ಸೊರಬ –
ಹುಟ್ಟುವಾಗಲೂ ಅವಳಿ ಜವಳಿಯಾಗಿ ಹುಟ್ಟಿ ಈಗ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲೂ ಅವಳಿ ಜವಳಿಯಾಗಿ ಅಂಕಗಳನ್ನು ಇಬ್ಬರು ಸಹೋದರಿಬ್ಬರು ಪಡೆದುಕೊಂಡು ಈಗ ಗಮನ ಸೆಳೆದಿದ್ದಾರೆ.ಹೌದು ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣದ ಶ್ರೀ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಅವಳಿ ಸಹೋದರಿಯರಾದ ಮಾನ್ಯ ವಿ. ಹೆಬ್ಬಾರ್ ಹಾಗೂ ಮುಕ್ತಾ ವಿ. ಹೆಬ್ಬಾರ್ SSLC ಪರೀಕ್ಷೆಯಲ್ಲಿ ಸಮಾನ ಅಂಕಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.
ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕ ವಿಕ್ರಂ ಹೆಬ್ಬಾರ್ ಹಾಗೂ ಶೈಲಜಾ ಹೆಬ್ಬಾರ್ ದಂಪತಿಯ ಅವಳಿ ಪುತ್ರಿಯರು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇ.95 ಅಂಕಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.
ಓದಿನ ಗೊಂದಲಗಳಿದ್ದಲ್ಲಿ ಶಿಕ್ಷಕರಿಂದ ಮಾರ್ಗದರ್ಶನ ಪಡೆದಿದ್ದಾರೆ.ಪರಸ್ಪರ ಚರ್ಚಿಸಿ ಪರಿಹಾರ ಕಂಡುಕೊಂಡಿ ದ್ದಾರೆ.ಇಬ್ಬರು ವಿದ್ಯಾರ್ಥಿನಿಯರು ಪ್ರತಿಭಾನ್ವಿತರಾಗಿದ್ದು ಹಿಂದೂಸ್ತಾನಿ ಸಂಗೀತದಲ್ಲಿ ಜ್ಯೂನಿಯರ್ ಪರೀಕ್ಷೆ ಉತ್ತೀ ರ್ಣರಾಗಿದ್ದಾರೆ.ಪೂರ್ವ ಪ್ರಾಥಮಿಕ ಶಿಕ್ಷಣದಿಂದಲೂ ಸಮಾನ ಅಂಕಗಳಿಸುತ್ತಿದ್ದಾರೆ.SSLC ಫಲಿತಾಂಶದಲ್ಲಿ ಮಾನ್ಯ ವಿ. ಹೆಬ್ಬಾರ್ ಕನ್ನಡದಲ್ಲಿ 123, ಇಂಗ್ಲೀಷ್ ಮತ್ತು ಹಿಂದಿಯಲ್ಲಿ 100, ಗಣಿತ 89, ವಿಜ್ಞಾನ 92 ಹಾಗೂ ಸಮಾಜ 94 ಅಂಕಗಳೊಂದಿಗೆ ಒಟ್ಟು 598 ಅಂಕಗಳಿಸಿ ಶೇ. 95.68 ಅಂಕಗಳಿಸಿದ್ದರೆ, ಮುಕ್ತಾ ವಿ. ಹೆಬ್ಬಾರ್ ಕನ್ನಡ 125, ಇಂಗ್ಲೀಷ್ 97, ಹಿಂದಿ ಮತ್ತು ಸಮಾಜದಲ್ಲಿ 100, ಗಣಿತ 86 ಮತ್ತು ವಿಜ್ಞಾನ 87 ಅಂಕಗಳೊಂದಿಗೆ ಒಟ್ಟು 595 ಅಂಕಗಳಿಸಿ ಶೇ. 95.20 ಅಂಕಗಳಿಸುವ ಮೂಲಕ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ನಿತ್ಯ ಎಲ್ಲ ವಿಷಯಗಳಿಗೂ ಸಮಾನವಾದ ಮಹತ್ವ ನೀಡಿ ವೇಳಾಪಟ್ಟಿ ಮಾಡಿಕೊಂಡು ಅಭ್ಯಾಸ ಮಾಡಿದೆವು. ಶಿಕ್ಷಕ ರಿಂದ ಅಗತ್ಯ ಮಾರ್ಗದರ್ಶನ ಪಡೆಯುತ್ತಿದ್ದೇವು.ಹಳೆ ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುತ್ತಿದ್ದೇವು.ಮನೆಯಲ್ಲಿಯೂ ಪೋಷ ಕರು ಶಿಕ್ಷಣಕ್ಕೆ ಅಗತ್ಯವಿರುವ ವ್ಯವಸ್ಥೆಯನ್ನು ಕಲ್ಪಿಸಿದ್ದರು. ಪಿಯುಸಿ ವಾಣಿಜ್ಯ ವಿಭಾಗಕ್ಕೆ ಪ್ರವೇಶ ಪಡೆದು ಅಲ್ಲಿಯೂ ಉತ್ತಮ ಸಾಧನೆ ಮಾಡಬೇಕು.ಎಸ್ಸೆ SSLC ಫಲಿತಾಂಶ ವೇಳೆ ಇಬ್ಬರಿಗೂ ಸಮಾನ ಅಂಕ ಬರಲಿ ಎಂದೇ ಬಯಸಿ ದ್ದೆವು ಎನ್ನುತ್ತಾರೆ ಮುಕ್ತಾ ವಿ. ಹೆಬ್ಬಾರ್ ಹಾಗೂ ಮಾನ್ಯ ವಿ. ಹೆಬ್ಬಾರ್.
ಅವಳಿ ಸಹೋದರಿ ಯರಾದ ಮಾನ್ಯ ವಿ.ಹೆಬ್ಬಾರ್ ಹಾಗೂ ಮುಕ್ತ ವಿ.ಹೆಬ್ಬಾರ್ ಅವರು ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆ ಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.ಅಂಕ ಪಡೆಯುವಲ್ಲಿ ಸಮಾನತೆ ಕಾಪಾಡಿಕೊಂಡಿದ್ದಾರೆ.ಇವರು ಪ್ರತಿ ತರಗತಿ ಯಲ್ಲೂ ಉತ್ತಮ ಅಂಕಗಳನ್ನು ಗಳಿಸಿದ್ದಾರೆ.ಜೊತೆಗೆ ಸಂಗೀತ ಕಲಿಯಲ್ಲಿಯೂ ಆಸಕ್ತಿ ಹೊಂದಿದ್ದಾರೆ.