ಬೆಂಗಳೂರು –
ಈ ವರ್ಷದ SSLC ಪರೀಕ್ಷಾ ಫಲಿತಾಂಶ ಶಿಕ್ಷಣ ಸಚಿವರ ಘೋಷಣೆ ಮೊದಲೇ ಸೋರಿಕೆಯಾಗಿದೆ.ಹೌದು ಸಚಿವರು ಘೋಷಣೆ ಮಾಡುವ ಮುನ್ನವೇ ವೆಬ್ ತಾಣದಲ್ಲಿ ಪ್ರಕಟಿಸಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಎಡವಟ್ಟು ಮಾಡಿದೆ.ಈ ಹಿಂದೆಯೇ ಸಚಿವ ನಾಗೇಶ್ ಅವರು ಎಸ್‌ಎಸ್‌ಎಲ್ ಸಿ ಪರೀಕ್ಷೆ ಫಲಿತಾಂಶ ಮೇ 19 ರಂದು ಪ್ರಕಟಿಸುವುದಾಗಿ ಸ್ಪಷ್ಟಪಡಿಸಿದ್ದರು.ಅದರ ಪ್ರಕಾರ ಇಂದು ಮಧ್ಯಾಹ್ನ 12.30 ರ ನಂತರ ಫಲಿತಾಂಶವನ್ನು ಘೋಷಣೆ ಮಾಡಿದ ಬಳಿಕ ಅಧಿಕೃತ ವೆಬ್ ತಾಣಗಳಲ್ಲಿ ಫಲಿತಾಂಶ ಪ್ರಕಟವಾಗಬೇಕಿತ್ತು.ಇಂದು ಮಧ್ಯಾಹ್ನ 12 ಗಂಟೆಗೆ ಈ ಕುರಿತು ವಿವರ ನೀಡುವ ಸಂಬಂಧ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ಸುದ್ದಿಗೋಷ್ಠಿ ಕರೆದಿದ್ದರು ಸುದ್ದಿಗೋಷ್ಠಿ ನಡೆಸುವ ಮೊದಲೇ ಫಲಿತಾಂಶ ವೆಬ್ ತಾಣದಲ್ಲಿ ಪ್ರಕಟ ವಾಗಿದೆ.
ಸಾಮಾನ್ಯವಾಗಿ ಶಿಕ್ಷಣ ಸಚಿವರು ಫಲಿತಾಂಶವನ್ನು ಪ್ರಕಟಿಸಿದ ಅರ್ಧ ಗಂಟೆಯ ಬಳಿಕ ವೆಬ್ ತಾಣದಲ್ಲಿ ಪ್ರಕಟ ಮಾಡಬೇಕಿತ್ತು.ಆದರೆ ಈ ಭಾರಿ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಫಲಿತಾಂಶ ಘೋಷಣೆಗೂ ಎರಡು ಗಂಟೆ ಮೊದಲೇ ಪ್ರಕಟ ಮಾಡಿದೆ.SSLC ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಯೊಬ್ಬ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ವೆಬ್ ತಾಣದಲ್ಲಿ ಫಲಿತಾಂಶ ಪರಿಶೀಲಿಸಿದಾಗ ಪ್ರಥಮ ದರ್ಜೆಯಲ್ಲಿ ಉತ್ತೀರ್ಣ ಆಗಿರುವುದು ಕಂಡು ಬಂದಿದೆ.ಫಲಿತಾಂಶ ಘೋಷಣೆ ಮೊದಲೇ ಫಲಿತಾಂಶ ವನ್ನು ಮಂಡಳಿಯೇ ವೆಬ್ ತಾಣದಲ್ಲಿ ಪ್ರಕಟಿಸಿ ಎಡವಟ್ಟು ಮಾಡಿಕೊಂಡಿರುವುದು ಇದೀಗ ಸಾರ್ವಜನಿಕ ಚರ್ಚೆಗೆ ಕಾರಣವಾಗಿದೆ.