ACB ಬಲೆಗೆ ಬಿದ್ದ ಪ್ರಾಚಾರ್ಯ ವರ್ಗಾವಣೆಗೊಂಡಿದ್ದವರನ್ನು ಬಿಡುಗಡೆ ಮಾಡಲು 50 ಸಾವಿರ ಬೇಡಿಕೆ ಇಟ್ಟಿದ್ದ ಶ್ರೀಕಂಠಾರಾಧ್ಯ

Suddi Sante Desk

ಹುಣಸೂರು –

ಐಟಿಐ ಕಾಲೇಜಿನ ಪ್ರಾಚಾರ್ಯರೊಬ್ಬರು ಎಸಿಬಿ ಬಲೆಗೆ ಬಿದ್ದ ಘಟನೆ ಮೈಸೂರಿನ ಹುಣಸೂರಿನಲ್ಲಿ ನಡೆದಿದೆ ಹೌದು ಬೇರೆಡೆಗೆ ವರ್ಗಾವಣೆಯಾಗಿದ್ದ ಐ.ಟಿ.ಐ ಕಾಲೇಜಿನ ಜೆ.ಟಿ.ಓ.ರನ್ನು ಕರ್ತವ್ಯದಿಂದ ಬಿಡುಗಡೆಗೊ ಳಿಸಲು ಲಂಚಕ್ಕಾಗಿ ಬೇಡಿಕೆ ಇಟ್ಟು ಪೀಡಿಸುತ್ತಿದ್ದರು ಈ ಒಂದು ವಿಚಾರ ಕುರಿತು ನೌಕರ ಎಸಿಬಿ ಯವರಿಗೆ ದೂರು ನೀಡಿದ್ದರು ದೂರಿನ ಹಿನ್ನೆಲೆಯಲ್ಲಿ ಕಾರ್ಯಾಚರಣೆ ಮಾಡಿ ಪ್ರಾಚಾರ್ಯರೊಬ್ಬರು ಲಂಚ ಪಡೆಯುವ ವೇಳೆ ಎಸಿಬಿ ಅಧಿಕಾರಿಗಳು ಟ್ರ್ಯಾಪ್ ಮಾಡಿದ್ದಾರೆ.ಹುಣಸೂರು ITI ಕಾಲೇಜಿನ ಪ್ರಾಚಾರ್ಯ ಶ್ರೀಕಂಠಾರಾಧ್ಯ ಲಂಚ ಪಡೆಯು ವಾಗ ಎಸಿಬಿ ಪ್ರಭಾರ ಡಿವೈಎಸ್‌ಪಿ ಧರ್ಮೇದ್ರ ಸಿ.ಪಿ.ಐ. ಮೋಹನ್ ಕೃಷ್ಣರ ನೇತೃತ್ವದಲ್ಲಿ ಅಧಿಕಾರಿಗಳು ಮೈಸೂರಿ ನಲ್ಲಿ ದಾಳಿ ನಡೆಸಿ ಬಂಧಿಸಿದ್ದಾರೆ.

ಹೌದು ನಾಗರಾಜ್‌ ಎಂಬವರಿಗೆ ಮೈಸೂರಿಗೆ ವರ್ಗಾವಣೆ ಯಾಗಿತ್ತು. ಐಟಿಐ ಕಾಲೇಜಿನಿಂದ ಇವರನ್ನು ಬಿಡುಗಡೆ ಗೊಳಿಸಲು 50 ಸಾವಿರ ರೂ ಲಂಚ ಕೇಳಿದ್ದರು ದೂರು ನೀಡಿದ್ದರು ಮುಂಗಡವಾಗಿ 25 ಸಾವಿರ ರೂ ನೀಡಿದ್ದು ಅಲ್ಲದೆ ಮತ್ತೆ ಐದು ಸಾವಿರ ರೂ ನೀಡುವ ವೇಳೆ ಬಂದಿಸಿ ದ್ದರ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ ಮೂರು ವಾಹನ ಗಳಲ್ಲಿ ಐಟಿಐ ಕಾಲೇಜಿಗೆ ಆಗಮಿಸಿದ ಎಸಿಬಿ ಡಿವೈಎಸ್‌ಪಿ ಧಮೇಂದ್ರ ನೇತೃತ್ವದ ಅಧಿಕಾರಿಗಳ ತಂಡವು ದಾಖಲೆ ಗಳನ್ನು ಪರಿಶೀಲಿಸಿ ವಶಕ್ಕೆ ತೆಗೆದುಕೊಂಡಿದ್ದಾರೆ

ವರ್ಗಾವಣೆಗೊಂಡಿರುವ ತಮ್ಮನ್ನು ಕಾಲೇಜಿನಿಂದ ಬಿಡುಗಡೆಗೊಳಿಸಲು ಹುಣಸೂರು ಸರಕಾರಿ ಐಟಿಐ ಕಾಲೇಜು ಪ್ರಾಚಾರ್ಯ ಶ್ರೀಕಂಠಾರಾದ್ಯ 50 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರೆಂದು ಎಸಿಬಿಗೆ ನಾಗರಾಜ್ ದೂರು ನೀಡಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.