ಕೊಪ್ಪಳ –
ಒಂಬತ್ತು ತಿಂಗಳ ಹೊತ್ತು ಹೆತ್ತ ತಾಯಿಯೇ ದೇವರು ಎಂದು ಪ್ರತಿಯೊಬ್ಬರೂ ಮಾತನಾಡುತ್ತಾರೆ. ಆದರೆ, ಹೆತ್ತು ಹೊತ್ತ ತಾಯಿಯನ್ನು ಸರಿಯಾಗಿ ನೋಡಿಕೊಳ್ಳಲಾಗದೇ ಇಬ್ಬರು ಮಕ್ಕಳು ಇಲ್ಲಿ ಮಕ್ಕಳೇ ಹೆತ್ತ ತಾಯಿಯನ್ನು ಬೀದಿಗೆ ತಳ್ಳಿರುವ ಅಮಾನವೀಯ ಘಟನೆ ನಡೆದಿದೆ.ಹೌದು ಇಂಥದೊಂದು ಘಟನೆಯೊಂದು ಕಂಡು ಬಂದಿದ್ದು ಕೊಪ್ಪಳದಲ್ಲಿ.ಕಾಲಿಲ್ಲದ ತಾಯಿ ಈಗ ಇಲ್ಲಿಯ ಬಂಡಿ ದುರ್ಗಾದೇವಿ ದೇವಸ್ಥಾನದಲ್ಲಿ ಮಕ್ಕಳಿಗಾಗಿ ಕಾಯುತ್ತ, ಕಣ್ಣೀರು ಹಾಕುತ್ತ ಕುಳಿತುಕೊಂಡಿದ್ದಾರೆ.

.
ದ್ರಾಕ್ಷಾಯಣಮ್ಮ ಎಂಬ ವೃದ್ಧೆಯೇ ಈ ನತದೃಷ್ಟೆ ತಾಯಿ ಇವರ ಕಾಲು ಗ್ಯಾಂಗ್ರಿನ್ ನಿಂದ ತುಂಡಾಗಿತ್ತು. ಹೀಗಾಗಿ ತಾಯಿಯನ್ನು ದೇವಸ್ಥಾನದಲ್ಲಿ ಬಿಟ್ಟು ಹೋಗಿದ್ದಾರೆ. ಆದರೂ ಈ ಪಾಪಿ ಮಕ್ಕಳು ಮರಳಿ ಬಂದು ಕರೆದುಕೊಂಡು ಹೋಗುತ್ತಾರೆ ಎಂದು ಕಾಯುತ್ತ ಕುಳಿತಿದ್ದಾಳೆ ತಾಯಿ. ಇನ್ನೂ ಇದನ್ನು ನೋಡಿದವರು ಕಣ್ಣೀರು ಹಾಕುವ ಸ್ಥಿತಿ ಸದ್ಯ ಇಲ್ಲಿ ನಿರ್ಮಾಣವಾಗಿದೆ.

ವೀರೇಶ್ ಹಾಗೂ ಚಂದ್ರಕಾಂತ್ ಎಂಬ ಪಾಪಿಗಳು ಹೆತ್ತ ತಾಯಿಯನ್ನು ಬೀದಿಯಲ್ಲಿ ಬಿಟ್ಟು ಹೋಗಿದ್ದಾರೆ.ಕಳೆದ ಒಂದು ತಿಂಗಳ ಹಿಂದೆಯೇ ದ್ರಾಕ್ಷಾಯಣಮ್ಮ ಅವರ ಕಾಲು ಗ್ಯಾಂಗ್ರಿನ್ ನಿಂದಾಗಿ ತುಂಡಾಗಿತ್ತು. ಆಸ್ಪತ್ರೆಗೆ ದಾಖಲಾದರೂ ಮಕ್ಕಳು ನೋಡಲು ಬಂದಿರಲಿಲ್ಲ. ಹೀಗಾಗಿ ವೈದ್ಯರೇ ಈ ತಾಯಿಯನ್ನು ಮನೆಗೆ ಬಂದು ಬಿಟ್ಟು ಹೋಗಿದ್ದರು. ಸದ್ಯ ಈ ಪಾಪಿ ಮಕ್ಕಳು ತಾಯಿಯನ್ನು ದೇವಸ್ಥಾನದಲ್ಲಿ ಬಳಿ ಬಿಟ್ಟು ಹೋಗಿದ್ದಾರೆ. ಈ ತಾಯಿ ಮಾತ್ರ ಮಕ್ಕಳಿಗಾಗಿ ಹಂಬಲಿಸುತ್ತಿದ್ದಾರೆ.