ಧಾರವಾಡ –
ಹಾಡು ಹಗಲೇ ಧಾರವಾಡದಲ್ಲಿ ಕಳ್ಳತನ ಬಾಯಗುದ್ಲಿ ಯಿಂದ ಮನೆ ಬಾಗಿಲು ಮುರಿದು ಈಳಿಗೆ ಯಿಂದ ಕಪಾಟು ಮೀಟಿ ರೊಟ್ಟಿ ಮಂಜವ್ವನ ಮನೆಯಲ್ಲಿ ಕಳ್ಳತನ ಧಾರವಾಡದಲ್ಲಿ ಏನಾಗುತ್ತಿದೆ…..
ಪೊಲೀಸರಿಗೆ ಯಾರ ಭಯವೂ ಹೆದರಿಕೆ ಅಂಜಿಕೆ ಇಲ್ಲದಂತಾಗಿದೆ.ಒಂದೇ ವಾರದಲ್ಲಿ ಧಾರವಾಡ ದಲ್ಲಿ ಐದು ಕೊಲೆ ನಡೆದ ಬೆನ್ನಲ್ಲೇ ಸಧ್ಯ ನಗರ ದಲ್ಲಿ ಹಾಡು ಹಗಲೇ ಭಾರಿ ಪ್ರಮಾಣದಲ್ಲಿ ಕಳ್ಳತನ ನಡೆದಿದೆ.ಹೌದು ನಗರದ ಕುಮಾರೇಶ್ವರ ನಗರದಲ್ಲಿನ ಕಾಮಾಕ್ಷಿ ಕಾಲೋನಿಯಲ್ಲಿ ಈ ಒಂದು ಕಳ್ಳತನ ನಡೆದಿದೆ.
ಫಕೀರಪ್ಪ ಯಕ್ಕುಂಡಿ ಎಂಬುವರ ಮನೆಯಲ್ಲಿ ಕಳ್ಳತನ ನಡೆದಿದ್ದು ಮಧ್ಯಾಹ್ನ ಸಮಯದಲ್ಲಿ ಮನೆಗೆ ಬೀಗ ಹಾಕಿರುವ ಸಮಯವನ್ನು ನೋಡಿದ ಖದೀಮರು ಮನೆಗೆ ಎಂಟ್ರಿ ಕೊಟ್ಟಿ ದ್ದಾರೆ.ಮಟ ಮಟ ಮಧ್ಯಾಹ್ನದ ಸಮಯದಲ್ಲಿ ಸೋಮವಾರ ಮನೆಯ ಮಂದೆ ಬಂದು ಕೀ ಹಾಕಿರುವುದನ್ನು ಅರಿತ ಕಳ್ಳರು ಬಾಯಗುದ್ಲಿ ಯಿಂದ ಮನೆಗೆ ಹಾಕಿರುವ ಕೀ ಹೊಡೆದು ಪ್ರವೇಶ ಮಾಡಿದ್ದಾರೆ
ಮನೆಯ ಎಲ್ಲವನ್ನೂ ನೋಡಿ ನಂತರ ಕಪಾಟನ್ನು ಮನೆಯಲ್ಲಿದ್ದ ಈಳಿಗೆಯಿಂದಲೇ ಮೀಟಿ ಓಪನ್ ಮಾಡಿದ್ದಾರೆ.ಅದರಲ್ಲಿದ್ದ 55 ಸಾವಿರ ನಗದು ಹಣ ಮತ್ತು 9 ತೊಲೆ ಬಂಗಾರವನ್ನು ಕದ್ದು ಎಸ್ಕೇಫ್ ಆಗಿದ್ದಾರೆ.ತುಂಬಾ ಬಡತನದ ಈ ಒಂದು ಕುಟುಂಬದಲ್ಲಿ ಫಕೀರಪ್ಪ ಗೌಂಡಿ ಕೆಲಸ ವನ್ನು ಮಾಡುತ್ತಿದ್ದರೆ ಇವರ ಪತ್ನಿ ಮಂಜುಳಾ ಅವರಿವರ ಮನೆಯಲ್ಲಿ ಪ್ರತಿದಿನ ಕೆಲಸವನ್ನು ಮಾಡುತ್ತಾ ದುಡಿಯುತ್ತಾರೆ
ಹೀಗಿರುವಾಗ ಮನೆಯಲ್ಲಿ ಯಾರು ಇಲ್ಲದ ಸಮಯವನ್ನು ಅರಿತ ಖದೀಮರು ಸ್ಕೇಚ್ ಹಾಕಿಕೊಂಡು ಕಳ್ಳತನಕ್ಕೆ ಪ್ಲಾನ್ ಮಾಡಿದ್ದಾರೆ. ಸಧ್ಯ ಹೊರಗಡೆ ಹೋಗಿದ್ದ ಯಕ್ಕುಂಡಿ ಪ್ಯಾಮಿಲಿ ಯವರು ಮನೆಗೆ ಬಂದು ನೋಡಿದಾಗ ವಿಚಾರ ತಿಳಿದಿದ್ದು ಕೂಡಲೇ ಉಪನಗರ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದಾರೆ ಸುದ್ದಿಯನ್ನು ತಿಳಿದ ಉಪನಗರ ಪೊಲೀಸರು ಸ್ಥಳಕ್ಕೇ ಆಗಮಿಸಿ ಪರಿಶೀಲನೆ ಮಾಡಿದ್ದು
ಈ ಕುರಿತಂತೆ ದೂರನ್ನು ದಾಖಲು ಮಾಡಿಕೊಂ ಡಿದ್ದು ತನಿಖೆಯನ್ನು ಕೈಗೊಂಡಿದ್ದಾರೆ.ಒಂದೇ ವಾರದಲ್ಲಿ ಐದು ಕೊಲೆಗಳು ನಡೆದ ಬೆನ್ನಲ್ಲೇ ಹಾಡು ಹಗಲೇ ನಡೆದ ಈ ಒಂದು ಕಳ್ಳನತದಿಂದ ಧಾರವಾಡದ ಜನತೆ ಭಯಗೊಂಡಿದ್ದು ಪೊಲೀಸರು ಏನು ಮಾಡ್ತಾ ಇದ್ದಾರೆ ಬೀಟ್ ಹೆಚ್ಚಿಸುತ್ತೇವೆ ಎಂದು ಹೇಳಿದ್ದ ಪೊಲೀಸ್ ಆಯುಕ್ತರ ಸಂದೇಶದ ಬೆನ್ನಲ್ಲೇ ನಗರದಲ್ಲಿ ಮತ್ತೆ ಏನಾಗುತ್ತಿದೆ ಎಂಬ ಪ್ರಶ್ನೆಯನ್ನು ಮಾಡ್ತಾ ಇದ್ದಾರೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ…..