ಬೆಂಗಳೂರು –
ಸಿಡಿ ಪ್ರಕರಣದಲ್ಲಿ ಲೇಡಿ ಪರವಾಗಿ ಸದಾ ಯಾವಾಗಲೂ ಮಾಧ್ಯಮಗಳ ಮುಂದೆ ಪ್ರಚಾರ ಗಿಟ್ಟಿಸಿಕೊಳ್ಳುತ್ತಿರುವ ವಕೀಲ ಜಗದೀಶ್ ಸಿಡಿ ಪ್ರಕರಣ ಯುವತಿ ಪರ ವಕೀಲರೇ ಅಲ್ಲ ಎಂದು ಎಸ್ ಐಟಿ ಹಿರಿಯ ಅಧಿಕಾರಿಗಳು ಪೊಲೀಸರಿಗೆ ದೂರು ನೀಡಿದ್ದಾರೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಸಂತ್ರಸ್ತೆ ಪರ ವಕೀಲ ಎಂದುಕೊಂಡಿ ದ್ದ ಜಗದೀಶ್ ವಿರುದ್ಧ ಎಸ್ ಐಟಿ ಪೊಲೀಸರು ಶುಕ್ರವಾರ ಹಿರಿಯ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.ಮಂಜು ಎಂಬುವವರು ಯುವತಿಯ ಪರ ವಕಾಲತ್ತು ಹಾಕಿದ್ದಾರೆ. ಆದರೆ ಜಗದೀಶ್ ವಕಾಲತ್ತು ಇಲ್ಲದಿದ್ದರೂ ಪ್ರಕರಣದಲ್ಲಿ ಮೂಗು ತೂರಿಸುವ ಮೂಲಕ ಕಿರಿಕಿರಿ ಮಾಡುತ್ತಿದ್ದಾರೆ. ಕೆಲಸ ಮಾಡುವ ಜಾಗದಲ್ಲಿ ಬಂದು ನಿಂತು ಸುಖಾಸುಮ್ಮನೆ ಕೂಗಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಪದೇಪದೇ ಮಾಧ್ಯಮಗಳ ಮುಂದೆ ನಿಂತು ಎಸ್‌ಐಟಿಯನ್ನು ನಿಂದಿಸುತ್ತಿರುವ ಜಗದೀಶ್, ಆರೋಪಿಯನ್ನು ಏಕೆ ಬಂಧಿಸಿಲ್ಲ ಅಂತ ಒತ್ತಡ ಹೇರುತ್ತಿದ್ದಾರೆ.ತನಿಖೆಯ ಬಗ್ಗೆ ಹೊರಗೆ ಹೇಳಿಕೆ ನೀಡಿ ತನಿಖಾಧಿಕಾರಿಗಳ ಆತ್ಮವಿಶ್ವಾಸ ಕುಗ್ಗಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಅವರು ಆರೋಪಿ ಸಿದರು