ಭದ್ರಾವತಿ –
ಸಾಮಾನ್ಯವಾಗಿ ಸರ್ಕಾರಿ ಶಾಲೆಗಳು ಅಂದರೆ ಹಾಗೇ ಹೀಗೆ ಅನ್ನುವವರೇ ಹೆಚ್ಚು ಖಾಸಗಿ ಶಾಲೆಗಳ ನಡುವೆ ಇವುಗಳು ಕೂಡಾ ಬದಲಾಗಿದ್ದು ಹೈಟೇಕ್ ಗುಣ ಮಟ್ಟದ ಶಿಕ್ಷಣ ದೊಂದಿಗೆ ಇಲ್ಲೂ ಕೂಡಾ ಏನೇಲ್ಲಾ ಸಿಗುತ್ತದೆ ಎಂಬೊ ದನ್ನು ಶಿವಮೊಗ್ಗದ ಭದ್ರಾವತಿಯ ಬಾಲಿಕಾ ಸರ್ಕಾರಿ ಪ್ರೌಢ ಶಾಲೆ ತೊರಿಸಿಕೊಟ್ಟಿದೆ.
ಹೌದು ಇದಕ್ಕೆ ಸಾಕ್ಷಿ ಅಕ್ಷರ ಮಾತೆ ಸಾವಿತ್ರಿ ಬಾಯಿ ಫುಲೆ ಜನ್ಮ ದಿನಾಚರಣೆ ದಿನದಂದು ಆರಂಭ ಮಾಡಿದ ಕಾರ್ಯ ಕ್ರಮ.ಕೇವಲ ಶಿಕ್ಷಣವನ್ನು ನೀಡದ ಅದರೊಂದಿಗೆ ಜೀವ ನಕ್ಕೆ ಬೇಕಾಗಿರುವ ಕೆಲವೊಂದಿಷ್ಟು ಕೌಶಲ್ಯಾಧಾರಿತ ಶಿಕ್ಷಣವನ್ನು ಕಲಿಸಲಾಗುತ್ತಿದ್ದು 16 ರಿಂದ 29 ವರ್ಷದೊ ಳಗಿನ ಶಾಲೆಯಿಂದ ಹೊರಗುಳಿದ ಮತ್ತು ಶಾಲೆ ಬಿಟ್ಟ ಮತ್ತು ಶಿಕ್ಷಣವನ್ನು ಅರ್ಧದಲ್ಲೇ ಮೊಟಕುಗೊಳಿಸಿದ ಹೆಣ್ಣುಮಕ್ಕಳಿಗೆ ಕೌಶಲ್ಯಾಧಾರಿತ ಉಚಿತ ಡೇಟಾ ಎಂಟ್ರಿ ಮತ್ತು ಬ್ಯೂಟಿಷಿಯನ್ ತರಬೇತಿಯನ್ನು ಆರಂಭ ಮಾಡ ಲಾಗಿದ್ದು ಇದನ್ನು ನಿನ್ನೆ ಶಾಲೆಯಲ್ಲಿ ಉದ್ಘಾಟಿಸಲಾಯಿತು. ಸರ್ವ ಶಿಕ್ಷಣ ಕರ್ನಾಟಕ (SSK)ಶಿವಮೊಗ್ಗದ DYPC ಗಣಪತಿ, ಹಾಗೂ DYPC ಉಮಾಮಹೇಶ್ವರ್ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ T. N ಸೋಮಶೇಖರಯ್ಯ ಇವರು ಉದ್ಘಾಟನೆ ಮಾಡಿದರು.
ಸಾವಿತ್ರಿಬಾಯಿ ಫುಲೆ ರವರ ಜನ್ಮದಿನಾಚಾರಣೆ ಸುದಿನ ದಂದು ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ SDMC ಅಧ್ಯಕ್ಷರು, ತರಬೇತಿಗಾಗಿ ಆಗಮಿಸಿದ ಸಾರ್ವಜನಿಕರು, ಅಭ್ಯರ್ಥಿಗಳು ಹಾಜರಿದ್ದರು.ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಶಾಲೆಯ ಉಪಪ್ರಾಚಾರ್ಯರಾದ ಸುಮನ T. S ರವರು ವಹಿಸಿದ್ದರು ಮತ್ತು ಇಂಥಹ ಸರ್ಟಿಫಿಕೇಟ್ ಸಹಿತ ಉಚಿತ ತರಬೇತಿ ಯನ್ನು ಅಗತ್ಯವಿರುವ ಹೆಣ್ಣುಮಕ್ಕಳು ಪಡೆದುಕೊಂಡು ಬ್ಯೂಟಿ ಪಾರ್ಲರ್ ಮತ್ತು IT ಹಬ್ ಗಳಲ್ಲಿ ಡೇಟಾ ಎಂಟ್ರಿ ಆಪರೇಟರ್ಸ್ ಆಗಿ ಸ್ವಾವಲಂಬಿ ಯಾಗಿ ಬದುಕಬಹುದು ಹಾಗೇ ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳು ಸೇರಬೇಕು ಇದನ್ನು ಉಪಯೋಗ ಮಾಡಿ ಕೊಳ್ಳುವಂತೆ ಕರೆ ನೀಡಿದರು.ಈ ಒಂದು ಸಮಯದಲ್ಲಿ ಕಾರ್ಯಕ್ರಮದಲ್ಲಿ ಶಾಲೆಯ ಸಮಸ್ತ ಶಿಕ್ಷಕ ಬಂಧುಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.