ಬೆಂಗಳೂರು – ಕೊರೊನಾ ರೂಪಾಂತರ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರಕ್ಕೆ ಅಗ್ರಹಿಸಿದ್ದಾರೆ. ಈ ಕುರಿತು ಸರಣಿ ಟ್ವಿಟ್ ಮಾಡಿರುವ ಮಾಜಿ ಸಿದ್ದರಾಮಯ್ಯನವರು, ಹೊಸ ರೂಪತದೊಂದಿಗೆ ಕಾಣಿಸಿಕೊಳ್ಳುತ್ತಿರುವ ಕೊರೊನಾ ವೈರಸ್ ತಡೆಯಲು ರಾಜ್ಯ ಸರ್ಕಾರವು ತಕ್ಷಣವೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲು ಮುಂದಾಗಬೇಕು. ಅಲ್ಲದೆ ಈ ಕುರಿತು ಕೂಲಂಕುಷವಾಗಿ ಮುಖ್ಯಮಂತ್ರಿಗಳು ತಜ್ಞರ ಸಲಹೆಗಳನ್ನು ಪಡೆದುಕೊಳ್ಳಬೇಕು, ಈ ಹಿಂದೆ ನಿರ್ಲಕ್ಷ್ಯದಿಂದಾಗಿ ಕೊರೊನ ಹಲವು ಪಾಠಗಳನ್ನು ಕಲಿಸಿ ಹೋಗಿದೆ. ಹಾಗಾಗಿ ರೂಪಾಂತರ ಕೊವೀಡ್ ತಡೆಯಲು ಅಗತ್ಯ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.
ರೂಪಾಂತರ ಕೊವೀಡ್ ತಡೆಯಲು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಟ್ಟು ನಿಟ್ಟಿನ ಪರೀಕ್ಷೆಯನ್ನು ಮಾಡಬೇಕು, ಹೋರ ದೇಶದಿಂದ ರಾಜ್ಯಕ್ಕೆ ಬರುವವರನ್ನು ಕಡ್ಡಾಯವಾಗಿ ಹೋಂ ಕ್ವಾರೈಂಟೆನ್‌ಗೆ ಒಳಪಡಿಸಬೇಕು, ಯಾವುದೇ ರೀತಿಯ ನಿರ್ಲಕ್ಷ್ಯ ವಹಿಸಬಾರದೆಂದಿದ್ದಾರೆ. ಸಾರ್ವಜನಿಕರು ಕೂಡಾ ಕೊರೊನಾ ರೂಪಾಂತರದಿಂದ ದೂರ ಉಳಿಯಲು, ಸಾಮಾಜೀಕ ಅಂತರ, ಸ್ಯಾನಿಟೈಸ್ ಹಾಗೂ ಮಾಸ್ಕ್‌ಗಳನ್ನು ಕಡ್ಡಾಯಾಗಿ ಬಳಕೆ ಮಾಡಬೇಕು ಎಂದು ಸಾರ್ವಜನಿಕರಿಗೆ ಕಿವಿ ಮಾತುಗಳನ್ನು ಹೇಳಿದ್ದಾರೆ.