ಚಿಕ್ಕಮಗಳೂರು –
ಹೃದಯಾಘಾತದಿಂದ ಮೃತಪಟ್ಟ 7ನೇ ತರಗತಿಯ ಬಾಲಕಿ – ಶಾಲೆಗೆ ಹೋಗುತ್ತಿದ್ದ ಸೃಷ್ಠಿ ತಲೆ ತಿರುಗಿ ಕುಸಿದು ಬಿದ್ದು ಸಾವು ಹೌದು
7ನೇ ತರಗತಿಯ ಬಾಲಕಿಯೊಬ್ಬಳು ಹೃದಯಾ ಘಾತದಿಂದ ಮೃತಪಟ್ಟ ಘಟನೆ ಚಿಕ್ಕಮಗಳೂರಿ ನಲ್ಲಿ ನಡೆದಿದೆ.ಚಿಕ್ಕಮಗಳೂರು ಜಿಲ್ಲೆಯ ಜೋಗಣ್ಣನಕೆರೆ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದ್ದು ಶಾಲೆಗೆ ಹೋಗುವ ಸಂದರ್ಭದಲ್ಲಿ ಹೃದಯಾಘಾತದಿಂದ ಬಾಲಕಿ ಸೃಷ್ಠಿ ಸಾವನ್ನಪ್ಪಿ ದ್ಧಾಳೆ.
ಜೋಗಣ್ಣನಕೆರೆ ಗ್ರಾಮದ ಅರ್ಜುನ್ ಹಾಗೂ ಸುಮಾ ದಂಪತಿಯ ಪುತ್ರಿ ಸೃಷ್ಟಿ(12)ಎಂದು ಗುರುತಿಸಲಾಗಿದೆ.ಅತಿ ಚಿಕ್ಕ ವಯಸ್ಸಿನಲ್ಲಿ ಬಾಲಕಿಗೆ ಹೃದಯಾ ಘಾತವಾಗಿರುವ ಸುದ್ದಿ ಯನ್ನು ಕೇಳಿದ ಗ್ರಾಮಸ್ಥರು ಆಘಾತ ವ್ಯಕ್ತಪಡಿ ಸಿದ್ದಾರೆ.ಇನ್ನೂ 7ನೇ ತರಗತಿ ಓದುತ್ತಿರುವ ಸೃಷ್ಟಿ ಎಂದಿನಂತೆ ಬೆಳಿಗ್ಗೆ ಶಾಲೆಗೆ ತೆರಳುತ್ತಿದ್ದಾಗ ದಾರದ ಹಳ್ಳಿ ಗ್ರಾಮದ ಶಾಲೆಯ ಮುಂಭಾಗದಲ್ಲಿ ತಲೆ ತಿರುಗಿ ಕುಸಿದು ಬಿದ್ದಿದ್ದಾಳೆ.
ತಕ್ಷಣವೇ ಜೊತೆಗಿದ್ದ ಸಹಪಾಠಿ ವಿದ್ಯಾರ್ಥಿಗಳು ಹಾಗು ಗ್ರಾಮಸ್ಥರು ಶಾಲೆಯ ಮುಂಭಾಗದಲ್ಲಿ ರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊ ಯ್ದರು.ಅಲ್ಲಿ ವೈದ್ಯರಿಲ್ಲದ ಕಾರಣ ತಡ ಮಾಡದೇ ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗ ಲಿಲ್ಲ
ವೈದ್ಯರು ಬಾಲಕಿ ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ತಿಳಿಸಿದ್ದು ಕುಟುಂಬಕ್ಕೆ ಬರಸಿ ಡಿಲು ಬಡಿದಂತಾಗಿತ್ತು.ಸೃಷ್ಟಿಗೆ ಆಗಾಗ ತಲೆ ಸುತ್ತು ಬರುತ್ತಿತ್ತು ಆದರೆ ಆರೋಗ್ಯವಾಗಿ ಇದ್ದಳು. ಯಾವುದೇ ಸಮಸ್ಯೆ ಇರಲಿಲ್ಲ ಎಂದು ಕುಟುಂ ಬಸ್ಥರು ತಿಳಿಸಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಚಿಕ್ಕಮಗಳೂರು…..