ಬೆಂಗಳೂರು –
ಕಳೆದ ಹಲವಾರು ವರುಷಗಳಿಂದ ನೆನೆಗುದಿಗೆ ಬಿದ್ದಿರುವ ಶಿಕ್ಷಕರ ವರ್ಗಾವಣೆಯನ್ನು ಹದಿನೈದು ದಿನಗಳ ಒಳಗಾಗಿ ಆರಂಭ ಮಾಡಬೇಕು ಮಾಡದಿ ದ್ದರೆ ರಾಜ್ಯದ ಸಾರ್ವಜನಿಕರ ಶಿಕ್ಷಣ ಇಲಾಖೆಯ ಕಚೇರಿ ಮುಂದೆ ಅನಿರ್ಧಿಷ್ಟ ಧರಣಿಯನ್ನು ಮಾಡ ಲಾಗುವುದು ಎಂದು ಕರ್ನಾಟಕ ರಾಜ್ಯ ಶಿಕ್ಷಕರ ಉಪನ್ಯಾಸಕರ ಕ್ರೀಯಾ ಸಂಘ ಹೇಳಿದೆ.

ಬೆಂಗಳೂರಿನಲ್ಲಿಂದು ರಾಜ್ಯ ಶಿಕ್ಷಣ ಸಚಿವ ಸುರೇಶ ಕುಮಾರ್, ಮುಖ್ಯ ಕಾರ್ಯದರ್ಶಿ,ಮತ್ತು ಸಾರ್ಜಜ ನಿಕ ಶಿಕ್ಷಣ ಇಲಾಖೆಯ ಆಯುಕ್ತರು ಮತ್ತು ಪ್ರಧಾನ ಕಾರ್ಯದರ್ಶಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಇವರಿಗೆ ಮನವಿ ನೀಡಿ ಒತ್ತಾಯವನ್ನು ಮಾಡಿದರು.

ಕಳೆದ ಮೂರು ತಿಂಗಳಿನಿಂದ ಆವಾಗ ಈವಾಗ ಈ ಒಂದು ವರ್ಗಾವಣೆಯನ್ನು ಮಾಡುತ್ತೇವೆ ಎಂದು ಯಾಮಾರಿಸುತ್ತಿರುವ ಶಿಕ್ಷಣ ಇಲಾಖೆಯ ವಿರುದ್ದ ಇವರು ಆಕ್ರೋಶವನ್ನು ವ್ಯಕ್ತಪಡಿಸಿದರು.

ಇದೇ ವೇಳೆ ಸಾಮೂಹಿಕವಾಗಿ ಎಲ್ಲರಿಗೂ ರಾಜ್ಯದ ಲ್ಲಿನ ಶಿಕ್ಷಕರ ವರ್ಗಾವಣೆ ವಿಚಾರ ಕುರಿತಂತೆ ಅಂತಿ ಮವಾಗಿ ಹದಿನೈದು ದಿನಗಳ ಒಳಗಾಗಿ ವರ್ಗಾವಣೆ ಯನ್ನು ಮಾಡಬೇಕು ಇಲ್ಲವಾದರೆ ರಾಜ್ಯದ ಎಲ್ಲಾ ಸಾರ್ವಜನಿಕರ ಶಿಕ್ಷಣ ಇಲಾಖೆಯ ಕಚೇರಿ ಮುಂದೆ ಅನಿರ್ಧಿಷ್ಟ ಧರಣಿಯನ್ನು ಮಾಡುವ ಎಚ್ಚರಿಕೆಯನ್ನು ನೀಡಿದರು.

ಈ ಒಂದು ನಿಯೋಗದಲ್ಲಿ ಸಂಘದ ಅಧ್ಯಕ್ಷರಾದ ನಿಂಗೇಗೌಡ್ರು,ಶಂಭುಲಿಂಗನಗೌಡ ಪಾಟೀಲ, ಹೆಚ್ ಕೆ ಮಂಜುನಾಥ್,ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ನುಗ್ಗಲಿ, ರಾಮು ಅ ಗುಗವಾಡ, ಶಿವರಾವ್ ಬಿ ಮಾಲಿಪಾಟೀಲ್ ಸೇರಿದಂತೆ ಹಲವ ರು ಪಾಲ್ಗೊಂಡು ರಾಜ್ಯ ಸರ್ಕಾರಕ್ಕೆ ಹದಿನೈದು ದಿನಗಳ ಗಡುವು ನೀಡಿದರು