ಹುಬ್ಬಳ್ಳಿ –
ಹೆಸರಿಗೆ ಮಾತ್ರ ಸ್ಮಾರ್ಟ್ ನೊಡಿದಲ್ಲೇಲ್ಲ ಡರ್ಟಿ ಸಿಟಿ – ಸ್ಮಾರ್ಟ್ ಸಿಟಿ ಕಾಮಗಾರಿಗಳಿಗೆ ಮುಕ್ತಿ ಯಾವಾಗ ಅಭಿವೃದ್ದಿ ಯಾವಾಗ ರಾಜು ನಾಯಕ ವಾಡಿ ಪ್ರಶ್ನೆ…..ಉತ್ತರಿಸಿರಿ ಜನಪ್ರತಿನಿಧಿಗಳೇ…..
ವ್ಯಾಪಾರ ವಹಿವಾಟುಗಳಿಗೆ ಹೆಸರಾಗಿರುವ ಉತ್ತರ ಕರ್ನಾಟಕದ ಹೆಬ್ಬಾಗಿಲು ಎಂದೇ ಕರೆಯಿಸಿಕೊಳ್ಳುವ ಹುಬ್ಬಳ್ಳಿ ಹೆಸರಿಗೆ ಮಾತ್ರ ವಾಣಿಜ್ಯ ನಗರಿ,ಸ್ಮಾರ್ಟ್ ಸಿಟಿ ಗಂಡು ಮೆಟ್ಟಿದ ನಾಡು ಹೀಗೆ ಕರೆಯಿಸಿಕೊಳ್ಳುತ್ತದೆ ಆದರೆ ಇದನ್ನೇಲ್ಲವನ್ನು ನೋಡಿದರೆ ಇಲ್ಲಿ ಯಾವುದೇ ರೀತಿಯ ಅಭಿವೃದ್ದಿಯಾಗಲಿ ಕೆಲಸ ಕಾರ್ಯ. ಗಳಾಗಲಿ ಕಂಡು ಬರೊದಿಲ್ಲ.
ಸಾಲು ಸಾಲಾಗಿ ಯೋಜನೆಗಳು ಮೇಲಿಂದ ಮೇಲೆ ಬಂದರು ಕೂಡಾ ಕೋಟಿ ಕೋಟಿ ಅನುದಾನ ಬಂದರು ಕೂಡಾ ಎಲ್ಲಿ ಹೋಗಿದೆ ಏನಾಗುತ್ತಿದೆ ಎಂಬ ಪರಸ್ಥಿತಿಯಲ್ಲಿ ಹುಬ್ಬಳ್ಳಿ ಯನ್ನು ನೋಡಿದರೆ ಗೋತ್ತಾಗುತ್ತದೆ.ಹೌದು ಇದಕ್ಕೆ ಸಾಕ್ಷಿ ಸಧ್ಯ ನಗರದಲ್ಲಿ ಕಂಡು ಬರುತ್ತಿರುವ ನರಕಯಾತನೆಯ ಚಿತ್ರಣವೇ ಸಾಕ್ಷಿಯಾಗಿದ್ದು ಒಂದು ರಸ್ತೆಯೂ ಸರಿಯಾಗಿಲ್ಲ ಒಂದು ಸರ್ಕಲ್ ಅಂದವಾಗಿಲ್ಲ ಚೆಂದವಾಗಿಲ್ಲ ಎಲ್ಲಿ ನೋಡಿದಲ್ಲಿ ಕೇಸರು ತೆಗ್ಗು ಗಳು ಹಾಳಾದ ರಸ್ತೆಗಳು ರಸ್ತೆ ಮೇಲೆ ಹರಿಯುತ್ತಿರುವ ಚರಂಡಿ ನೀರು ನಗರಕ್ಕೆ ಯಾರಾದರು ಬಂದರೆ ಅಯ್ಯೋ ಎನ್ನುತ್ತಾ ಮೂಗಿನ ಮೇಲೆ ಒಂದು ಕೈ ಇಟ್ಟುಕೊಂಡು ಛೀ ಥೂ ಎನ್ನುತ್ತಾ ಹೋಗುವಂತಹ ಪರಸ್ಥಿತಿ ನಿರ್ಮಾಣವಾಗಿದ್ದು
ಈ ಒಂದು ವ್ಯವಸ್ಥೆಯನ್ನು ಸರಿ ಮಾಡಿ ಎಂದು ಯುವ ಮುಖಂಡ ರಾಜು ನಾಯಕವಾಡಿ ಜನಪ್ರತಿನಿಧಿಗಳಿಗೆ ತಾಕೀತು ಮಾಡಿದ್ದಾರೆ ಕಂಡು ಕಾಣದಂತೆ ಇರುವ ಹುಬ್ಬಳ್ಳಿಯಲ್ಲಿನ ವ್ಯವಸ್ಥೆ ಯನ್ನು ಈ ಕೂಡಲೇ ಸರಿ ಮಾಡಿ ಅಂದ ಚೆಂದ ವಾಗಿ ಕಾಣುವಂತೆ ಮಾಡಿ ಹೆಸರಿಗೆ ಅಷ್ಟೇ ಸ್ಮಾರ್ಟ್ ಸಿಟಿ ಎಂದು ಕರೆಯಿಸಿಕೊಳ್ಳುವ ನಗರದ ಸೌಂದರ್ಯ್ಯವನ್ನು ಕಾಪಾಡಿ ಕೊಳ್ಳು ವಂತೆ ಆಗ್ರಹಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ……