ಜಮಖಂಡಿ –
ಮತದಾನ ಕುರಿತಂತೆ ಸಂಗಮೇಶ ಮಲಕಪ್ಪನವರಿಂದ ವಿಶೇಷ ಜಾಗೃತಿ – ವಿನೂತನ ಹೆಜ್ಜೆಯೊಂದಿಗೆ ಮತದಾನ ಕುರಿತಂತೆ ಸಾಮಾಜಿಕ ಜಾಲ ತಾಣಗಳಲ್ಲಿ ಜಾಗೃತಿ ಮೂಡಿಸುತ್ತಿರುವ ಸರ್ಕಾರಿ ನೌಕರ
ಮತದಾನ ಕುರಿತಂತೆ ವಿಭಿನ್ನವಾಗಿ ವಿಶೇಷವಾಗಿ ಜಾಗೃತಿಯನ್ನು ಎಲ್ಲೇಡೆ ಮೂಡಿಸಲಾಗುತ್ತಿದೆ. ಮತದಾನ ಮಾಡಿ ಎಂಬ ಸಂದೇಶ ಎಂಬ ವಿಭಿನ್ನವಾದ ಜಾಗೃತಿ ಬೇರೆ ಬೇರೆಯಾಗಿ ನಡೆ ಯುತ್ತಿದ್ದು ಈ ಒಂದು ನಿಟ್ಟಿನಲ್ಲಿ ಇತ್ತ ತಾಲ್ಲೂಕು ಪಂಚಾಯತ ನೌಕರರೊಬ್ಬರು ವಿಭಿನ್ನವಾಗಿ ವಿಶೇಷವಾಗಿ ಮತದಾನ ಮಾಡುವ ಕುರಿತಂತೆ ಜಾಗೃತಿಯೊಂದನ್ನು ಮೂಡಿಸುತ್ತಿದ್ದಾರೆ.
ಹೌದು ಜಮಖಂಡಿಯ ತಾಲ್ಲೂಕು ಪಂಚಾಯತ ನಲ್ಲಿ ಎಫ್ ಡಿಎ ನೌಕರರಾಗಿರುವ ಸಂಗಮೇಶ ಮಲಕಪ್ಪನವರ ಇವರಿಂದ ಈ ಒಂದು ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ.ಹಲವಾರು ಬೇರೆ ಬೇರೆ ಚಟುವಟಿಕೆಗಳ ಮೂಲಕ ಸಾಮಾಜಿಕ ಸಂದೇಶಗಳನ್ನು ನೀಡುತ್ತಿರುವ ಸಂಗಮೇಶ ಮಲಕಪ್ಪನವರ ಇವರು ಸಧ್ಯ ಲೋಕಸಭಾ ಚುನಾವಣೆಯ ಹಿನ್ನಲೆಯಲ್ಲಿ ಮತದಾನದ ಕುರಿತು ಜಾಗೃತಿಯನ್ನು ಮೂಡಿಸುತ್ತಿದ್ದಾರೆ.
ಈ ಒಂದು ಮೂಲಕ ಮತದಾನ ಹೆಚ್ಚಿಸುವ ನಿಟ್ಟಿನಲ್ಲಿ ಒಂದು ವಿನೂತನ ಹೆಜ್ಜೆ ಹಾಕಿದ್ದು ರಾಜ್ಯದ ಸರ್ಕಾರಿ ನೌಕರರಿಗೆ ಅಧಿಕಾರಿಗಳಿಗೆ ಮಾದರಿಯಾಗಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಜಮಖಂಡಿ……