ರಾಯಚೂರು –
ರಾಬರ್ಟ್ ಚಿತ್ರದಲ್ಲಿ ಕಣ್ಣೇ ಅಧಿರಿಂದಿ ಫೈಟ್ ಚೆಧಿ ರಿಂದಿ ಕಾಲೇ ನಿಲವದು ಪಿಲಗ; ನಿನ್ನಟಿಕೆಲ್ಲಿ ಗಮ್ಮತಿ ಗುಂದಿ ಗುಂಡೆಲ ಲೊಲ್ಲಿ ಸಮ್ಮಗ ಉಂದಿ ಎನ್ನುತ್ತಾ ಎಲ್ಲರ ಮನದಲ್ಲೂ ನೆನಪುಳಿಯುಬಂತೆ ಸಖತ್ ಹಾಡು ಹಾಡಿರುವ ತೆಲಗು ಗಾಯಕಿ ಮಂಗ್ಲಿ ಈಗ ಚುನಾವಣೆಯ ಪ್ರಚಾರದ ಕಣಕ್ಕೆ ಇಳಿತಾ ಇದ್ದಾರೆ.

ಹೌದು ತೆಲುಗಿನ ಖ್ಯಾತ ಗಾಯಕಿ ಮಂಗ್ಲಿ ಅವರು ಕರ್ನಾಟಕದಲ್ಲಿ ನಡೆಯುತ್ತಿರುವ ಉಪಚುನಾವಣೆ ಪ್ರಚಾರದ ಅಖಾಡಕ್ಕಿಳಿಯಲಿದ್ದಾರೆ.ಹೌದು ಇದೇ ಏ. 13ರಂದು ಮಸ್ಕಿ ವಿಧಾನಸಭಾ ಉಪಚುನಾವ ಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀ ಲ್ ಪರ ಮಂಗ್ಲಿ ಅವರು ಪ್ರಚಾರ ನಡೆಸಲಿದ್ದಾರೆ.

ಮಂಗ್ಲಿ ಇತ್ತೀಚಿಗೆ ತೆಲುಗು ಅವತರಣಿಕೆಯ ರಾಬ ರ್ಟ್ ಸಿನಿಮಾದಲ್ಲಿ ಹಾಡಿದ ಕಣ್ಣೇ ಅದಿರಿಂದಿ ಹಾ ಡು ಕರ್ನಾಟಕದಲ್ಲೂ ಸಿಕ್ಕಪಟ್ಟೆ ಫೇಮಸ್ ಆಗಿತ್ತು. ಈಗ ಮಂಗ್ಲಿ ಫೆಮಸ್ ಬಳಸಿಕೊಂಡಿರುವ ಬಿಜೆಪಿ, ಮಸ್ಕಿ ಉಪಚುನಾವಣೆಯಲ್ಲಿ ಮಂಗ್ಲಿ ಯವರ ಮೂಲಕ ಮತ ಸೆಳೆಯಲು ಪ್ಲಾನ್ ಮಾಡಿದ್ದು ಹೀ ಗಾಗಿ ನಾಳೆ ಆಗಮಿಸಿ ಪಕ್ಷದ ಅಭ್ಯರ್ಥಿಪರ ಮತ ಯಾಚನೆ ಮಾಡಲಿದ್ದಾರೆ