ಬಾಗಲಕೋಟ – ನಿನ್ನೆಯ ಭಾರತ ಬಂದ್ ವೇಳೆಯಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿ ನೂರಾರು ಕುರಿಗಳನ್ನು ಕಳ್ಳತನ ಮಾಡಿದ್ದಾರೆ. ಹೌದು ಇಂಥಹದೊಂದು ಸುಳ್ಳು ಸುದ್ದಿಯನ್ನು ಹಬ್ಬಿಸಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಕುರಿಗಳನ್ನು ಕಳ್ಳತನ ಮಾಡಿರುವ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಕೇಂದ್ರ ಸರ್ಕಾರದ ಕೃಷಿ ವಿರೋಧ ನೀತಿಯನ್ನು ದೇಶವ್ಯಾಪಿ ಭಾರತ್ ಬಂದ್ ಗೆ ಕರೆ ನೀಡಲಾಗಿತ್ತು. ಬಂದ್ ಗೆ ಕರೆ ಕೊಟ್ಟಿರುವ ಲಾಭವನ್ನು ಪಡೆದುಕೊಂಡ ಕಿಡಗೇಡಿಗಳು ಬಾಗಲಕೋಟೆಯ ಕೆರೂರಿನಲ್ಲಿ ಖತರ್ನಾಕ್ ಕೆಲಸ ಮಾಡಿದ್ದಾರೆ.
ಕೆರೂರು ನಿನ್ನೇ ದೊಡ್ಡ ಪ್ರಮಾಣದಲ್ಲಿ ಕುರಿ ಮೇಕೆಗಳ ಸಂತೆ ಇತ್ತು. ಪಟ್ಟಣದಲ್ಲೂ ಬಂದ್ ಹಿನ್ನಲೆಯಲ್ಲಿ ನಿನ್ನೇ ದೊಡ್ಡ ಪ್ರಮಾಣದಲ್ಲಿ ಮೇಕೆ-ಕುರಿ ಸಂತೆಯಲ್ಲಿ ಕಿಡಗೇಡಿಗಳ ಸುಳ್ಳು ಸುದ್ದಿಗೆ ಚೆಲ್ಲಾಪಿಲ್ಲಿಯಾಗಿ ಜನ ಓಡಾಡಿದ್ದಾರೆ. ಬಂದ್ ಇದ್ದರೂ ತಮ್ಮ ಪಾಡಿಗೆ ತಾವುಗಳು ಕುರಿ ಮೇಕೆಯಲ್ಲಿ ವ್ಯಾಪಾರ ವಹಿವಾಟಿನಲ್ಲಿ ತೊಡಗಿದ್ದರು. ಎಲ್ಲರೂ ಸಂತೆಯಲ್ಲಿ ಕುರಿ ಮೇಕೆಗಳ ಭರ್ಜರಿಯಾದ ವ್ಯಾಪಾರದಲ್ಲಿ ತೊಡಗಿರುವ ಕೆಲ ಕಿಡಗೇಡಿಗಳು ಸಂತೆಯಲ್ಲಿ ಬಂದ್ ಹಿನ್ನಲೆಯಲ್ಲಿ ಪೊಲೀಸರು ಹಿಡಿದು ಹೊಡೆಯುತ್ತಾರೆ ಎಂದು ಸುಳ್ಳು ಸುದ್ದಿ ಹರಡಿದ್ದಾರೆ.
ಹೀಗೆ ಸುಳ್ಳು ಸುದ್ದಿ ಒಬ್ಬರ ಬಾಯಿಂದ ಒಬ್ಬರಿಗೆ ಕೇಳಿ ಬರುತ್ತಿದ್ದಂತೆ ಸಂತೆಯಲ್ಲಿದ್ದರು ತಮ್ಮ ತಮ್ಮ ಕೈಯಲ್ಲಿ ಮೇಕೆ,ಕುರಿ ಹಿಡಿದು ದಿಕ್ಕಾಪಾಲಾಗಿ ಓಡಿದ್ದಾರೆ.ಭಾರತ ಬಂದ್ ಹಿನ್ನೆಲೆ. ಪ್ರತಿಭಟನಾಕಾರರನ್ನು ಪೊಲೀಸರು ಹೊಡೆದು ಓಡಿಸುತ್ತಿದ್ದಾರೆಂದು ವದಂತಿ ಹಬ್ಬಿಸಿದ ದುಷ್ಕರ್ಮಿಗಳಿಂದ.ಜಾನುವಾರು ಸಂತೆ ಬಳಿಯೇ ಪ್ರತಿಭಟನೆಗೆ ಮುಂದಾಗಿದ್ದ ವಿವಿಧ ಸಂಘಟನೆಗಳು.40 ಕ್ಕೂ ಹೆಚ್ಚು ಕುರಿ, ಮೇಕೆ ಕಳುವು ಮಾಡಿದ್ದಾರೆ. ಲಕ್ಷಾಂತರ ರೂಪಾಯಿಗಳನ್ನು ಕೆಲವರು ಕಳೆದುಕೊಂಡ್ರೆ ಇನ್ನೂ ಕೆಲವರು ತಾವು ಮಾರಲು ತಗೆದುಕೊಂಡು ಬಂದಿದ್ದ ಕುರಿ ಮೇಕೆಗಳನ್ನು ಕಳೆದುಕೊಂಡಿದ್ದಾರೆ. ಉತ್ತರ ಕರ್ನಾಟಕದಲ್ಲಿ ಪ್ರಸಿದ್ಧ ಕುರಿ, ಜಾನುವಾರು ಸಂತೆ ಇದಾಗಿದೆ.
ಕೆರೂರ ಪಟ್ಟಣದ ಎಪಿಎಂಸಿ ಆವರಣದಲ್ಲಿ ಮಂಗಳವಾರ ನಡೆದಿದ್ದ ಕುರಿ, ಜಾನುವಾರು ಸಂತೆಯಲ್ಲಿ ಸುಳ್ಳು ಸುದ್ದಿಯ ವದಂತಿ ಬಹುತೇಕರು ದಿಗಿಲುಗೊಂಡು ತೋಚಿದ ಕಡೆಗಳಲ್ಲಿ ಓಡಾಡಿದ್ದಾರೆ.ವದಂತಿ ಹಬ್ಬಿಸಿ ದುಷ್ಕರ್ಮಿಗಳು ನೂರಕ್ಕೂ ಹೆಚ್ಚು ಕುರಿ, ಮೇಕೆ ಮತ್ತು ಟಗರು ಮರಿಗಳನ್ನು ಕಳುವು ಮಾಡಿದ್ದಾರೆ. ಈ ಕುರಿತಂತೆ ಯಾರು ಕೂಡಾ ಕೆರೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿಲ್ಲ.