ಧಾರವಾಡ –
ಕೆರೆಯಲ್ಲಿ ಮೊಸಳೆಯೊಂದು ಪತ್ತೆಯಾಗಿರುವ ಘಟನೆ ಧಾರವಾಡದ ಅಳ್ನಾವರ ಪಟ್ಟಣದಲ್ಲಿ ಕಂಡು ಬಂದಿದೆ. ಅಳ್ನಾವರದ ಹಿರೇಕೆರೆ ದಡದಲ್ಲಿ ಮೊಸಳೆಯೊಂದು ಪ್ರತ್ಯಕ್ಷವಾಗಿದೆ.
ಧಾರವಾಡ ಜಿಲ್ಲೆಯ ಅಳ್ನಾವರ ಪಟ್ಟಣದ ಕಾಶೇನಟ್ಟಿ ಗ್ರಾಮದಲ್ಲಿರುವ ಕೆರೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ಅಶ್ರಯ ಕಾಲನಿ, ಎಂಸಿ ಪ್ಲಾಟ್ ಜನ ಓಡಾಡುವ ರಸ್ತೆಯ ಬಳಿ ಇರುವ ಈ ಒಂದು ಕೆರೆಯಲ್ಲಿ ನಿತ್ಯ ನೂರಾರು ಜನ ಓಡಾಡುತ್ತಾರೆ. ಕೆರೆಯ ರಸ್ತೆಯ ಪಕ್ಕದಲ್ಲಿವ ಈ ಒಂದು ಕೆರೆ ಕೆರೆಯಲ್ಲಿ ನೀರು ಹೆಚ್ಚಿರುವ ಕಾರಣ ಮೊಸಳೆ ಸೆರೆಗೆ ಅಡ್ಡಿ ಇದೆ. ಅಲ್ಲದೇ ಕಳೆದ ವರ್ಷ ಇದೆ.ಪ್ರದೇಶದಲ್ಲಿ ಕಾಲೇಜ್ ಗೆ ಮೊಸಳೆ ನುಗ್ಗಿತ್ತು ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕರಿಗೆ ಆತಂಕ ಉಂಟಾಗಿತ್ತು.
ಸಧ್ಯ ಮತ್ತೆ ಮೊಸಳೆ ಕೆರೆಯಲ್ಲಿ ಕಾಣಿಸಿಕೊಂಡಿದೆ. ಹೀಗಾಗಿ ಇಲ್ಲಿ ಸುತ್ತಾಡುತ್ತಿರುವ ಎಲ್ಲರಿಗೂ ಭಯವಾಗುತ್ತಿದ್ದು ಆತಂಕದಿಂದ ಎಲ್ಲರೂ ತಿರುಗಾಡುತ್ತಿದ್ದಾರೆ. ಸಾಮಾನ್ಯವಾಗಿ ಗ್ರಾಮೀಣ ಪ್ರದೇಶದ ಕೆರೆ ಅಂದಾಕ್ಷಣ ಇಲ್ಲಿನ ನೀರನ್ನು ಎಲ್ಲದಕ್ಕೂ ಉಪಯೋಗ ಮಾಡ್ತಾರೆ ಹೀಗಿರುವಾಗ ಕೆರೆಯಲ್ಲಿಯೇ ಮೊಸಳೆ ಇದೆ ಅಂತಾ ಗೋತ್ತಾಗುತ್ತಿದ್ದಂತೆ ಎಲ್ಲರೂ ಭಯಗೊಂಡಿದ್ದು ಕೂಡಲೇ ಇದನ್ನು ಹಿಡಿದು ಬೇರೆ ಕಡೆ ಶಿಪ್ಟ್ ಮಾಡುವಂತೆ ಕೆಲೆ ಸುತ್ತ ಮುತ್ತಲಿನ ನಿವಾಸಿಗಳು ಒತ್ತಾಸಿದದ್ದಾರೆ.