ಕೋವಿಡ್ ಗೆ ಬಲಿಯಾದ ರಾಷ್ಟೀಯ ದೇಹದಾಢ್ಯ ಪಟು – ಕಿಚಡಿ ದಯಾನಂದ ಸಾವಿಗೆ ಕ್ರೀಡಾ ಪ್ರೇಮಿಗಳು ಕಂಬನಿ…..

Suddi Sante Desk

ಹೊಸಪೇಟೆ –

ರಾಜ್ಯದಲ್ಲಿ ಕೋವಿಡ್ ಮಹಾಮಾರಿಗೆ ಸಾವಿನ ಸಂಖ್ಯೆ ಹೆಚ್ಚಾಗುತ್ತಲೆ ಇದೆ.ಒಂದು ಕಡೆ ಪ್ರತಿದಿನ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತದೆ ಇನ್ನೊಂದೆಡೆ ಸಾವಿನ ಪ್ರಮಾಣವು ಕೂಡಾ ಹೆಚ್ಚಾಗುತ್ತಿದ್ದು ಇದ ರಿಂದ ಸಾರ್ವಜನಿಕರು ಈ ಒಂದು ಚಿತ್ರಣದಿಂದಾಗಿ ಆತಂಕಗೊಂಡಿದ್ದಾರೆ.ಇನ್ನೂ ರಾಷ್ಟ್ರಮಟ್ಟದಲ್ಲಿ ದೇಹದಾಢ್ಯ ದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಸಾಧನೆ ಯನ್ನು ಮಾಡಿದ್ದ ಹೊಸಪೇಟೆಯ ಕಿಚಡಿ ದಯಾ ನಂದ ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ.

ಹೌದು ಕಳೆದ ಐದಾರು ದಿನಗಳಿಂದ ಇವರಿಗೆ ಕರೋ ನಾ ಸೋಂಕು ಕಾಣಿಸಿಕೊಂಡಿತ್ತು ಕೂಡಲೇ ಇವರ ನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.ಆದರೆ ಚಿಕಿ ತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.ಇನ್ನೂ ಅಗಲಿದ ಹೆಸರಾಂತ ಕ್ರೀಡಾಪಟುವಿನ ಸಾವಿಗೆ ನಾಡಿನ ಮೂ ಲೆ ಮೂಲೆಗಳಿಂದ ಕ್ರೀಡಾ ಲೋಕದ ಕ್ರೀಡಾಪಟು ಗಳು ಅಭಿಮಾನಿಗಳು ಹಿತೈಷಿಗಳು ಸೇರಿದಂತೆ ಎಲ್ಲ ರೂ ಕಂಬನಿ ಮಿಡಿದಿದ್ದಾರೆ.ಅಲ್ಲದೇ ಹೊಸಪೇಟೆ ಕೀರ್ತಿ ಪತಾಕೆಯನ್ನು ರಾಷ್ಟ್ರಮಟ್ಟದಲ್ಲಿ ವಿಜೃಂಭಿ ಸಿದ ಕಿಚಡಿ ದಯಾನಂದ ಆತ್ಮಕ್ಕೆ ಶಾಂತಿ ಸಿಗಲಿ ದುಖಃವನ್ನು ತಡೆದುಕೊಳ್ಳುವ ಶಕ್ತಿಯನ್ನು ಆ ಕುಟುಂಬಕ್ಕೆಕೊಡಲೆಂದು ಪ್ರಾರ್ಥಿಸಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.