ಧಾರವಾಡ –
ಹೌದು ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಗಾಗಿ ಮಾನವ ಸರಪಳಿಯ ರಚನೆಯ ಐತಿಹಾಸಿಕ. ಕಾರ್ಯಕ್ರಮ ದಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಅಧಿಕಾರಿಗಳು ಸಿಬ್ಬಂದಿ ಗಳು ಪೌರ ಕಾರ್ಮಿಕರು ಪಾಲ್ಗೊಂಡು ಧಾರವಾಡ ದಲ್ಲಿ ಕಾರ್ಯಕ್ರಮ ವನ್ನು ಯಶಸ್ವಿಗೊಳಿಸಿದ್ದಾರೆ ರಾಜ್ಯ ಸರ್ಕಾರದ ಸೂಚನೆ ಯಂತೆ ಧಾರವಾಡ ದಲ್ಲೂ ಈ ಒಂದು ಐತಿಹಾಸಿಕ ಕಾರ್ಯಕ್ರಮ ವನ್ನು ಜಿಲ್ಲಾಡಳಿತ ಹಮ್ಮಿಕೊಂಡಿತ್ತು
ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಸರ್ವ ಅಧಿಕಾರಿಗಳು ನೌಕರ ಬಾಂಧವರು ಹಾಗೂ ಪೌರಕಾರ್ಮಿಕರು ವಿಶೇಷವಾಗಿ ಸ್ವ ಸಹಾಯ ಸಂಘದ ಮಹಿಳಾ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಿದ್ದು ಕಂಡು ಬಂದಿತು.ವಲಯ ಕಚೇರಿ ಮೂರರ ವ್ಯಾಪ್ತಿಯಲ್ಲಿ ಸೂಚಿಸಲಾದ ಮಾನವ ಸರಪಳಿಯ ಕಿಲೋಮಿಟರ್ 1.6 ರಿಂದ 2.0 ಕಿಲೋ ಮೀಟರ್ ಎಲ್ಲಾ ಸ್ವ ಸಹಾಯ ಸಂಘದ ಮಹಿಳೆಯರು ಹಾಗೂ ಪೌರಕಾರ್ಮಿಕರು ಮತ್ತು ಮಹಾನಗರ ಪಾಲಿಕೆಯ ಸಿಬ್ಬಂದಿ ವರ್ಗ ಶಿಸ್ತಿನಿಂದ ಪಾಲ್ಗೊಂಡು ಅಚ್ಚುಕಟ್ಟಾಗಿ ಸಂವಿಧಾನ ಪೀಠಿಕೆಯ ಪ್ರಮಾಣ ವಚನವನ್ನು ಸ್ವೀಕರಿಸಿದರು
ಇದೇ ವೇಳೆ ಜೈ ಹಿಂದ್ ಜೈ ಕರ್ನಾಟಕ ಘೋಷಣೆಯನ್ನು ಕೂಗಿ ಐತಿಹಾಸಿಕ ಕಾರ್ಯಕ್ರಮ ವನ್ನು ಯಶಸ್ಸು ಗೊಳಿಸಿದ್ದು ಕಂಡು ಬಂದಿತು.ಆಯುಕ್ತರ ನಿರ್ದೇಶನ ದಂತೆ ವಲಯ ಅಧಿಕಾರಿ ಅರವಿಂದ ಜಮಖಂಡಿ ನೇತೃತ್ವದಲ್ಲಿ ಈ ಒಂದು ಟೀಮ್ ಪಾಲ್ಗೊಂಡು ಸದರಿ ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯನ್ನು ಅತ್ಯಂತ ಯಶಸ್ವಿಗೊಳಿಸಿದ್ದು ಕಂಡು ಬಂದಿತು
ಈ ಒಂದು ಸಂದರ್ಭದಲ್ಲಿ ಅರವಿಂದ ಜಮಖಂಡಿ ಅವರೊಂದಿಗೆ ಪಾಲಿಕೆಯ ಸಿಬ್ಬಂದಿ ಗಳು ಅಧಿಕಾರಿ ಗಳು, ಪೌರ ಕಾರ್ಮಿಕರು ಸ್ವ ಸಹಾಯ ಮಹಿಳಾ ಟೀಮ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.ಅರವಿಂದ ಜಮಖಂಡಿ ನೇತೃತ್ವದಲ್ಲಿನ ಈ ಒಂದು ಯಶಸ್ವಿ ಕಾರ್ಯಕ್ಕೆ ಆಯುಕ್ತರು ಜಿಲ್ಲಾಡಳಿತ ಮೆಚ್ಚುಗೆ ವ್ಯಕ್ತಪಡಿಸಿದೆ.
ಸುದ್ದಿ ಸಂತೆ ನ್ಯೂಸ್ ಧಾರವಾಡ……