ವರ್ಗಾವಣೆ ವಂಚಿತ ಶಿಕ್ಷಕರಿಗೆ ವಿಶೇಷ ವರ್ಗಾವಣೆ ಮಾಡಿಸಿ – ರಾಜ್ಯಾಧ್ಯಕ್ಷರಿಗೆ ವರ್ಗಾವಣೆ ವಂಚಿತ ಶಿಕ್ಷಕರ ಗೋಳಿನ ಒತ್ತಾಯ…..

Suddi Sante Desk
ವರ್ಗಾವಣೆ ವಂಚಿತ ಶಿಕ್ಷಕರಿಗೆ ವಿಶೇಷ ವರ್ಗಾವಣೆ ಮಾಡಿಸಿ – ರಾಜ್ಯಾಧ್ಯಕ್ಷರಿಗೆ ವರ್ಗಾವಣೆ ವಂಚಿತ ಶಿಕ್ಷಕರ ಗೋಳಿನ ಒತ್ತಾಯ…..

ಬೆಂಗಳೂರು

ವರ್ಗಾವಣೆ ವಂಚಿತ ಶಿಕ್ಷಕರಿಗೆ ವಿಶೇಷ ವರ್ಗಾವಣೆಯನ್ನು ಮಾಡಿಸುವಂತೆ ವರ್ಗಾವಣೆ ವಂಚಿತ ಶಿಕ್ಷಕ ಬಂಧುಗಳು ಒತ್ತಾಯ ವನ್ನು ಮಾಡಿದ್ದಾರೆ ಈ ಒಂದು ವಿಚಾರ ಕುರಿತು ಒತ್ತಾಯ ವನ್ನು ಮಾಡಿ ಈ ಕೂಡಲೇ ರಾಜ್ಯಾಧ್ಯ ಕ್ಷರು ಸ್ಪಂದಿಸುವಂತೆ ಆಗ್ರಹಿಸಿದ್ದಾರೆ.

ಹೌದು ಪತಿಪತ್ನಿ ಪ್ರಕರಣದ ವರ್ಗಾವಣೆ ವಂಚಿತ ಶಿಕ್ಷಕರಿಗೆ ವಿಶೇಷ ವರ್ಗಾವಣೆ ಮಾಡಿಸುವಂತೆ ಕುರಿತು ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿ ದಂತೆ ತಮ್ಮಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಸ್ವಾಮಿ ಹತ್ತು ವರ್ಷ ಆಗಿರುವ ಶಿಕ್ಷಕರಿಗೆ ಮಾತ್ರ ತಾಲೂಕಿನಿಂದ ಹೊರಗೆ ವರ್ಗಾವಣೆ ಕೊಡುವ ನಿಯಮ ಸದ್ಯದಲ್ಲಿದೆ

ಆದರೆ 2013ರಲ್ಲಿ ನೇಮಕಾತಿಯಾದ ಶಿಕ್ಷಕರುಗ ಳಿಗೆ ಈ ಜೂನ್ ಮತ್ತು ಜುಲೈ ತಿಂಗಳಿಗೆ 10 ವರ್ಷ ಪೂರೈಸುತ್ತದೆ ಅದರಲ್ಲಿ ಬಹಳಷ್ಟು ಜನ ಪತಿ-ಪತ್ನಿ ಪ್ರಕರಣದಲ್ಲಿ ವರ್ಗಾವಣೆಗೆ ಅರ್ಜಿ ಸಲ್ಲಿಸಿ ವರ್ಗಾವಣೆ ಸಿಗದೇ ವಂಚಿತರಾಗಿದ್ದಾರೆ ಇದು ಈಗಿರುವ ನಿಯಮಕ್ಕೆ ಸರಿಯಾಗಿದೆ ಆದರೆ ಖಾಲಿ ಹುದ್ದೆಗಳನ್ನು ಈ ವರ್ಷದ ಮೇ ತಿಂಗಳ ಅಂತ್ಯದವರೆಗೆ ಪರಿಗಣಿಸಿರುತ್ತಾರೆ

ಅದೇ ರೀತಿ ಸೇವಾ ಅವಧಿಯನ್ನು ಕೂಡ ಮೇ ತಿಂಗಳ ಅಂತ್ಯದವರೆಗೆ ಪರಿಗಣಿಸಿದ್ದರೆ ಡಿಸೆಂಬ ರ್ ನಿಂದ ಮೇ ತಿಂಗಳ ಒಳಗೆ ಕನಿಷ್ಠ 200 ಜನ ಶಿಕ್ಷಕರು 10 ವರ್ಷವನ್ನು ಪೂರೈಸಿರುತ್ತಾರೆ ಅವರಿಗೂ ಸಹ ವರ್ಗಾವಣೆ ಭಾಗ್ಯ ಸಿಗುತ್ತಿತ್ತು ಇದರಿಂದಾಗಿ ತುಂಬಾ ಜನ ಪತಿ ಪತ್ನಿ ಪ್ರಕರಣ ದಲ್ಲಿ ಅರ್ಜಿ ಸಲ್ಲಿಸಿರುವ ಶಿಕ್ಷಕರು ಹಾಗೂ ಯಾವುದೇ ಪ್ರಕರಣ ಇಲ್ಲದಿದ್ದರೂ ಸಹ 10 ವರ್ಷ ಪೂರೈಸಿದ ಶಿಕ್ಷಕರು ತಮ್ಮ ತಾಲೂಕಿನಿಂದ ಬೇರೆ ತಾಲೂಕಿಗೆ ವರ್ಗಾವಣೆಯಾಗಲು ಸಾಧ್ಯ ವಾಗುತ್ತಿತ್ತು

ತಾವು ದಯಮಾಡಿ ಈ ವಿಷಯವನ್ನು ಮನವ ರಿಕೆ ಮಾಡಿಕೊಂಡು ಕನಿಷ್ಠಪಕ್ಷ ಹೆಂಡತಿ ಮಕ್ಕಳು ಮತ್ತು ಕುಟುಂಬದಿಂದ ಅದೆಷ್ಟೋ ದೂರದಲ್ಲಿ ಕೆಲಸ ಮಾಡುತ್ತಿರುವ ಪತಿ ಪತ್ನಿ ಪ್ರಕರಣದಲ್ಲಿ ಬರುವ ಶಿಕ್ಷಕರಿಗಾದರೂ ಈ ವರ್ಗಾವಣೆ ಕೌನ್ಸಿಲಿಂಗ್ ಮುಗಿದ ನಂತರ ಆಗಸ್ಟ್ ತಿಂಗಳಿ ನಲ್ಲಿ ಒಂದು ವಿಶೇಷ ವರ್ಗಾವಣೆ ನಡೆಸಿ ಅವರಿಗೆ ಅನುಕೂಲ ಮಾಡಿಸಿಕೊಡಿ

ತಾವು ಪ್ರಯತ್ನಿಸಬೇಕಾಗಿ ಈ ಮೂಲಕ ತಮ್ಮಲ್ಲಿ ಪರಿಪರಿಯಾಗಿ ಬೇಡಿಕೊಳ್ಳುತ್ತೇನೆ ಮುಂದಿನ ವರ್ಗಾವಣೆ ತಡವಾಗಬಹುದು ಅಥವಾ ನಿಯಮಗಳು ಬದಲಾಗಬಹುದು ಈಗಾಗಲೇ ತುಂಬಾ ತುಂಬಾ ನೊಂದಿರುವ ಶಿಕ್ಷಕರಿಗೆ ನ್ಯಾಯ ಒದಗಿಸಿ ಕೊಡಬೇಕಾಗಿ ತಮ್ಮಲ್ಲಿ ಮತ್ತೊಮ್ಮೆ ಬೇಡಿಕೊಳ್ಳುತ್ತೇವೆ.

ಸುದ್ದಿ ಸಂತೆ ನ್ಯೂಸ್ ಬೆಂಗಳೂರು…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.