ಬೆಂಗಳೂರು –
ರಾಜ್ಯಾಧ್ಯಂತ ಇಂದಿನಿಂದ ಎಸ್ ಎಸ್ ಎಲ್ ಸಿ ಪರೀಕ್ಷೆ ಗಳು ಆರಂಭಗೊಂಡಿದ್ದು ಕೆಲವು ಕಡೆಗಳಲ್ಲಿ ಹಿಜಾಬ್ ಕುರಿತಾದ ಗೊಂದಲಗಳನ್ನು ಬಿಟ್ಟರೆ ಎಲ್ಲಾ ಕಡೆಗಳಲ್ಲೂ ಸುಗಮವಾಗಿ ಪರೀಕ್ಷೆಗಳು ಆರಂಭಗೊಂಡಿದ್ದು ಸರಳವಾಗಿ ಶಾಂತಯುತವಾಗಿ ರಾಜ್ಯಾಧ್ಯಂತ ಪರೀಕ್ಷೆಗಳು ನಡೆಯು ತ್ತಿವೆ.

ಹೌದು ರಾಜ್ಯದ ತುಂಬೆಲ್ಲಾ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿದ ವಿದ್ಯಾರ್ಥಿಗಳು ಹಿಜಾಬ್ ತೆಗೆದಿಟ್ಟು ಪರೀಕ್ಷೆಯನ್ನು ಬರೆ ಯುತ್ತಿದ್ದಾರ.ಇದರೊಂದಿಗೆ ರಾಜ್ಯಾದ್ಯಂತ ಎಸ್‌ಎಸ್‌ಎಲ್ ಸಿ ಪರೀಕ್ಷೆಗಳು ಮೊದಲ ದಿನ ಸುಗಮವಾಗಿ ಆರಂಭವಾ ಗಿದ್ದು ನಡೆಯುತ್ತಿವೆ.ಇನ್ನೂ ಇದಕ್ಕೂ ಮುನ್ನ ಎಲ್ಲೇಡೆ ಪರೀಕ್ಷಾ ಕೇಂದ್ರಗಳಿಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲೆಯ ಶಿಕ್ಷಕರು ಇಲಾಖೆಯ ಅಧಿಕಾರಿಗಳು ಸೇರಿದಂತೆ ಹಲವರು ಗುಲಾಬಿ ಹೂ ನೀಡಿ ಸ್ವಾಗತಿಸಿದ್ದು ಕಂಡು ಬಂದಿತು

ಇದರ ಮದ್ಯೆ ಹುಬ್ಬಳ್ಳಿ ಬೆಂಗಳೂರು ಸೇರಿದಂತೆ ಹಲವೆಡೆ ಹಿಜಾಬ್ ಹಾಕಿಕೊಂಡು ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ ನಂತರ ಅದನ್ನು ತಗೆದಿಟ್ಟು ಪರೀಕ್ಷೆ ಬರೆಯಲು ಒಳಗಡೆ ಹೋಗಿದ್ದು ಕಂಡು ಬಂದಿತು ಅಲ್ಲದೇ ಯಾವುದೇ ಮುಲಾ ಜಿಲ್ಲದೇ ಅವರನ್ನು ಮರಳಿ ಮನೆಗೆ ಕಳಿಸಿದ್ದು ಕೂಡಾ ಕಂಡು ಬಂದಿತು,ಇನ್ನೂ ಇಂದು ವಿದ್ಯಾರ್ಥಿ ಜೀವನದ ಪ್ರಮುಖ ಘಟ್ಟ ಎಂದೇ ಹೇಳಲಾಗುವ ಪರೀಕ್ಷೆ ಇಂದಿನಿಂದ ರಾಜ್ಯಾದ್ಯಂತ ಆರಂಭವಾಗಿದೆ.ವಿದ್ಯಾರ್ಥಿನಿಯರು ಹಿಜಾಬ್ ತೆಗೆದಿಟ್ಟು ಪರೀಕ್ಷೆಗೆ ಹಾಜರಾಗಿದ್ದಾರೆ. ಪರೀಕ್ಷಾ ಕೊಠಡಿಗೆ ಕಡ್ಡಾಯವಾಗಿ ಶಾಲಾ ಸಮವಸ್ತ್ರ ಧರಿಸಿ ಹಾಜರಾಗಬೇಕೆಂದು ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸಲಾಗಿದ್ದು, ಅಂತೆಯೇ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರದವರೆಗೆ ಹಿಜಾಬ್ ಧರಿಸಿ ಬಂದು ನಂತರ ಹಿಜಾಬ್ ತೆಗೆದಿಟ್ಟು ಪರೀಕ್ಷೆಗೆ ಹಾಜರಾಗಿದ್ದಾರೆ.