ಬಳ್ಳಾರಿ –
ಲಾರಿ ಇಂಜೀನ್ ನಲ್ಲಿ ದಿಢೀರನೇ ಬೆಂಕಿ ಕಾಣಿಸಿಕೊಂಡು ಸಂಪೂರ್ಣವಾಗಿ ಲಾರಿ ಸುಟ್ಟು ಕರಕಲಾಗಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹುಲಿಕೇರಿ ಗ್ರಾಮದ ಬಳಿಯ ರಾಷ್ಟೀಯ ಹೆದ್ದಾರಿ 50ರಲ್ಲಿ ಈ ಒಂದು ಘಟನೆ ನಡೆದಿದೆ.
ತಮಿಳು ನಾಡು ಮೂಲದ ಲಾರಿಯು ಬೆಂಕಿಗಾಹುತಿಯಾಗಿದೆ.ಚಿತ್ರದುರ್ಗದಿಂದ ಕೂಡ್ಲಿಗಿ ಕಡೆಗೆ ಲಾರಿ ತೆರಳುತ್ತಿತ್ತು. ಕಬ್ಬಿಣ ತುಂಬಿದ ಲಾರಿಯ ಇಂಜೀನ್ ನಲ್ಲಿ ದಿಡೀರ್ ಬೆಂಕಿ ಕಾಣಿಸಿಕೊಂಡಿದೆ. ನೋಡ ನೋಡುತ್ತಿದ್ದಂತೆ ಲಾರಿಯು ಧಗ ಧಗನೆ ಭಾರೀ ಜ್ವಾಲೆ ಹಬ್ಬಿದೆ.ಇದನ್ನು ಗಮನಿಸಿದ ಚಾಲಕ ಹಾಗೂ ಕ್ಲೀನರ್ ಲಾರಿಯಿಂದ ಕೆಳಗೆ ಜೀಗಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇನ್ನೂ ಈ ಒಂದು ವಿಷಯ ತಿಳಿದ ಅಗ್ನಿ ಶಾಮಕ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ , ಅಗ್ನಿಗೆ ಆಹುತಿಯಾದ ಲಾರಿ ನಂದಿಸುವ ಅವರ ಪ್ರಯತ್ನ ವಿಫಲವಾಯಿತು. ಪರಿಣಾಮ ಲಾರಿ ಸಂಪೂರ್ಣ ಕರಕಲಾಗಿ ಸುಟ್ಟಿದೆ, ತಡವಾಗಿ ವಿಷಯ ತಿಳಿದ ಕಾರಣ ಅಗ್ನಿ ಶಾಮಕ ಠಾಣಾ ಸಿಬ್ಬಂದಿ ಅಗ್ನಿ ನಂದಿಸಿದ್ದಾರೆ.ಇನ್ನೂ ಈ ಒಂದು ಘಟನೆಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸಂಪೂರ್ಣವಾಗಿ ಜಾಮ್ ಆಗಿದ್ದು ಕಂಡು ಬಂದಿತು.