ಮೈಸೂರು –
SSLC ಅಧ್ಯಯನ ಮಾಡುತ್ತಿದ್ದ ಅಪ್ರಾಪ್ತ ಬಾಲಕಿಯ ಮದುವೆ ಯನ್ನು ತಡೆದ ಘಟನೆ ಮೈಸೂರಿನಲ್ಲಿ ನಡೆದಿದೆ.ಕಾನೂನು ಬಾಹಿರವಾಗಿ SSLC ವಿದ್ಯಾರ್ಥಿನಿಗೆ ಮದುವೆ ನಿಶ್ಚಯವಾಗಿತ್ತು ಇನ್ನೇನು ಮದುವೆ ಕೂಡಾ ಆರಂಭ ವಾಗುತ್ತಿತ್ತು ವಿಷಯ ತಿಳಿದ ಬಾಲಕಿಯ ಸ್ನೇಹಿತೆ ಮದುವೆ ಯನ್ನು ತಡೆದಿದ್ದಾರೆ.ಮೈಸೂರಿನ ಹೂಟಗಳ್ಳಿಯಲ್ಲಿ ಈ ಒಂದು ಮದುವೆ ನಡೆಯುತ್ತಿತ್ತು.
ಆ ಯುವಕನೊಂದಿಗೆ ವಿದ್ಯಾರ್ಥಿನಿ ಮದುವೆಗೆ ಸಿದ್ಧತೆ ನಡೆದಿತ್ತು.ಆದರೆ ಬಾಲಕಿಯ ಸ್ನೇಹಿತೆಯಿಂದ ಮಾಹಿತಿ ಪಡೆದು ವಿಜಯನಗರ ಪೊಲೀಸ್ ನ ಒಡನಾಡಿ ಸಂಸ್ಥೆಯವರು ಬಾಲ್ಯ ವಿವಾಹವನ್ನು ತಡೆದಿದ್ದಾರೆ.ಪೊಲೀಸರು ಬಾಲಕಿ ಮನೆಗೆ ಭೇಟಿ ನೀಡಿದ್ದಾ ಪೋಷಕರು ಬಾಲಕಿಯನ್ನು ಬಚ್ಚಿಟ್ಟಿದ್ದರು. ಬಾಲ್ಯ ವಿವಾಹವನ್ನು ತಡೆದು ಪೋಷಕರಿಗೆ ಬುದ್ದಿ ಮಾತು ಹೇಳಲಾಗಿದೆ.ಈ ಸಂಬಂಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ