ನವದೆಹಲಿ –
ಏಳನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ ದೇಶಾದ್ಯಂತ ಸರ್ಕಾರಿ ನೌಕರರು ಶೀಘ್ರದಲ್ಲೇ ಒಳ್ಳೆಯ ಸುದ್ದಿ ಪಡೆಯಬಹುದು ಹೌದು ಕೇಂದ್ರ ಸರ್ಕಾರವು ಕೇಂದ್ರ ಮತ್ತು ರಾಜ್ಯ ನೌಕರರ ಫಿಟ್‌ಮೆಂಟ್ ಅಂಶದಲ್ಲಿ ಹೆಚ್ಚಳ ವನ್ನ ಶೀಘ್ರದಲ್ಲೇ ಘೋಷಿಸಲಿದೆ.ಇನ್ನೂ ಫಿಟ್‌ಮೆಂಟ್ ಅಂಶದ ಹೆಚ್ಚಳವು ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನದಲ್ಲಿ ಹೆಚ್ಚಳಕ್ಕೆ ಕಾರಣವಾಗುತ್ತಿದ್ದು ಫಿಟ್‌ಮೆಂಟ್ ಅಂಶವನ್ನು 2.57 ಪಟ್ಟು ಹೆಚ್ಚಿಸಿ 3.68 ಪಟ್ಟು ಹೆಚ್ಚಿಸ ಬೇಕು ಎಂದು ಹಲವು ಕೇಂದ್ರ ಸರ್ಕಾರಿ ನೌಕರರ ಸಂಘ ಗಳು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದು ಅಧಿಕೃತವಾಗಿ ಘೋಷಣೆಯೊಂದೇ ಬಾಕಿ ಇದೆ.
ಕನಿಷ್ಠ ವೇತನವನ್ನು 18,000 ರೂ.ನಿಂದ 26,000 ರೂ.ಗೆ ಹೆಚ್ಚಿಸಬೇಕು ಎಂದು ನೌಕರರ ಸಂಘಟನೆಗಳು ಒತ್ತಾಯಿ ಸುತ್ತಿವೆ. ಫಿಟ್‌ಮೆಂಟ್ ಅಂಶವನ್ನ ಹೆಚ್ಚಿಸುವ ಬಗ್ಗೆ ಸರ್ಕಾರ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತದೆ ಎಂದು ವರದಿಗಳಲ್ಲಿ ಹೇಳಲಾಗಿದೆ.ವಾಸ್ತವವಾಗಿ,ಫಿಟ್‌ಮೆಂಟ್ ಅಂಶದ ಹೆಚ್ಚಳದಿಂದಾಗಿ, ಸರ್ಕಾರಿ ನೌಕರರ ಕನಿಷ್ಠ ವೇತನವೂ ಹೆಚ್ಚಾಗುತ್ತದೆ. ಪ್ರಸ್ತುತ, ಉದ್ಯೋಗಿಗಳು ಫಿಟ್‌ಮೆಂಟ್ ಅಂಶದ ಅಡಿಯಲ್ಲಿ ಶೇಕಡಾ 2.57 ರ ಆಧಾರದ ಮೇಲೆ ವೇತನವನ್ನು ಪಡೆಯುತ್ತಿದ್ದಾರೆ.
ಫಿಟ್‌ಮೆಂಟ್ ಅಂಶವನ್ನು ಶೇಕಡಾ 3.68 ಕ್ಕೆ ಹೆಚ್ಚಿಸಿದಾಗ, ಸರ್ಕಾರಿ ನೌಕರರ ಕನಿಷ್ಠ ವೇತನವು 8,000 ರೂ.ಗಳಷ್ಟು ಹೆಚ್ಚಾಗುತ್ತದೆ. ಅದು 18,000 ರೂ.ನಿಂದ 26,000 ರೂ. ಆಗಿದೆ. ಇದಲ್ಲದೆ ಸರ್ಕಾರಿ ನೌಕರರ ಮೂಲ ವೇತನದಲ್ಲಿ ಹೆಚ್ಚಳವಾದ್ರೆ, ತುಟ್ಟಿಭತ್ಯೆ (ಡಿಎ) ಮೊತ್ತವೂ ಸ್ವಯಂಚಾಲಿ ತವಾಗಿ ಹೆಚ್ಚಾಗುತ್ತದೆ. ಪ್ರಸ್ತುತ ಮೂಲ ವೇತನದ ಶೇ.31 ರಷ್ಟು ಡಿಎ ಇದೆ. ಮೂಲ ವೇತನ 26,000 ರೂ.ಗೆ ಏರಿಕೆ ಯಾದರೆ ಅದಕ್ಕೆ ತಕ್ಕಂತೆ ಡಿಎ ಕೂಡ ದೊರೆಯಲಿದೆ. ಇಂತಹ ಪರಿಸ್ಥಿತಿಯಲ್ಲಿ ಮೂಲ ವೇತನ ಹೆಚ್ಚಳದಿಂದ ಸರಕಾರಿ ನೌಕರರ ಮಾಸಿಕ ಆದಾಯದಲ್ಲಿ ಗಣನೀಯ ಏರಿಕೆಯಾಗಲಿದೆ.