ಅನಗತ್ಯ 2 ಸಾವಿರಕ್ಕೂ ಹೆಚ್ಚು ಅಧಿಕಾರಿಗಳಿಗೆ ಕೊಕ್ ನೀಡಿದ ರಾಜ್ಯ ಸರ್ಕಾರ – ಅಧಿಕಾರಿಗಳಿಗೆ ಶಾಕ್ ನೀಡಿದ ಸಂಪುಟ ಉಪಸಮಿತಿ ಶಿಫಾರಸು ವರದಿ

Suddi Sante Desk
ಅನಗತ್ಯ 2 ಸಾವಿರಕ್ಕೂ ಹೆಚ್ಚು ಅಧಿಕಾರಿಗಳಿಗೆ ಕೊಕ್ ನೀಡಿದ ರಾಜ್ಯ ಸರ್ಕಾರ – ಅಧಿಕಾರಿಗಳಿಗೆ ಶಾಕ್ ನೀಡಿದ ಸಂಪುಟ ಉಪಸಮಿತಿ ಶಿಫಾರಸು ವರದಿ

ಬೆಂಗಳೂರು

 

ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆಗಳ ಸಚಿವಾಲಯ ಮಟ್ಟದ ಉನ್ನತ ಹಾಗೂ ಹಿರಿಯ ಶ್ರೇಣಿಯ ಎರಡು ಸಾವಿರ ಹುದ್ದೆಗಳನ್ನು ರದ್ದು ಪಡಿಸಲು ಸಚಿವ ಸಂಪುಟದ ಉಪಸಮಿತಿ ಶಿಫಾರಸು ಮಾಡಿದೆ.ವಿಧಾನಸೌಧ ಸಮಿತಿ ಕೊಠಡಿಯಲ್ಲಿ ಕಂದಾಯ ಸಚಿವ ಆರ್.ಅಶೋಕ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಚಿವ ಸಂಪುಟದ ಉಪಸಮಿತಿಯು ಈ ಪ್ರಮುಖ ನಿರ್ಣಯ ತೆಗೆದು ಕೊಂಡು ಆಡಳಿತ ಸುಧಾರಣೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಟ್ಟಿದೆ.

 

ಆಧುನಿಕ ತಂತ್ರಜ್ಞಾನ ಬಳಕೆ, ಗಣಕೀಕರಣ, ಆನ್ ಲೈನ ಸೇವೆ, ಹೊಸ ಆವಿಷ್ಕಾರಗಳಿಂದ ಕನಿಷ್ಠ ಸರ್ಕಾರಗರಿಷ್ಠ ಆಡಳಿತ’ಕ್ಕೆ ಒತ್ತು ನೀಡಲಾಗುತ್ತಿದೆ ಜೊತೆಗೆ ಎಲ್ಲಾ ಆಯಾಮದಿಂದಲೂ ‘ಜನೋ ಪಯೋಗಿ’ಯಾಗುವ ನಿಟ್ಟಿನಲ್ಲಿ ಮುಂದುವರಿ ಯಲಿದೆ. ಕೆಲಸದ ಅಗತ್ಯಕ್ಕಿಂತಲೂ ಅಧಿಕಾರಿಗಳ ಅವಶ್ಯಕತೆಗೆ ತಕ್ಕಂತೆ ಉನ್ನತ, ಹಿರಿಯ ಅಧಿಕಾರಿ ಗಳ ಹುದ್ದೆಗಳು ಸೃಜನೆಯಾಗಿವೆ. ಆಡಳಿತ ಇಲಾಖೆಗಳ ಕಚೇರಿಗಳಲ್ಲಿ ಕಾಲಾಳುಗಿಂತ ಮೇಲಾಳು ಜಾಸ್ತಿಯಾಗಿದೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಉಪಸಮಿತಿ ಶಿಫಾರಸುಗಳನ್ನು ಮಾಡಿದೆ

 

ಕೃಷಿ, ರೇಷ್ಮೆ ಹಾಗೂ ತೋಟಗಾರಿಕೆ ಇಲಾಖೆ ಗಳಲ್ಲಿನ ಸಚಿವಾಲಯ ಮಟ್ಟದ, ಉನ್ನತ ಅಧಿಕಾರಿಗಳ ಹುದ್ದೆಗಳನ್ನು ತೆಗೆದುಹಾಕಿ, ಕೆಲಸಕ್ಕೆ ಅನುಗುಣವಾಗಿ ಕೆಳಹಂತದ ಸಿಬ್ಬಂದಿ ಮುಂದು ವರಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ.ಆದೇಶ ಪಾಲಿಸುವ ಸಿಬ್ಬಂದಿ ಬದಲಿಗೆ ಆದೇಶ ಹೊರಡಿಸುವ ಅಧಿಕಾರಿಗಳ ಹುದ್ದೆಗಳ ರದ್ಧತಿಯಿಂದ ಬೊಕ್ಕಸಕ್ಕೆ ಕೋಟ್ಯಂತರ ರೂ. ಉಳಿತಾಯವಾಗಲಿದೆ.

 

ಅಲ್ಲದೆ, ಈ ಹಣವನ್ನು ಅಭಿವೃದ್ಧಿ ಕೆಲಸಗಳಿಗೆ ಬಳಸಿಕೊಳ್ಳಲು ಸಾಧ್ಯವಾಗಲಿದೆ. ರಾಜ್ಯ ಸರ್ಕಾರಿ ನೌಕರರ ಆರನೇ ವೇತನ ಆಯೋಗ ಮತ್ತು ನಿವೃತ್ತ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರ ಆಡಳಿತ ಸುಧಾರಣೆ ವರದಿ-2ರ ಶಿಫಾರಸುಗಳು ಅನಗತ್ಯ ವಿಳಂಬ ತಪ್ಪಿಸಲು ಏನೆಲ್ಲ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದೆ. ಈ ನಿಟ್ಟಿನಲ್ಲಿ ಹಂತ ಹಂತವಾಗಿ ಹುದ್ದೆಗಳ ರದ್ದು ಇಲಾಖೆಗಳ ವಿಲೀನ ಪ್ರಕ್ರಿಯೆ ಮುಂದುವರಿಕೆ ಭಾಗವಾಗಿ ಪ್ರಮುಖ ತೀರ್ವನಗಳನ್ನು ತೆಗೆದು ಕೊಳ್ಳಲಾಗಿದೆ. ಇದಕ್ಕೆಲ್ಲ ಒಪ್ಪಿಗೆ ಕೋರಿ ಸಚಿವ ಸಂಪುಟ ಸಭೆಗೆ ಉಪಸಮಿತಿ ಶಿಫಾರಸು ಮಾಡಲಿದೆ ಎಂದು ಮೂಲಗಳು ಮಾಹಿತಿ ನೀಡಿವೆ ಕಾರ್ಯಾಂಗದಲ್ಲಿ ದಕ್ಷತೆ, ಪರಿಣಾಮ ಕಾರಿ ಅಭಿವೃದ್ಧಿ

 

ಅನಗತ್ಯ ವೆಚ್ಚಕ್ಕೆ ಕಡಿವಾಣ, ಕಾರ್ಯಭಾರ ಇಲ್ಲದಿದ್ದರೂ ಸೃಜಿಸಿದ ಉನ್ನತ ಹುದ್ದೆಗಳ ರದ್ದು ಇವೆಲ್ಲ ಆಡಳಿತ ಸುಧಾರಣೆ ಭಾಗವಾಗಿವೆ ಈ ನಿಟ್ಟಿನಲ್ಲಿ ಕೈಗೊಂಡ ತೀರ್ಮಾನಗಳ ಪ್ರಸ್ತಾವನೆ ಯನ್ನು ಸಚಿವ ಸಂಪುಟ ಸಭೆ ಮುಂದಿಡಲಾಗು ವುದು ಎಂಬ ಮಾತನ್ನು ಸಚಿವ ಆರ್ ಅಶೋಕ್ ಹೇಳಿದರು.ಸಾಮಾಜಿಕ ಅರಣ್ಯ ಇಲಾಖೆ ವಿಲೀನದ ಬಗ್ಗೆ ಗಂಭೀರ ಚರ್ಚೆಯಾಗಿದ್ದು ಒಮ್ಮತ ಮೂಡದ ಕಾರಣ ಸಾಧಕ-ಬಾಧಕ ಪರಾಮಶಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸಚಿವ ಸಂಪುಟದ ಉಪಸಮಿತಿ ಸೂಚಿಸಿದೆ ಮಲೆನಾಡು, ಕರಾವಳಿ ಮುಂತಾದ ದಟ್ಟ ಅರಣ್ಯ ವಿರುವ ಜಿಲ್ಲೆಗಳಲ್ಲಿ ಅರಣ್ಯ ಸಂರಕ್ಷಣಾ ಇಲಾಖೆ ಮುಂದುವರಿಸಿ ಸಾಮಾಜಿಕ ಅರಣ್ಯ ತೆಗೆದು ಹಾಕುವುದು.

 

ಉಳಿದ ಜಿಲ್ಲೆಗಳಲ್ಲಿ ಜಿಲ್ಲಾ, ತಾಲೂಕು ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಕೈಬಿಟ್ಟು ಸಾಮಾಜಿಕ ಅರಣ್ಯ ಇಲಾಖೆ ಮುಂದುವರಿಸುವುದು ಈ ಚರ್ಚೆಯ ಮುಖ್ಯಾಂಶವಾಗಿತ್ತು ಎಂದು ಮೂಲ ಗಳು ತಿಳಿಸಿವೆ.ಐಎಫ್ಎಸ್ ಸಂಖ್ಯೆ ಕಡಿತ ರಾಜ್ಯದಲ್ಲಿ 150 ಭಾರತೀಯ ಅರಣ್ಯ ಸೇವೆ ಅಧಿಕಾರಿಗಳು ಸೇವೆ ಸಲ್ಲಿಸುತ್ತಿದ್ದು ಈ ಸಂಖ್ಯೆ ಯನ್ನು ಕಡಿತಗೊಳಿಸಲು ಸಮಿತಿ ಸಭೆ ಗಂಭೀರ ಚಿಂತನೆ ನಡೆಸಿದೆ. ಹೆಚ್ಚುವರಿ ಅಧಿಕಾರಿಗಳನ್ನು ಕೇಂದ್ರ ಸೇವೆಗೆ ಮರಳಿಸುವ ವಿಚಾರವನ್ನು ಮತ್ತೊಂದು ಸುತ್ತಿನ ಸಭೆಯಲ್ಲಿ ಅಂತಿಮಗೊಳಿ ಸಲು ನಿರ್ಧರಿಸಿದೆ. ವರ್ಷಕ್ಕೆ ಐದಾರು ಮೇಲ್ಮನ ವಿಗಳ ವಿಚಾರಣೆಗಾಗಿ 4 ಕಂದಾಯ ವಿಭಾಗಗಳ ಲ್ಲಿನ ಪ್ರಾದೇಶಿಕ ಆಯುಕ್ತರ (ಆರ್ಸಿ) ಕಚೇರಿ ಮುಂದುವರಿಸುವ ಔಚಿತ್ಯವೂ ಮತ್ತೆ ಪ್ರಸ್ತಾಪವಾ ಗಿದೆ 4 ಪ್ರಾದೇಶಿಕ ಅಯುಕ್ತರ ಕಚೇರಿಗಳನ್ನು ಮುಚ್ಚಿದರೆ ಒಟ್ಟು ಮಂಜೂರಾದ 549 ಅಧಿಕಾರಿ ಸಿಬ್ಬಂದಿ ಹುದ್ದೆಗಳು ಕಂದಾಯ ಇಲಾಖೆಯಲ್ಲಿ ವಿಲೀನವಾಗಲಿವೆ.

 

ಶಿಕ್ಷಣ ಇಲಾಖೆಯಲ್ಲಿ ಮುದ್ರಣ ಲೇಖನ ಸಾಮಗ್ರಿ ಪ್ರಕಟಣೆ ಇಲಾಖೆ ಪ್ರವಾಸೋದ್ಯಮ ಇಲಾಖೆ ಯಲ್ಲಿ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕೃಷಿ ಇಲಾಖೆಯಡಿ ಬರುವ ಮೈಸೂರು ತಂಬಾಕು ಕಂಪನಿ, ಕರ್ನಾಟಕ ಕೃಷಿ ಕೈಗಾರಿಕಾ ನಿಗಮ, ಕರ್ನಾಟಕ ಆಹಾರ ನಿಗಮ ರೇಷ್ಮೆ ಬೆಳೆಯದ ಜಿಲ್ಲೆಗಳಲ್ಲಿನ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳ ಹುದ್ದೆಗಳು.ಕೆಳಹಂತದ ಸಿಬ್ಬಂದಿ ಕೃಷಿ ಇಲಾಖೆಗೆ ಹಸ್ತಾಂತರ ಬೆಂಗಳೂರು ಸುತ್ತಮುತ್ತಲಿನ ನೆಲಮಂಗಲ,ಮಾಗಡಿ, ರಾಮ ನಗರ, ಚನ್ನಪಟ್ಟಣ, ಕನಕಪುರ, ಬೆಂಗಳೂರು ಏರ್ಪೋರ್ಟ್ ಸೇರಿ 10 ಯೋಜನಾ ಪ್ರಾಧಿಕಾ ರಗಳ ರದ್ದು ಪ್ರತಿ ಜಿಲ್ಲೆಗೆ ಒಂದು ಯೋಜನಾ ಪ್ರಾಧಿಕಾರ ರಚನೆ ಮಾಡಲಾಗುತ್ತಿದೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.