ಹುಬ್ಬಳ್ಳಿ –
ಹುಬ್ಬಳ್ಳಿ ಧಾರವಾಡದಲ್ಲಿ ಬೈಕ್ ಕಳ್ಳರು ಹೆಚ್ಚಾಗಿದ್ದಾರೆ ಎನ್ನೊದಕ್ಕೆ ಈ ಒಂದು ಕಳ್ಳತನವೇ ಸಾಕ್ಷಿ, ಹೌದು ಹುಬ್ಬಳ್ಳಿಯ ಹೋಟೆಲ್ ಮುಂಭಾಗ ದಲ್ಲಿ ನಿಲ್ಲಿಸಿದ ಡಿಯೊ ಸ್ಕೂಟರ್ ದ್ವಿ ಚಕ್ರವಾಹನ ವನ್ನು ಹಾಡು ಹಗಲೇ ಚಾಲಾಕಿ ಕಳ್ಳನೊಬ್ಬ ಎಗರಿಸಿದ್ದಾನೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಈ ಒಂದು ಘಟನೆ ನಡೆದಿದೆ. ಕಳ್ಳನ ಕೃತ್ಯವು ಹೊಟೇಲ್ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ನಗರದ ವಿದ್ಯಾನಗರ ದ ಗುರುದತ್ತ ಭವನ ಗಾರ್ಡ್‌ನ ಹತ್ತಿರ, ಗೋಕುಲ ರಸ್ತೆಯ ಲಿಡಕರ್ ಕಾಲನಿ ನಿವಾಸಿ ಶಿವಾಜಿ ಕಾಂಬಳೆ ಎಂಬುವರ ಡಿಯೋ ಸ್ಕೂಟಿ ನಿಲ್ಲಿಸಿ ಬ್ಯಾಂಕ್ ಕೆಲಸಕ್ಕೆ ತೆರಳಿದ್ದರು. ಆದರೆ ಬೈಕ್ ನಿಲ್ಲಿಸಿದ ಜಾಗದಲ್ಲಿ ಚಾಲಕಿ ಕಳ್ಳ ತನ್ನದೇ ಸ್ವಂತ ವಾಹನ ಎನ್ನುವ ತರಹ ಬಂದು ಸ್ಥಳಿಯರಲ್ಲಿ ಅನುಮಾನ ಬರದಂತೆ, ಎರಡು ಬಾರಿ ಬೈಕ್ ಹೆಂಡಲ್ ಅನ್ ಲಾಕ್ ಮಾಡಲು ಪ್ರಯತ್ನಿಸಿ ಎರಡನೇ ಬಾರಿಗೆ, ಹೆಂಡಲ್ ಅನ್ ಲಾಕ್ ಆಗುತ್ತಿದಂತೆ ಸ್ಥಳದಿಂದ ಬೈಕ್ ಎಗರಿಸಿಕೊಂಡು ಹೋಗಿದ್ದಾನೆ.
ಇನ್ನೂ ಚಾಲಕಿ ಕಳ್ಳನ ಕೃತ್ಯವು ಸಿಸಿ ಟಿವಿ ಕ್ಯಾಮರೆ ದಲ್ಲಿ ಸೇರೆಯಾಗಿದ್ದು, ಈ ಕುರಿತು ಶಿವಾಜಿ ಕಾಂಬಳೆ ವಿದ್ಯಾನಗರ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ.ಪ್ರಕರಣ ದಾಖಲಿಸಿಕೊಂಡು ಪೊಲೀಸರು ಈಗ ಚಾಲಾಕಿ ಕಳ್ಳನ ಬಂಧನಕ್ಕಾಗಿ ಬಲೆ ಬಿಸಿದ್ದಾರೆ.