ಮಂಗಳೂರು –
ಕಂಬಳ ಓಟದಲ್ಲಿ ಕಳೆದ ವರ್ಷ ಕಂಬಳ ಆಟಗಾರ ಶ್ರೀನಿವಾಸ ಗೌಡರ್ ಅವರು ವಿಶ್ವದ ಓಟಗಾರ ಉಸೇನ್ ಬೋಲ್ಟ್ ಅವರನ್ನು ಮೀರಿಸಿ ಕೀರ್ತಿಗೆ ಭಾಜನರಾಗಿದ್ದರು.
ವಿಶ್ವವಿಖ್ಯಾತಿ ಓಟಗಾರ ಬೋಲ್ಟ್ ಅವರ ದಾಖಲೆಯನ್ನು ಮುರಿದು ಓಟ ನಡೆಸಿದ್ದರು ಆದರೆ ಇಂದು ಇದೇ ಕಂಬಳದಲ್ಲಿ ಮತ್ತೊಂದು ದಾಖಲೆ ಸೃಷ್ಟಿಯಾಗಿದೆ.
ಶ್ರೀನಿವಾಸ ಗೌಡರ್ ಅವರ ದಾಖಲೆಯನ್ನು ಬೈಂದೂರಿನ ಯುವಕ ವಿಶ್ವನಾಥ್ ಹಿಂದಿಕ್ಕಿದ್ದಾರೆ. ಶ್ರೀನಿವಾಸಗೌಡ ಅವರು ಕಳೆದ ವರ್ಷ ನೇಗಿಲ ಹಿರಿಯ ವಿಭಾಗದಲ್ಲಿ ಓಡಿಸಿದ ಕೋಣಗಳು 100 ಮೀಟರ್ ಓಟವನ್ನು 9.55 ಸೆಕೆಂಡ್ಗಳಲ್ಲಿ ಕ್ರಮಿಸಿ ದಾಖಲೆ ಬರೆದಿದ್ದರೆ, ಐಕಳದ ಕಾಂತಾಂಬಾರೆ- ಬೂದಾಬಾರೆ ಕಂಬಳದಲ್ಲಿ ನಡೆದ ಕಂಬಳದಲ್ಲಿ ವಿಶ್ವನಾಥ್ ಓಡಿಸಿದ ಕೋಣಗಳು 9.15 ಸೆಕೆಂಡ್ ಗಳಲ್ಲಿ 100 ಮೀಟರ್ ತಲುಪಿವೆ.
ಕಳೆದ ಬಾರಿ ಗೌಡರ್ ವಿಶ್ವವಿಖ್ಯಾತಿ ಪಡೆದಿದ್ದರು. ಈ ಯುವಕ ಅವರಿಗಿಂತಲೂ ಮಿಗಿಲಾಗಿ ಈಗ ಓಟದಲ್ಲಿ ಇತಿಹಾಸ ಸೃಷ್ಟಿಸಿದ್ದಾರೆ.ಐಕಳದ ಕಾಂತಾಂಬಾರೆ- ಬೂದಾಬಾರೆ ಕಂಬಳದಲ್ಲಿ ಸತತ ಎರಡನೇ ವರ್ಷ ಮತ್ತೊಂದು ದಾಖಲೆ ನಿರ್ಮಾಣವಾಗಿದೆ.
ಓಟದ ವೇಗವನ್ನು ಅಳೆಯಲು ಆಟೋ ಸ್ಟಾರ್ಟ್ ಹಾಗೂ ಸೆನ್ಸಾರ್ ಅಳವಡಿಸಲಾಗಿತ್ತು. ಇದರ ಮೂಲಕವೇ ವೇಗವನ್ನು ನಿಖರವಾಗಿ ಅಳೆಯಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.ಶನಿವಾರ ಐಕಳದಲ್ಲಿ ನಡೆದ ಕಾಂತಂಬಾರೆ-ಬೂದಾಬಾರೆ ಕಂಬಳದ ಚಾನ್ಸ್ ಓಟದಲ್ಲಿ ಬೋಳದ ಗುತ್ತು ಸತೀಶ್ ಶೆಟ್ಟಿ ಅವರ ಬೊಳ್ಳ ಮತ್ತು ದೋನಿ ಕೋಣಗಳನ್ನು ಬೈಂದೂರಿನ ವಿಶ್ವನಾಥ್ ಓಡಿಸಿದ್ದು, 125 ಮೀಟರ್ ಓಟವನ್ನು 11.44 ಸೆಕೆಂಡ್‌ಗಳಲ್ಲಿ ಓಡಿಸಿದ್ದಾರೆ.
ಇದನ್ನು 100 ಮೀಟರ್‌ಗೆ ತಾಳೆ ಮಾಡಿದರೆ 9.15 ಸೆಕೆಂಡ್ ಆಗುತ್ತದೆ.ಅಂದಹಾಗೆ ಬೋಲ್ಟ್ 100 ಮೀಟರ್ ದೂರ ಕ್ರಮಿಸಲು ತೆಗೆದುಕೊಂಡಿದ್ದು 9.58 ಸೆಕೆಂಡ್. ಇದಕ್ಕಿಂತಲೂ ವೇಗವಾಗಿ ಬೈಂದೂರು ವಿಶ್ವನಾಥ್ ಓಡಿ ದಾಖಲೆ ಬರೆದಿದ್ದಾರೆ.
ಈಗ ಇದೇ ಕಂಬಳದಲ್ಲಿ ಮತ್ತೊಂದು ದಾಖಲೆ ನಿರ್ಮಾಣವಾಗಿದ್ದು ಈ ಹಿಂದೆ ಇದ್ದ ದಾಖಲೆಯನ್ನು ಈಗ ವಿಶ್ವನಾಥ್ ಮುರಿದು ಮತ್ತೊಂದು ದಾಖಲೆ ಬರೆದಿದ್ದಾರೆ.