ಚಿಕ್ಕಮಗಳೂರು –
ಸಾಮಾನ್ಯವಾಗಿ ಯಾವುದೇ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿದರೆ ನಗದು ಹಣ ಮತ್ತು ಕಪ್ ಕೊಡೊದು ಇಡೊದು ಸರ್ವೆ ಸಾಮಾನ್ಯ ಆದರೆ ಇಲ್ಲೊಂದು ಪಂದ್ಯಾವಳಿಯ ಪ್ರಶಸ್ತಿ ನೋಡಿದರೆ ಕೇಳಿದರೆ ತಲೆ ತಿರುತ್ತದೆ.ಹೌದು ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆಯಲ್ಲಿ ಕ್ರಿಕೆಟ್ ಟೂರ್ನಿ ಆಯೋಜನೆ ಮಾಡಲಾಗಿದ್ದು, ಆಯೋಜಕರು ಪಂದ್ಯಾವಳಿಯಲ್ಲಿ ಗೆದ್ದವರಿಗೆ ಭಾರೀ ಮೊತ್ತದ ಬಹುಮಾನ ಘೋಷಣೆ ಮಾಡಿದ್ದಾರೆ. ಆಯೋಜ ಕರು ಗೆದ್ದವರಿಗೆ ನೀಡುವ ಬಹುಮಾನದ ಮಾಹಿತಿ ಕೇಳಿದರೆ ನೀವೂ ಸಹ ಒಂದು ತಂಡ ಕಟ್ಟಿಕೊಂಡು ಚಿಕ್ಕಮಗಳೂರಿಗೆ ದೌಡಾಯಿಸುವುದರಲ್ಲಿ ಯಾವುದೇ ಅನುಮಾನವಿಲ್ಲ.

ಹೌದು.. ಕಾಫಿ ನಾಡಿನ ಕ್ರಿಕೆಟ್ ಪ್ರೇಮಿಗಳು ಫೆಬ್ರವರಿಯಂದು ಜಿಲ್ಲೆಯ ಕಡಬಗೆರೆ ಗಾಂಧಿ ಮೈದಾನದಲ್ಲಿ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಮಾಡಿದ್ದು, ಪಂದ್ಯಾವಳಿಯಲ್ಲಿ ಗೆದ್ದವರಿಗೆ ಭಾರಿ ಮೊತ್ತದ ಹಾಗೂ ತುಂಬಾ ವಿಶಿಷ್ಟಕರವಾದ ಬಹುಮಾನ ನೀಡುವುದಾಗಿ ಪ್ರಚಾರ ನೀಡಿದ್ದಾರೆ. ಆಯೋಜಕರು ನೀಡುವ ಬಹುಮಾನಗಳ ಲಿಸ್ಟ್ ನೋಡಿದ ರಾಜ್ಯದ 400 ಕ್ಕೂ ಹೆಚ್ಚು ಕ್ರಿಕೆಟ್ ತಂಡಗಳು ಈಗಾಗಲೇ ತಾವು ಸಹ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸುವುದಾಗಿ ನೊಂದಣಿ ಮಾಡಿಕೊಳ್ಳಲು ಈಗ ಮುಗಿಬಿದ್ದಿದ್ದಾರೆ. ಹೀಗೆ ಸಂಚಲನ ಮೂಡಿಸಿರುವ ಕ್ರಿಕೆಟ್ ಪಂದ್ಯಾವಳಿಯ ಬಹುಮಾನಗಳೇ ಇದಕ್ಕೆ ಪ್ರಮುಖ ಕಾರಣ.

ಮೊದಲನೇ ಬಹುಮಾನ- 30 ಕೆ. ಜಿ ತೂಗುವ ಕುರಿ ಹಾಗೂ 1 ಕೇಸ್ ಬಿಯರ್ ಎರಡನೇ ಬಹುಮಾನ- 6 ನಾಟಿ ಕೋಳಿ, 1 ಫುಲ್ ಬಾಟಲ್ ದುಬಾರಿ ಮದ್ಯ ಹಾಗೂ 1 ಕೇಸ್ ಬಿಯರ್ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ತಂಡಗಳಿಗೂ ತಂಪು ಪಾನೀಯವನ್ನು ಬಹುಮಾನವನ್ನಾಗಿ ನೀಡುವು ದಾಗಿ ಹೇಳಿದ್ದಾರೆ. ಇಷ್ಟೆ ಅಲ್ಲದೆ ಸರಣಿ ಶ್ರೇಷ್ಠ ಆಟಗಾರನಿಗೆ 5 ಕೆ.ಜಿ ಈರುಳ್ಳಿ, ಉತ್ತಮ ದಾಂಡಿಗನಿಗೆ 1 ಕೆ.ಜಿ ಖಾರದ ಪುಡಿ ಹಾಗೂ ಉತ್ತಮ ಬೌಲರ್‌ಗೆ 2 ಲೀಟರ್ ಅಡುಗೆ ಎಣ್ಣೆ ನೀಡುವುದಾಗಿ ಬಹುಮಾನ ಘೋಷಿಸಿದ್ದಾರೆ.

ಈ ವಿಶೇಷವಾದ ಬಹುಮಾನಗಳನ್ನು ನೋಡಿ ಈಗಾಗಲೇ 400 ತಂಡಗಳಿಂದ ಪೊನ್ ಕರೆ ಮಾಡಿದ್ದಾರಂತೆ. ಬಹುಮಾನದ ಲಿಸ್ಟ್ ನೋಡಿದ ರಾಜ್ಯದ ನಾನಾ ಕ್ರಿಕೆಟ್ ತಂಡಗಳ ಕ್ಯಾಪ್ಟನ್ ಗಳು ಆಯೋಜಕರಿಗೆ ಫೋನ್ ಮಾಡಲು ಪ್ರಾರಂಭಿಸಿ ದ್ದಾರೆ. ಪ್ರಕಟಣೆ ಹೊರಡಿಸಿದ ಒಂದೇ ದಿನದಲ್ಲಿ ರಾಜ್ಯದ ನಾನಾ ಕಡೆಯಿಂದ 400 ಕ್ಕೂ ಹೆಚ್ಚು ತಂಡಗಳು ಕರೆ ಮಾಡಿದ್ದಾರೆ. ಹೀಗಾಗಿ ಅಪಾರ ಫೋನ್ ಕರೆಗಳಿಂದ ಹೆದರಿದ ಆಯೋಜಕರು ಸದ್ಯಕ್ಕೆ ಪಂದ್ಯಾವಳಿಯನ್ನು ರದ್ದುಗೊಳಿಸಿದ್ದು ಮುಂದೇನು ಮಾಡತಾರೆ ಎಂಬುದನ್ನು ಕಾದು ನೋಡಬೇಕು.