ಬೆಂಗಳೂರು –
ಮುಂದಿನ ಚುನಾವಣೆಯಲ್ಲಿ ನೀವು ಅಧಿಕಾರಕ್ಕೆ ಬರುತ್ತೇನೆ ಎಂದು ತಿರುಕನ ಕನಸು ಕಾಣುತ್ತಿದ್ದೀರಾ. ನಾನು ಕೊಟ್ಟಿರುವ ಬಜೆಟ್ ಅನ್ನು ರಾಜ್ಯದ ಜನ ಮೆಚ್ಚಿದ್ದಾರೆ. ಇದರ ಆಧಾರದ ಮೇಲೆ ಮುಂದಿನ ಮೂರು ವಿಧಾನಸಭಾ ಹಾಗೂ ಒಂದು ಲೋಕಸಭಾ ಉಪಚುನಾವಣೆಯನ್ನು ಗೆದ್ದು ಬರುತ್ತೇವೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿದ ಅವರು, ನಾನು ಇದೇ ಬಜೆಟ್ ಬಗ್ಗೆ ಚುನಾವಣಾ ಪ್ರಚಾರದಲ್ಲಿ ಮಾತನಾಡುತ್ತೇನೆ. ನೀವು ಇದೇ ವಿಚಾರ ಪ್ರಸ್ತಾಪಿಸಿ ನೋಡೋಣ. ಚುನಾವಣೆ ಯಲ್ಲಿ ಗೆದ್ದು ಬಂದ ನಂತರ ಮತ್ತೆ ಇಲ್ಲೆ ಈ ಬಗ್ಗೆ ಮಾತನಾಡೋಣ ಎಂದರು.
ಇದಕ್ಕೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಾನು ಮುಖ್ಯಮಂತ್ರಿಯಾಗಿದ್ದಾಗ ಉಪ ಚುನಾವಣೆ ಗಳನ್ನು ಗೆದ್ದಿದ್ದೇನೆ. ಆಪರೇಷನ್ ಕಮಲದ ಮೂಲಕ ನೀವು ಅಧಿಕಾರಕ್ಕೆ ಬಂದದ್ದು.ನಿಮಗೆ ಅಷ್ಟೇ ವಿಶ್ವಾಸ ಇದ್ದರೆ, ವಿಧಾನಸಭೆ ವಿಸರ್ಜಿಸಿ ಬನ್ನಿ ಚುನಾವಣೆಗೆ ಹೋಗೋಣ. ಜನ ಯಾರನ್ನು ಆಯ್ಕೆ ಮಾಡುತ್ತಾರೋ ನೋಡೋಣ ಎಂದರು.