ಯಾದಗಿರಿ –
ಮಳೆ ಅಬ್ಬರಕ್ಕೆ ಸೋರುತ್ತಿದೆ ಸರ್ಕಾರಿ ಶಾಲೆಯ ಕಟ್ಟಡ ಶಾಲೆಯಲ್ಲಿ ಛತ್ರಿ ಹಿಡಿದು ಕುಳಿತುಕೊಳ್ಳುವ ಪರಿಸ್ಥಿತಿ ಕಂಡು ಬರುತ್ತಿರುವ ಚಿತ್ರಣ ಯಾದಗಿರಿ ಜಿಲ್ಲೆಯಲ್ಲಿ ಸಧ್ಯ ನೋಡಲು ಸಿಗುತ್ತದೆ.
ಯಾದಗಿರಿ ನಗರದ ಸ್ಟೇಷನ್ ಬಜಾರ್ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇಂತಹ ದೊಂದು ಚಿತ್ರಣ ಕಂಡು ಬರುತ್ತಿದ್ದು ಶಾಲೆಗೆ ಇರೋದೆ ಆರು ಕೋಣೆಗಳು ಆರು ಕೋಣೆಗಳು ಸೋರುತ್ತಿವೆ.ಮಳೆ ಅಬ್ಬರದಿಂದ ಮೇಲ್ಚಾವಣಿ ಕುಸಿದು ಬೀಳುವ ಹಂತಕ್ಕೆ ಬಂದಿದೆ
ಹೊರಗಡೆ ಮಳೆ ನೀರು ಯಾವ ರೀತಿ ಬಿಳುತ್ತಿದೆಯೋ ಅದೆ ರೀತಿ ಕೋಣೆಗಳಲ್ಲಿ ನೀರು ಬಿಳುತ್ತಿದೆ ಹೀಗಾಗಿ ಭಯದ ವಾತಾವರಣ ದಲ್ಲಿ ಶಾಲೆಯ ಶಿಕ್ಷಕರು ಕೈಯಲ್ಲಿ ಛತ್ರಿ ಹಿಡಿದು ಪಾಠ ಮಾಡುತ್ತಾ ಇತ್ತ ಛತ್ರಿ ಹಿಡಿದು ಕುಳಿತು ಕೊಂಡು ಮಕ್ಕಳು ಪಾಠ ಕೇಳುತ್ತಿದ್ದಾರೆ
ಮೇಲ್ಚಾವಣಿ ಕುಸಿದು ಬೀಳುವ ಆತಂಕದಿಂದ ಶಾಲೆ ಕೋಣೆಗಳ ಸಮೀಪ ಹೋಗಲು ಶಿಕ್ಷಕರು ಹಾಗೂ ಮಕ್ಕಳು ಹಿಂದೇಟು ಹಾಕುತ್ತಿದ್ದು ಏನು ಮಾಡಬೇಕು ಎಂಬ ದೊಡ್ಡ ಚಿಂತನೆಯಲ್ಲಿ ಇದ್ದಾರೆ.