ಮುದ್ದಲಗುಂದಿಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದ ಕುರಿತು ಶಿಕ್ಷಕ ರುದ್ರೇಶ್ ಬೂದಿಹಾಳ ಅವರಿಂದ ವಿಶೇಷ ವರದಿ…..

Suddi Sante Desk

ಕೊಪ್ಪಳ –

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕು ಜುಮಲಾಪೂರ ಕ್ಲಸ್ಟರ್ ಮಟ್ಟದ 2022-23ನೇ ಸಾಲಿನಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಸರಕಾರಿ ಹಿರಿಯ ಪ್ರಾಥ ಮಿಕ ಶಾಲೆ ಮುದ್ದಲಗುಂದಿಯಲ್ಲಿ ಹಮ್ಮಿಕೊಳ್ಳಲಾಗಿತ್ತು

ಕಾರ್ಯಕ್ರಮವನ್ನು ಬಿಇಓ ಸುರೇಂದ್ರ ಕಾಂಬ್ಳೆ ಮಾಡಿದರು ಇದೇ ವೇಳೆ ಮಾತನಾಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕುಷ್ಟಗಿ ಯವರು ಮಾತನಾಡಿ ಶಾಲಾ ಮಕ್ಕಳಲ್ಲಿ ತರಗತಿ ಕೊಠಡಿ ಶಿಕ್ಷಣದ ಜೊತೆ ಇಂತಹ ಸಹಪಠ್ಯ ಚಟುವಟಿಕೆಗಳನ್ನು ಇಲಾಖೆ ಸಮುದಾಯದ ಸಹಕಾರದೊಂದಿಗೆ ಹಮ್ಮಿಕೊಳ್ಳ ಲಾಗುತ್ತದೆ ಕಾರಣ ಸರಕಾರಿ ಶಾಲೆಗಳ ಅಭಿವೃದ್ಧಿಗೆ ಸಮು ದಾಯದ ಪಾತ್ರ ಅತಿಮುಖ್ಯ ಎಂದರು.

BRP ಲೋಕೇಶ ಅವರು ಪ್ರಸ್ತಾವಿಕವಾಗಿ ಮಾತನಾಡಿ
2 ವರ್ಷಗಳ ಕಾಲ COVID ಸಂದರ್ಭದಲ್ಲಿ ಮಕ್ಕಳು ಇಂತಹ ಸಾಂಸ್ಕೃತಿಕ ಚಟುವಟಿಕೆಗಳಿಂದ ವಂಚಿತರಾಗಿ ದ್ದಾರೆ ಆದರೆ ಇದು ಮತ್ತೆ ನಡೆಯುತ್ತಿರುವುದು ಸಂತಾಸ ತಂದಿದೆ ಎಂದರು.ಜುಮಾಲಪೂರ ಸರಕಾರಿ ಪ್ರೌಡಶಾಲೆ ಶಾಲೆಯ ಮುಖ್ಯ ಶಿಕ್ಷಕರು ಸೋಮನಗೌಡ ಅವರು ಮಾತನಾಡಿ ನಮ್ಮ ಈ ಬಾಗದಲ್ಲಿ ಮಕ್ಕಳು ಹೆಚ್ಚಾಗಿ ಬಡತನದಿಂದ ಕೂಡಿದ ಕುಟುಂಬದ ಹಿನ್ನೆಲೆ ಉಳ್ಳವರಾಗಿ ರುತ್ತರೆ ಅಂತಹ ಮಕ್ಕಳಿಗೆ ನಾವು ಉತ್ತಮವಾಗಿ ಶಿಕ್ಷಣ ಕೊಡೋಣ ಸರಕಾರಿ ಶಾಲೆ ಬೆಳೆಸೋಣ ಎಂದರು.

ಗ್ರಾಮಸ್ಥರು ಶಾಲೆಗೆ ಆಗಮಿಸಿದ ಅಧಿಕಾರಿಗಳನ್ನು ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಕ್ಲಸ್ಟರ್ ನ ಜುಮಲ ಪುರ್ ನಂದಾಪೂರ್ ಮ್ಯದದರದೊಕ್ಕಿ ತಾಂಡ ಮಾದಾಪುರ ಅಡವಿಭಾವಿ ಇದ್ಲಾಪೂರ್ ಹಾಗಲದಾಳ ರಾಂಪುರ ಶಾಲೆ ಮಕ್ಕಳು ಭಾವಹಿಸಿದ್ದರು.

ಶಾಲೆಯ ಮುಖ್ಯ ಶಿಕ್ಷರಾದ ರುದ್ರೇಶ್ ಬೂದಿಹಾಳ ಶಿಕ್ಷಕ ದಂಪತಿಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ SDMC ಕಾರ್ಯಕ್ರಮದ ಕೊನೆಯಲ್ಲಿ ಸ್ಪರ್ದ್ದೆಯಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರಶಸ್ತಿ ಪತ್ರ ವಿತರಣೆ ಮಾಡಲಾಯಿತು.

ಅಧ್ಯಕ್ಷರಾದ ಪಂಪನಗೌಡ ಶಿಕ್ಷಣ ಸಂಯೋಜಕರಾದ ಶ್ರೀರಾಘಪ್ಪ.ಗ್ರಾಮದ ಹನಮಂತ ಗುರಿಕಾರ ಪಂಪನಗೌಡ ದೊಡ್ಡಬಸನಗೌಡ ರಮೇಶ್ ವಡ್ಡರ ಶೇಖರಗೌಡ. ಬಸವ ರಾಜ್ CRP ಗಳಾದ ಯಮನಪ್ಪ ಗುರಿಕಾರ ಸೋಮ ಲಿಂಗಪ್ಪ ಗುರಿಕಾರ ಶಿಕ್ಷಕರಾದ ರಮೇಶ ಯೋಗಿಶಪ್ಪಾ ಬಸವರಾಜ್ ಮೌಲಾಸಾಬ್ ಸುಬ್ರಮಣ್ಯ ಭೀಮಪ್ಪ ಶಿವ ಶೇಖರಗೌಡ ಶಿಕ್ಷಕಿಯರಾದ ರಾಜೇಶ್ವರಿ,ಮೈತ್ರಾ ಅನಿತಾ ಕಸ್ತೂರಿ ಗೀತಾ ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಅತಿಥಿ ಶಿಕ್ಷಕರೂ ಭಾಗವಹಿಸಿದ್ದರು.ರುದ್ರೇಶ್ ಬೂದಿಹಾಳ ನಿರೂ ಪಿಸಿದರು.ಶಿಕ್ಷಕಿ ರಾಜೇಶ್ವರಿ ಸ್ವಾಗತಿಸಿದರು ಯೋಗೀಶಪ್ಪ ಅವರು ವಂದಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.