ತಾಯಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಮಗ – ಧಾರವಾಡದಲ್ಲಿ ಆಸ್ತಿ ವಿಚಾರದ ಜಗಳ ಕೊಲೆಯಲ್ಲಿ ಅಂತ್ಯ…..ರಾಡ್ ನಿಂದ ಹೆತ್ತ ತಾಯಿಯನ್ನು ಕೊಲೆ ಮಾಡಿದ ರಾಜೇಂದ್ರ…..

Suddi Sante Desk
ತಾಯಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಮಗ – ಧಾರವಾಡದಲ್ಲಿ ಆಸ್ತಿ ವಿಚಾರದ ಜಗಳ ಕೊಲೆಯಲ್ಲಿ ಅಂತ್ಯ…..ರಾಡ್ ನಿಂದ ಹೆತ್ತ ತಾಯಿಯನ್ನು ಕೊಲೆ ಮಾಡಿದ ರಾಜೇಂದ್ರ…..

ಧಾರವಾಡ

ತಾಯಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಮಗ – ಧಾರವಾಡದಲ್ಲಿ ಆಸ್ತಿ ವಿಚಾರದ ಜಗಳ ಕೊಲೆಯಲ್ಲಿ ಅಂತ್ಯ…..ರಾಡ್ ನಿಂದ ಹೆತ್ತ ತಾಯಿಯನ್ನು ಕೊಲೆ ಮಾಡಿದ ರಾಜೇಂದ್ರ ಹೌದು

ಶಾಂತವಾಗಿದ್ದ ಧಾರವಾಡದಲ್ಲಿ ಮತ್ತೆ ನೆತ್ತರು ಹರಿದಿದೆ.ಹೌದು ಹೆತ್ತ ತಾಯಿಯನ್ನು ಕೊಲೆ ಮಾಡಿದ ಘಟನೆ ನಗರದಲ್ಲಿ ನಡೆದಿದೆ.ಹೌದು ತಾಯಿಯನ್ನು ಕೊಂದು ತಾಯಿಯ ಶವದ ಮುಂದೆಯೇ ಅತ್ಮಹತ್ಯೆಗೆ ಶರಣಾಗಿದ್ದಾರೆ ಮಗ.ಧಾರವಾಡ ಹೊಸಯಲ್ಲಾಪೂರ ಉಡುಪಿ ನಗರದಲ್ಲಿ ಈ ಒಂದು ಘಟನೆ ನಡೆದಿದೆ.

ಶಾರದಾ ಭಜಂತ್ರಿ (60)ಕೊಲೆಯಾದ ದುರ್ದೈ ವಿಯಾಗಿದ್ದು ಇವರ ಮಗ ರಾಜೇಂದ್ರ ಭಜಂತ್ರಿ(40)ಕೊಲೆ ಮಾಡಿದ ವ್ಯಕ್ತಿಯಾಗಿ ದ್ದಾನೆ.ರಾಡ್‌ನಿಂದ ಹೊಡೆದು ತಾಯಿಯನ್ನು ಭೀಕರವಾಗಿ ಕೊಲೆಯನ್ನು ಮಾಡಿದ್ದಾನೆ.ಬಳಿಕ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾನೆ.

ಮಾನಸಿಕವಾಗಿ ತೊಂದರೆಯನ್ನು ಅನುಭವಿ ಸುತ್ತಿದ್ದ ರಾಜೇಂದ್ರ. ಹಣಕ್ಕಾಗಿ ತಾಯಿಯನ್ನು ಪೀಡಿಸುತ್ತಿದ್ದ ರಾಜೇಶ್.ತಾಯಿಗೆ ಬರುತ್ತಿದ್ದ ಪಿಂಚಣಿ ಮೇಲೆ ಮಗನ ಕಣ್ಣು ಕೂಡಾ ಬಿದ್ದಿತ್ತು ಖಾಲಿ ಜಾಗ ತನಗೆ ಕೊಡುವಂತೆ ದುಂಬಾಲು ಬಿದ್ದಿದ್ದನು.ಅಲ್ಲಿ ಮನೆ ಕಟ್ಟಿಸಿಕೊಳ್ಳೋದಾಗಿ ದುಂಬಾಲು ಬಿದ್ದಿದ್ದ ರಾಜೇಂದ್ರ.ಮಗನಿಗೆ ತಾಯಿ ಜಾಗವನ್ನು ಕೊಡಲು ನಿರಾಕರಿಸಿದ್ದಕ್ಕೆ

ಇಬ್ಬರ ನಡುವೆ ಈ ಒಂದು ಜಗಳ ನಡೆದಿದ್ದು ತಾಯಿ ಮಗನ ನಡುವಿನ ಇಬ್ಬರ ಜಗಳ ತಾರಕಕ್ಕೇರಿದ್ದು ಆಸ್ತಿ ಜಗಳ ಕೊಲೆಯಲ್ಲಿ ಅಂತ್ಯವಾಗಿದ್ದು ತಾಯಿಯನ್ನು ಕೊಲೆ ಮಾಡಿದ ನಂತರ ರಾಜೇಂದ್ರ ಆತ್ಮಹತ್ಯೆಯಲ್ಲಿ ಶರಣಾಗಿ ದ್ದಾನೆ.

ಇನ್ನೂ ಈ ಒಂದು ಸುದ್ದಿಯನ್ನು ತಿಳಿದ ಉಪನಗರ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಿದ್ದಾರೆ.ಈ ಕುರಿತಂತೆ ದೂರನ್ನು ದಾಖಲು ಮಾಡಿಕೊಂಡಿದ್ದು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಧಾರವಾಡ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.