ಕಲಬುರಗಿ-
ಸಾಮಾನ್ಯವಾಗಿ ಯಾವುದೇ ಒಂದು ವ್ಯಕ್ತಿಯ ಹೆಸರಿನಲ್ಲಿ ಇಲ್ಲವೆ ಅವರ ಮನೆಯ ಮುಂದೆ ಇಲ್ಲವೇ ಸಾರ್ವಜನಿಕರು ಸುತ್ತಾಡುವ ಸ್ಥಳದಲ್ಲಿ ಆಗಲಿ ವಾಮಾಚಾರ ಮಾಡೊದನ್ನ ಕೇಳಿದ್ದೇವಿ ನೋಡಿದ್ದೇವೆ ಆದರೆ ಕಲಬುರಗಿಯ ಜಿಲ್ಲಾಧಿಕಾರಿ ಕಚೇರಿಗೂ ವಾಮಾಚಾರವನ್ನು ಮಾಡಲಾಗಿದೆ.

ಹೌದು ಕಲಬುರಗಿಯ ಜಿಲ್ಲಾಡಳಿತಕ್ಕೇ ವಾಮಾಚಾರವನ್ನು ಮಾಡಿದ್ದಾರೆ. ಕಚೇರಿಯ ಮುಖ್ಯ ದ್ವಾರದ ಮುಂದೆ ಯಾರೋ ವಾಮಾಚಾರವನ್ನು ಮಾಡಿದ್ದಾರೆ.

ಒಂದು ಮೊಟ್ಟೆ ಒಂದು ಲಿಂಬಿಹಣ್ಣನ್ನು ಇಟ್ಟು ಮಾಮಾಚಾರ ಮಾಡಿದ್ದಾರೆ.ಕಲಬುರಗಿ ಜಿಲ್ಲಾಡಳಿತಕ್ಕೂ ವಾಮಾಚಾರವನ್ನು ಮಾಡಿದ್ದು ಜಿಲ್ಲಾಡಳಿತದ ಮುಖ್ಯ ದ್ವಾರದ ಬಳಿ ನಿಂಬೆಹಣ್ಣು, ಮೊಟ್ಟೆಯನ್ನು ಇಟ್ಟು ಮಾಡಲಾಗಿದೆ.

ತಡರಾತ್ರಿ ಕಿಡಿಗೆಡಿಗಳಿಂದ ಈ ಒಂದು ಕೃತ್ಯ ನಡೆದಿದ್ದು ಇದೊಂದು ವಾಮಾಚಾರವಾಗಿದ್ದು ಯಾತಕ್ಕಾಗಿ ಮಾಡಿದ್ದಾರೆ ಯಾರು ಮಾಡಿದ್ದಾರೆ ಎಂಬ ಕುರಿತಂತೆ ಪೊಲೀಸರು ಪರಿಶೀಲನೆ ಮಾಡ್ತಾ ಇದ್ದಾರೆ.