ಬೆಂಗಳೂರು –
SSLC, PUC ಪರೀಕ್ಷೆ ಕುರಿತು ನಾಳೆ ಮಾಹಿತಿ ನೀಡಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಪತ್ರಿಕಾ ಗೋಷ್ಠಿ ಕರೆದಿದ್ದಾರೆ.ಹೌದು ರಾಜ್ಯದಲ್ಲಿ ಎಸ್‌ಎಸ್ ಎಲ್ ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆ ವಿಚಾರ ಕ್ಕೆ ಸಂಬಂಧಿಸಿದಂತೆ ಸಮಗ್ರ ಮಾಹಿತಿ ನೀಡಲು ನಾಳೆ ಬೆಳಗ್ಗೆ 10 ಗಂಟೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸುದ್ದಿ ಗೋಷ್ಠಿ ಆಹ್ವಾನ ಮಾಡಿದ್ದಾರೆ.

ಇನ್ನೂ ಪ್ರಮುಖವಾಗಿ ನಾಳೆಯ ಈ ಒಂದು ಸುದ್ದಿ ಗೋಷ್ಠಿಯಲ್ಲಿ ರಾಜ್ಯದಲ್ಲಿ SSLC, ಮತ್ತು ದ್ವಿತೀಯ PUC ಪರೀಕ್ಷೆಗಳನ್ನು ನಡೆಸಲಾಗುವುದೇ ಅಥವಾ ಮುಂದೂಡಲಾಗುವುದೇ ಅಥವಾ ರದ್ದುಮಾಡಲಾ ಗುವುದೇ ಎಂಬುದರ ಬಗ್ಗೆ ಸಚಿವರು ಕಂಪ್ಲೀಟ್ ಮಾಹಿತಿ ನೀಡಲಿದ್ದಾರೆ.ಸಿಬಿಎಸ್‌ಇ ಮಂಡಳಿ ಈಗಾ ಗಲೇ 10 ನೇ ತರಗತಿ ಮತ್ತು 12 ನೇ ತರಗತಿ ಪರೀಕ್ಷೆ ಗಳನ್ನು ರದ್ದು ಮಾಡಿದ್ದು ಅನೇಕ ರಾಜ್ಯಗಳಲ್ಲಿ ಕೂಡ ಬೋರ್ಡ್ ಪರೀಕ್ಷೆಗಳನ್ನು ರದ್ದು ಮಾಡಲಾಗಿ ದೆ. ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟು ಕೊಂಡು ರಾಜ್ಯದಲ್ಲಿಯೂ SSLC ಮತ್ತು ದ್ವಿತೀಯ PUC ಪರೀಕ್ಷೆ ರದ್ದು ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ ಆದರೆ ಶಿಕ್ಷಣ ಸಚಿವರು ನಾಳೆ ನಡೆಸಲಿರುವ ಸುದ್ದಿಗೋಷ್ಠಿ ಭಾರಿ ಕುತೂಹಲ ಮೂಡಿಸಿದೆ.ಪ್ರಮುಖವಾಗಿ ಮೂರನೆಯ ಅಲೆಯ ಆತಂಕದಲ್ಲಿ ನಾಳೆ ಸುರೇಶ್ ಕುಮಾರ್ ಅವರ ಪರೀಕ್ಷಾ ನಿರ್ಧಾರ ತೀವ್ರ ಕುತೂಹಲ ಕೆರಳಿಸಿದೆ